ಲಿಫ್ಟ್ ಕೊಡುವ ನೆಪದಲ್ಲಿ ಬಾಲಕನಿಗೆ ಬಿಜೆಪಿ ಕಾರ್ಯಕರ್ತನಿಂದ ಲೈಂಗಿಕ ಕಿರುಕುಳ

ಬೈಕ್‌ನಲ್ಲಿ ಲಿಫ್ಟ್ ಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕನಿಗೆ ಕಿರುಕುಳ ನೀಡಿದ 47 ವರ್ಷದ ಬಿಜೆಪಿ ಕಾರ್ಯಕರ್ತನನ್ನು ತಮಿಳುನಾಡಿನ ವಿಲ್ಲಿವಕ್ಕಂ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಬಾಲಚಂದ್ರನ್ ಎಂದು ಗುರುತಿಸಲಾದ ಬಿಜೆಪಿ ಕಾರ್ಯಕರ್ತ ಅಪ್ರಾಪ್ತ ಬಾಲಕನಿಗೆ ಲಿಫ್ಟ್ ನೀಡಿ ಪಾಡಿ ಸೇತುವೆಯ ಕೆಳಗಿರುವ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಕ ಹೇಳಿದ್ದಾನೆ.

ಬೈಕ್‌ನಿಂದ ಕೆಳಗಿಳಿದ ಬಾಲಕ ಅಳುತ್ತಿದ್ದುದನ್ನು ವಿಲ್ಲಿವಕ್ಕಂನ ಸ್ಥಳೀಯರು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಯಾಕೆ ಅಳುತ್ತಿದ್ದೀಯ ಎಂದು ಬಾಲಕನನ್ನು ಸ್ಥಳೀಯರು ವಿಚಾರಿಸಿದಾಗ, ತಾನು ಬಾಲಚಂದ್ರನ್‌ ಬಳಿ ಲಿಫ್ಟ್ ಕೇಳಿದ್ದಾಗಿ ಬಳಿಕ ಆತ ತನ್ನನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಕಿರುಕುಳ ನೀಡಿದ್ದಾಗಿ ಬಾಲಕ ಹೇಳಿದನು. ನಂತರ ಬಾಲಕನಿಗೆ ಕಿರುಕುಳ ನೀಡಿದ್ದಕ್ಕಾಗಿ ಆತನನ್ನು ಸಾರ್ವಜನಿಕರು ಹಿಡಿದರು. ಈ ವೇಳೆ ಬಾಲಚಂದ್ರನ್ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದಾಗ ಸಾರ್ವಜನಿಕರು ಅವನನ್ನು ತಡೆದು ಹಿಡಿದರು.

ಈ ವೇಳೆ ಆತನ ವಾಹನ ತಪಾಸಣೆ ನಡೆಸಿದಾಗ ಬಿಜೆಪಿ ಪಕ್ಷದ ಧ್ವಜ ಮತ್ತು ಗುರುತಿನ ಚೀಟಿ ಸಿಕ್ಕಿದ್ದು, ಆತ ಪಕ್ಷದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಎಂಬುದು ಸಾಬೀತಾಗಿದೆ. ಘಟನೆ ಬಳಿಕ ಬಿಜೆಪಿ ಕಾರ್ಯಕರ್ತ ಬಾಲಚಂದ್ರನ್ ನನ್ನು ಸ್ಥಳೀಯರು ಬಿಟ್ಟು ಕಳುಹಿಸಿದ್ದರು. ಮಗುವಿನ ತಾಯಿ ನೀಡಿದ ದೂರಿನ ನಂತರ ವಿಲ್ಲಿವಕ್ಕಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಾಗ ಅವರನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read