HomeLive Newsಟಿ20 ವಿಶ್ವಕಪ್ ಇಂದು ನ್ಯೂಜಿಲ್ಯಾಂಡ್ ಹಾಗೂ ಪಿ ಎನ್ ಜಿ ಮುಖಾಮುಖಿ

ಟಿ20 ವಿಶ್ವಕಪ್ ಇಂದು ನ್ಯೂಜಿಲ್ಯಾಂಡ್ ಹಾಗೂ ಪಿ ಎನ್ ಜಿ ಮುಖಾಮುಖಿ

ಈ ಬಾರಿ  ಟಿ20 ವಿಶ್ವಕಪ್ ನಲ್ಲಿ ಬಲಿಷ್ಠ ತಂಡಗಳಾದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಸೂಪರ್ 8 ಸ್ಥಾನವನ್ನು ಕಳೆದುಕೊಂಡಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ  ಆಶ್ಚರ್ಯ ಮೂಡುವಂತೆ ಮಾಡಿದೆ. ನಿನ್ನೆಯಷ್ಟೇ ಪಾಕಿಸ್ತಾನ ತಂಡ ತನ್ನ ಕೊನೆಯ ಪಂದ್ಯದಲ್ಲಿ ಐರ್ಲ್ಯಾಂಡ್ ಎದುರು ಮೂರು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದೆ.

ಇಂದು ನ್ಯೂಜಿಲ್ಯಾಂಡ್ ಮತ್ತು ಪಿ ಏನ್ ಜಿ  ಮುಖಾಮುಖಿಯಾಗಲಿದ್ದು, ತನ್ನ ಕೊನೆಯ ಪಂದ್ಯವನ್ನಾಡಲು ನ್ಯೂಜಿಲ್ಯಾಂಡ್ ಸಜ್ಜಾಗಿದೆ. ಟಿ ಟ್ವೆಂಟಿ ವಿಶ್ವಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದ ನ್ಯೂಜಿಲೆಂಡ್ ತಂಡ ಅಫ್ಘಾನಿಸ್ತಾನದ ಎದುರು ಸೋಲು ಕಂಡಿದ್ದೆ ಮುಳುವಾಗಿದೆ. ನಾಳೆ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಆಫ್ಘಾನಿಸ್ತಾನ ತಂಡ ಕಾದಾಡಲಿವೆ.

For Latest News Updates, Join Our Whatsapp Community🚩
RELATED ARTICLES

Most Popular