HomeIndiaತಮಿಳುನಾಡು ಚುನಾವಣೆ: ಒಂದೇ ಪಕ್ಷಕ್ಕೆ ಬಹುಮತ ಹೇಳಿಕೆ ತಳ್ಳಿ ಹಾಕಿದ ಬಿಜೆಪಿ

ತಮಿಳುನಾಡು ಚುನಾವಣೆ: ಒಂದೇ ಪಕ್ಷಕ್ಕೆ ಬಹುಮತ ಹೇಳಿಕೆ ತಳ್ಳಿ ಹಾಕಿದ ಬಿಜೆಪಿ

ತಮಿಳುನಾಡು ವಿಧಾನಸಭೆ ಚುನಾವಣೆ 2026ರ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. 234 ಸದಸ್ಯ ಬಲದ ವಿಧಾನಸಭೆಗೆ ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ನಟ ವಿಜಯ್ ರಾಜ್ಯ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದು, ಚುನಾವಣಾ ದಿಕ್ಕನ್ನು ಬದಲಾವಣೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.

ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದ್ದ ನಟ ವಿಜಯ್ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ವಿಜಯ್, “ಚುನಾವಣೆಯಲ್ಲಿ ಡಿಎಂಕೆಗೆ ತಾನೇ ಏಕೈಕ ಪ್ರತಿಸ್ಪರ್ಧಿ” ಎಂದು ಹೇಳಿದ್ದರು. ತಮಿಳುನಾಡು ಬಿಜೆಪಿ ಈ ಹೇಳಿಕೆಯನ್ನು ತಿರಸ್ಕರಿಸಿದ್ದು, “ಅನುಭವದ ಕೊರತೆ” ಎಂದು ಟೀಕಿಸಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್, “ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವು ಜಯಭೇರಿ ಬಾರಿಸಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುವುದಾಗಿ” ವಿಜಯ್ ನೀಡಿದ್ದ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ರಾಜ್ಯದಲ್ಲಿ ಆಡಳಿತಾರೂಢ ಡಿಎಂಕೆಗೆ ತನ್ನ ಪಕ್ಷವೇ ಏಕೈಕ ಪ್ರತಿಸ್ಪರ್ಧಿ ಎಂದು ಹೇಳಿಕೊಂಡಿರುವ ನಟನೆಯಿಂದ ರಾಜಕೀಯಕ್ಕೆ ಬಂದಿರುವ ವಿಜಯ್ ಅವರಿಗೆ ಸಂಪೂರ್ಣ ಅನುಭವದ ಕೊರತೆಯಿದೆ” ಎಂದು ಟೀಕಿಸಿದ್ದಾರೆ.

“ಕೋಳಿ ಹಿಡಿಯಲಾಗದವನು ವೈಕುಂಠಕ್ಕೆ ಏರಲಾರ” ಎಂದು ವ್ಯಂಗ್ಯ ವಿಜಯ್ ವ್ಯಂಗ್ಯವಾಡಿರುವ ಬಿಜೆಪಿ, “ಈ ನಟ-ರಾಜಕಾರಣಿ ಸಂಪೂರ್ಣ ಅನುಭವವಿಲ್ಲದವರು” ಎಂದು ಕರೆಯುವ ಮೂಲಕ ಟೀಕಾಪ್ರಹಾರ ಮಾಡಿದೆ.

ನೈನಾರ್ ನಾಗೇಂದ್ರನ್ ಇಂಡಿಯಾ ಟುಡೇ ಜೊತೆ ಮಾತನಾಡಿ, “ಚಾವಣಿಯ ಮೇಲೆ ಹತ್ತಿ ಒಂದು ಕೋಳಿಯನ್ನು ಹಿಡಿಯಲು ಸಾಧ್ಯವಾಗದವನು, ಆಕಾಶವನ್ನೇ ಏರಿ ವೈಕುಂಠವನ್ನು ತಲುಪುವ ಕನಸು ಕಾಣಬಾರದು” ಎಂದು ವ್ಯಂಗ್ಯವಾಡಿದರು.

“ಪಾಪ, ಅವರಿಗೆ ಸಂಪೂರ್ಣವಾಗಿ ಅನುಭವದ ಕೊರತೆಯಿದೆ. ಮೊದಲು ಅವರು ತಮ್ಮ ಮನೆಯಿಂದ ಹೊರಗೆ ಬರಬೇಕು. ಮನೆಯಿಂದ ಹೊರಗೆ ಬಂದರಷ್ಟೇ ಏನಾದರೂ ಆಗಲು ಸಾಧ್ಯ” ಎಂದು ಸಲಹೆ ನೀಡಿದರು.

“ಹಿರಿಯ ನಾಯಕರ ನೇತೃತ್ವ ಬೇಕು. ಚಳುವಳಿಗಳು, ಇತಿಹಾಸದ ಕುರಿತು ಸರಿಯಾದ ಅರಿವು ಹೊಂದಿರಬೇಕು. ಟಿವಿಕೆ ಪಕ್ಷ ಒಂದು ಕ್ಷೇತ್ರವನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ” ಎಂದು ನೈನಾರ್ ನಾಗೇಂದ್ರನ್ ಚುನಾವಣೆ ಕುರಿತು ಭವಿಷ್ಯ ಹೇಳಿದ್ದಾರೆ.

ಕಳೆದ ವರ್ಷ ನಡೆಸಿದ ಟಿವಿಕೆ ಆಂತರಿಕ ಸಮೀಕ್ಷೆ ವರದಿ ಪ್ರಕಾರ 2026ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಶೇ. 30ಕ್ಕಿಂತ ಹೆಚ್ಚು ಮತಗಳನ್ನು ಪಡೆಯಲಿದೆ ಎಂದು ಹೇಳಿಕೊಂಡಿತ್ತು.

41,453 ಜನರ ಮಾದರಿ ಸಮೀಕ್ಷೆಯನ್ನು ಒಳಗೊಂಡ ಪಕ್ಷದ ಆಂತರಿಕ ಸಮೀಕ್ಷೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಶೇ. 32.9 ರಷ್ಟು ಮತಗಳೊಂದಿಗೆ ಗೆಲ್ಲುವ ನೆಚ್ಚಿನ ಪಕ್ಷವಾಗಿತ್ತು.

ಆದರೆ ನಟ ವಿಜಯ್ ಅವರ ಪಕ್ಷ ಶೇ. 31.7 ರಷ್ಟು ಮತ್ತು ಎಐಎಡಿಎಂಕೆ-ಬಿಜೆಪಿ ಶೇ. 27.3ರಷ್ಟು ಮತಗಳನ್ನು ಪಡೆಯಲಿವೆ. ಉಳಿದ ಶೇ. 8.1 ರಷ್ಟು ಮತಗಳನ್ನು ಇತರ ಪಕ್ಷಗಳು ಪಡೆಯಲಿವೆ ಎಂದು ವರದಿ ಹೇಳಿತ್ತು.

ವಿಜಯ್ ಅವರು ಮೊದಲು ಮನೆಯಿಂದ ಹೊರಬಂದು ತಳಮಟ್ಟದಲ್ಲಿ ಕೆಲಸ ಮಾಡಬೇಕು. ಕೇವಲ ನಟ ಎಂಬ ಕಾರಣಕ್ಕೆ ಅವರು ಇಂತಹ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ. ಕೇವಲ ನಟನಾದ ತಕ್ಷಣ ತನಗೆ ಶೇ. 32 ರಷ್ಟು ಮತಗಳಿವೆ ಎಂದು ಅವರು ಹೇಗೆ ಹೇಳಲು ಸಾಧ್ಯ? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular