HomeLatest NewsT20 World Cup 2026: ಕಾಂಗರೂಗಳಿಗೆ ಭಾರೀ ಮುಖಭಂಗ; ಕ್ರಿಕೆಟ್ ಶಿಶು ಜಿಂಬಾಬ್ವೆ ಎದುರು ಸೋತ...

T20 World Cup 2026: ಕಾಂಗರೂಗಳಿಗೆ ಭಾರೀ ಮುಖಭಂಗ; ಕ್ರಿಕೆಟ್ ಶಿಶು ಜಿಂಬಾಬ್ವೆ ಎದುರು ಸೋತ ಬಲಿಷ್ಠ ಆಸ್ಟ್ರೇಲಿಯಾ!

ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 19ನೇ ಪಂದ್ಯದಲ್ಲಿ ಜಿಂಬಾಬ್ವೆ ಆಸ್ಟ್ರೇಲಿಯಾ ವಿರುದ್ಧ 23 ರನ್‌ಗಳ ಗೆಲುವನ್ನು ಸಾಧಿಸಿ ಬಲಿಷ್ಠ ಆಸ್ಟ್ರೇಲಿಯಾಗೆ ಮಣ್ಣುಮುಕ್ಕಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆರಿಸಿಕೊಂಡು ಜಿಂಬಾಬ್ವೆ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಜಿಂಬಾಬ್ವೆ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿ ಆಸ್ಟ್ರೇಲಿಯಾಗೆ 170 ರನ್‌ಗಳ ಸವಾಲಿನ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಆಸ್ಟ್ರೇಲಿಯಾ ಓವರ್‌ಗಳಲ್ಲಿ 19.3 ಓವರ್‌ಗಳಲ್ಲಿ 146 ರನ್‌ಗೆ ಆಲ್‌ಔಟ್ ಆಗಿದೆ.

ಜಿಂಬಾಬ್ವೆ ಇನ್ನಿಂಗ್ಸ್: ಪರ ಆರಂಭಿಕರಾಗಿ ಕಣಕ್ಕಿಳಿದ ಬ್ರಿಯಾನ್ ಬೆನೆಟ್ ಹಾಗೂ ತಡಿವಾನಶೆ ಮಾರುಮಾನಿ 61 ರನ್‌ಗಳ ಜತೆಯಾಟವನ್ನಾಡುವ ಮೂಲಕ ಒಳ್ಳೆಯ ಆರಂಭ ತಂದುಕೊಟ್ಟರು. ತಡಿವಾನಶೆ ಮಾರುಮಾನಿ 21 ಎಸೆತಗಳಲ್ಲಿ 7 ಬೌಂಡರಿ ಸಹಿತ 35 ರನ್ ಕಲೆಹಾಕಿದರೆ, ಕೊನೆಯವರೆಗೂ ಕಣದಲ್ಲಿದ್ದ ಬ್ರಿಯಾನ್ ಬೆನೆಟ್ 56 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿದರು. ಇನ್ನುಳಿದಂತೆ ರಯಾನ್ ಬರ್ಲ್ 30 ಎಸೆತಕ್ಕೆ 35 ರನ್ ಹಾಗೂ ನಾಯಕ ಸಿಕಂದರ್ ರಾಜಾ 13 ಎಸೆತಗಳಲ್ಲಿ ಅಜೇಯ 25 ರನ್ ಬಾರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಸ್ಟ್ರೇಲಿಯಾ ಪರ ಮಾರ್ಕಸ್ ಸ್ಟೊಯಿನಿಸ್ ಹಾಗೂ ಕ್ಯಾಮೆರಾನ್ ತಲಾ ಒಂದೊಂದು ವಿಕೆಟ್ ಪಡೆದರು.

ಆಸ್ಟ್ರೇಲಿಯಾ ಇನ್ನಿಂಗ್ಸ್: ಜಿಂಬಾಬ್ವೆ ನೀಡಿದ ಸವಾಲಿನ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೇವಲ 29 ರನ್‌ಗೆ ತನ್ನ 4 ವಿಕೆಟ್ ಕಳೆದುಕೊಂಡು ಭಾರೀ ಆಘಾತಕ್ಕೆ ಒಳಗಾಯಿತು. ಜೋಶ್ ಇಂಗ್ಲಿಸ್ 8, ಟ್ರಾವಿಸ್ ಹೆಡ್ 17, ಕೆಮರೂನ್ ಗ್ರೀನ್ ಡಕ್‌ಔಟ್ ಹಾಗೂ ಟಿಮ್ ಡೇವಿಡ್ ಡಕ್‌ಔಟ್ ಆದರು. ಹೀಗೆ ಆರಂಭಿಕ ಆಘಾತ ಅನುಭವಿಸಿದ ಆಸ್ಟ್ರೇಲಿಯಾಗೆ ಐದನೇ ವಿಕೆಟ್‌ಗೆ ಜತೆಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮ್ಯಾಟ್ ರೆನ್ಷಾ 77 ರನ್‌ಗಳ ಜತೆಯಾಟವನ್ನಾಡಿ ತಂಡವನ್ನು ಗೆಲುವಿನ ಕಡೆ ಕರದೊಯ್ದಿದ್ದರು. ಆದರೆ ಮ್ಯಾಕ್ಸ್‌ವೆಲ್ 31 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದ್ದರು. ನಂತರ ಕಣಕ್ಕಿಳಿದ ಮಾರ್ಕಸ್ ಸ್ಟೊಯಿನಿಸ್ ಕೇವಲ 6 ರನ್‌ಗೆ ವಿಕೆಟ್ ಒಪ್ಪಿಸಿದರೆ, ಬೆನ್ ಡ್ವಾರ್ಷಿಯಸ್ ಸಹ 6 ರನ್‌ಗೆ ಪೆವಿಲಿಯನ್ ಸೇರಿಕೊಂಡರು. ಬೆನ್ನಲ್ಲೇ ನೆಲಕಚ್ಚಿ ನಿಂತಿದ್ದ ಮ್ಯಾಟ್ ರೆನ್ಷಾ 65 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ಆಡಂ ಜಂಪಾ 2, ಮ್ಯಾಥ್ಯೂ ಕುನ್ನೆಮನ್ ಡಕ್‌ಔಟ್ ಹಾಗೂ ನೇಥನ್ ಎಲ್ಲಿಸ್ ಅಜೇಯ 7 ರನ್ ಕಲೆಹಾಕಿದರು.

ಜಿಂಬಾಬ್ವೆ ಪರ ಬ್ಲೆಸಿಂಗ್ ಮುಜರ್‌ಬಾನಿ ನಾಲ್ಕು ವಿಕೆಟ್, ಬ್ರಾಡ್ ಎವನ್ಸ್ ಮೂರು ವಿಕೆಟ್, ವೆಲ್ಲಿಂಗ್ಟನ್ ಮಸಕಾಡ್ಜಾ ಹಾಗೂ ರಯಾನ್ ಬರ್ಲ್ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular