HomeKarnatakaBREAKING : ಹಾಸನದಲ್ಲಿ ಮದುವೆಗೆ ಹೋದ ಮಹಿಳೆ ನಾಪತ್ತೆ  : ಅತ್ಯಾಚಾರ ಎಸಗಿ ಹತ್ಯೆಗೈದಿರುವ ಶಂಕೆ...

BREAKING : ಹಾಸನದಲ್ಲಿ ಮದುವೆಗೆ ಹೋದ ಮಹಿಳೆ ನಾಪತ್ತೆ  : ಅತ್ಯಾಚಾರ ಎಸಗಿ ಹತ್ಯೆಗೈದಿರುವ ಶಂಕೆ !

ಹಾಸನ: ಮದುವೆಗೆಂದು ತೆರಳಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದ ಪ್ರಕರಣವು ಈಗ ಅತ್ಯಂತ ಭಯಾನಕ ತಿರುವು ಪಡೆದುಕೊಂಡಿದೆ. ನಾಪತ್ತೆಯಾದ ಪ್ರಿಯಾಂಕಾ ಎಂಬುವವರನ್ನು ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ ಎಂದು ಅವರ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.

ಮೂಲತ ತುಮಕೂರು ಜಿಲ್ಲೆ  ಕುಣಿಗಲ್ ನಿವಾಸಿಯಾದ ಪ್ರಿಯಾಂಕಾ ಅವರು ಚಿಕ್ಕಮಗಳೂರಿನಲ್ಲಿ ಮದುವೆ ಮುಗಿಸಿ ಮನೆಗೆ ಹೊರಟಿದ್ದರು ನಂತರ ಹಾಸನದ ಬೇಲೂರಿನಲ್ಲಿ ನಾಪತ್ತೆಯಾಗಿದ್ದಾರೆ. ಮದುವೆಗೆ ಹೋಗುವಾಗ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಧರಿಸಿದ್ದರು ಎನ್ನಲಾಗಿದೆ.

ಸ್ಥಳೀಯ ಕೆರೆಯ ಬಳಿ ತಪಾಸಣೆ ನಡೆಸಿದಾಗ ಪ್ರಿಯಾಂಕಾ ಅವರ ಚಪ್ಪಲಿ, ಉಡುಪು ಮತ್ತು ಬ್ಯಾಗ್ ಪತ್ತೆಯಾಗಿವೆ. ಈ ಕುರುಹುಗಳು ಸಿಕ್ಕ ಬೆನ್ನಲ್ಲೇ ಪ್ರಕರಣವು ಮತ್ತಷ್ಟು ನಿಗೂಢತೆಯನ್ನು ಪಡೆದುಕೊಂಡಿದೆ. ದುಷ್ಕರ್ಮಿಗಳು ಮಹಿಳೆಯ ಮೇಲಿನ ಆಭರಣಗಳನ್ನು ದೋಚುವ ಉದ್ದೇಶದಿಂದ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಬಂಧಿಕರ ಆಕ್ರೋಶ ಮತ್ತು ಶಂಕೆ:

ಪ್ರಿಯಾಂಕಾ ಮೇಲೆ ಅತ್ಯಾಚಾರ (ರೇಪ್) ನಡೆಸಿ, ಬಳಿಕ ಕೊಲೆ (ಮರ್ಡರ್) ಮಾಡಿ ಸಾಕ್ಷ್ಯ ನಾಶಪಡಿಸಲು ಶವವನ್ನು ಕೆರೆಗೆ ಎಸೆದಿರಬಹುದು” ಎಂದು ಕುಟುಂಬಸ್ಥರು ದೂರಿದ್ದಾರೆ. ಅಮೂಲ್ಯವಾದ ಚಿನ್ನಾಭರಣಗಳನ್ನು ದೋಚುವುದೇ ಈ ಕ್ರೂರ ಕೃತ್ಯದ ಹಿಂದಿನ ಮುಖ್ಯ ಉದ್ದೇಶವಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ತೀವ್ರಗೊಂಡ ಶೋಧ ಕಾರ್ಯ

ಪ್ರಿಯಾಂಕಾ ಅವರ ಶವ ಕೆರೆಯಲ್ಲಿರಬಹುದು ಎಂಬ ಶಂಕೆಯ ಮೇರೆಗೆ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಕೆರೆಯಲ್ಲಿ ಶವಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.ಅದೇನೆ ಇರಲಿ ತನಿಖೆಯಿಂದಷ್ಟೇ  ಪ್ರಿಯಾಂಕಾ ಸಾವಿನ ರಹಸ್ಯ ಬಯಲಾಗಬೇಕಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular