HomeEntertainment'ತಾಜ್' ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

‘ತಾಜ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಷಣ್ಮುಖ ಜೈ ಅಭಿನಯದ ಬಿ ರಾಜರತ್ನ ನಿರ್ದೇಶನದ ‘ತಾಜ್’ ಚಿತ್ರದ ‘ನನ್ನನೆ ನನ್ನಲ್ಲಿ’ ಎಂಬ ಲಿರಿಕಲ್ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಚೈತ್ರ ಎಚ್ ಜಿ ಈ ಹಾಡಿಗೆ ಧ್ವನಿಯಾಗಿದ್ದು, ನಿರ್ದೇಶಕ ಬಿ ರಾಜರತ್ನ ಅವರ ಸಂಗೀತ ಹಾಗೂ ಸಾಹಿತ್ಯವಿದೆ.

ಈ ಚಿತ್ರವನ್ನು ಶ್ರೀ ಪಾವನಿ ಲಕ್ಷ್ಮಿ ಕಂಬೈನ್ಸ್ ಬ್ಯಾನರ್ ನಲ್ಲಿ ಶ್ರೀಮತಿ ಲಕ್ಷ್ಮಿ ಷಣ್ಮುಖ ಹಾಗೂ ಯರಂಗಳ್ಳಿ ಮರಿಯಮ್ಮ ನಿರ್ಮಾಣ ಮಾಡಿದ್ದು, ಷಣ್ಮುಖ ಜೈ ಮತ್ತು ಅಪ್ಸರಾ ರೈ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪದ್ಮಾ ವಾಸಂತಿ, ಶೋಬರಾಜ್, ಬಾಲರಾಜ್ ವಾಡಿ, ಪಟ್ರೆ ನಾಗರಾಜ್, ವರ್ಧನ್, ಸೂರಜ್, ಕಡ್ಡಿ ವಿಶ್ವ, ಮೈಸೂರು ಜಗದೀಶ್, ಉಳಿದ ಪಾತ್ರವರ್ಗದಲ್ಲಿದ್ದಾರೆ. ಶ್ರೀ ಜವಳಿ ಅವರ ಸಂಕಲನ, ಚಂದ್ರು ಬಂಡೆ ಸಾಹಸ ನಿರ್ದೇಶನ, ಹಾಗೂ ಜೈ ಆರ್ಯ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular