HomeLatest Newsಇದ್ಯಾವ ಕಡೆಯಿಂದ ಗುಡ್ ಬಾಲ್? ರಿವ್ಯೂ ತೆಗೆದುಕೊಳ್ಳದೇ ಪಾಕ್ ವಿರುದ್ಧ ಗೆಲ್ಲುವ ಪಂದ್ಯ ಸೋತ ಲಂಕಾ;...

ಇದ್ಯಾವ ಕಡೆಯಿಂದ ಗುಡ್ ಬಾಲ್? ರಿವ್ಯೂ ತೆಗೆದುಕೊಳ್ಳದೇ ಪಾಕ್ ವಿರುದ್ಧ ಗೆಲ್ಲುವ ಪಂದ್ಯ ಸೋತ ಲಂಕಾ; ಮೋಸ ಎಂದು ಕಿಡಿಕಾರಿದ ನೆಟ್ಟಿಗರು

ನಿನ್ನೆ (ಫೆಬ್ರವರಿ 28) ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಸೂಪರ್ 8 ಪಂದ್ಯದಲ್ಲಿ ಪಾಕಿಸ್ತಾನ 5 ರನ್‌ಗಳ ಗೆಲುವನ್ನು ದಾಖಲಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆರಿಸಿಕೊಂಡು ಪಾಕಿಸ್ತಾನ ತಂಡವನ್ನು ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿ ಶ್ರೀಲಂಕಾಗೆ 213 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಅಂತಿಮ ಹಂತದಲ್ಲಿ ಎಡವಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ದಾಖಲಿಸಿತು.

ಪಾಕ್ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ಶ್ರೀಲಂಕಾ ಕೇವಲ 33 ರನ್‌ಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾದ ಪತುಮ್ ನಿಸ್ಸಂಕ 3 ರನ್ ಗಳಿಸಿದರೆ, ಕಮಿಲ್ ಮಿಶಾರಾ 26 ರನ್ ಗಳಿಸಿದರು. ಇನ್ನುಳಿದಂತೆ ಚರಿತ್ ಅಸಲಂಕ 25 ರನ್, ಕಮಿಂದು ಮೆಂಡಿಸ್ 3, ಜನಿತ್ ಲಿಯನಾಗೆ 5 ರನ್ ಕಲೆಹಾಕಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ಪವನ್ ರತ್ನಾಯಕೆ 58 ರನ್ ಗಳಿಸಿ ದಸುನ್ ಶನಕ ಜತೆ 61 ರನ್‌ಗಳ ಜತೆಯಾಟವನ್ನಾಡಿದರು. ನಾಯಕ ದಸುನ್ ಶನಕ ಅಂತಿಮ ಹಂತದಲ್ಲಿ ಅಬ್ಬರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊನೆಯ ಓವರ್‌ನಲ್ಲಿ ಗೆಲ್ಲಲು 28 ರನ್ ಬೇಕಿದ್ದಾಗ ಒಂದು ಫೋರ್ ಹಾಗೂ ಹ್ಯಾಟ್ರಿಕ್ ಸಿಕ್ಸರ್ ಚಚ್ಚಿ ತಂಡವನ್ನು ಗೆಲ್ಲಿಸುವತ್ತ ದಾಪುಗಾಲಿಟ್ಟಿದ್ದರು. ಆದರೆ ಕೊನೆಯ ಎರಡು ಎಸೆತಗಳನ್ನು ಶಾಹಿನ್ ಶಾ ಅಫ್ರಿದಿ ಡಾಟ್ ಬಾಲ್ ಹಾಕಿದ ಕಾರಣ ಪಾಕ್ ಗೆಲುವು ಕಂಡಿತು. ಈ ಪೈಕಿ ಕೊನೆಯ ಎಸೆತ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿವಾದವನ್ನು ಹುಟ್ಟು ಹಾಕಿದ್ದು, ಅದು ಒಳ್ಳೆಯ ಡೆಲಿವರಿ ಅಲ್ಲ ಎಂದು ವಾದಿಸುತ್ತಿದ್ದಾರೆ. ಅದೊಂದು ವೈಡ್ ಬಾಲ್ ಆಗಿದ್ದು ಶನಕ ರಿವ್ಯೂ ತೆಗೆದುಕೊಂಡಿದ್ದರೆ ಫಲಿತಾಂಶವನ್ನು ಬದಲಿಸಬಹುದಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ಇಂತಹ ವೈಡ್ ಬಾಲ್ ಕುರಿತು ಸರಿಯಾದ ನಿರ್ಣಯ ನೀಡದ ಅಂಪೈರ್ ವಿರುದ್ಧ ಕಿಡಿಕಾರಿದ್ದು ಇದೊಂದು ಮೋಸದ ಗೆಲುವು ಎಂದಿದ್ದಾರೆ.

ದಸುನ್ ಶನಕ 31 ಎಸೆತಗಳಲ್ಲಿ 2 ಫೋರ್ ಹಾಗೂ 8 ಸಿಕ್ಸರ್ ಸಹಿತ ಅಜೇಯ 76 ರನ್ ಬಾರಿಸಿದರು. ದುನಿತ್ ವೆಲ್ಲಲಗೆ ಅಜೇಯ 2 ರನ್ ಗಳಿಸಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular