HomeSportsಖತಂ, ಟಾಟಾ, ಗುಡ್‌ಬೈ: ಲಂಕಾ ವಿರುದ್ಧದ ಪಂದ್ಯದ ಮಧ್ಯದಲ್ಲೇ ಟೂರ್ನಿಯಿಂದ ಹೊರಬಿದ್ದ ಪಾಕಿಸ್ತಾನ; ಕಿವೀಸ್ ಸೆಮಿಫೈನಲ್‌ಗೆ...

ಖತಂ, ಟಾಟಾ, ಗುಡ್‌ಬೈ: ಲಂಕಾ ವಿರುದ್ಧದ ಪಂದ್ಯದ ಮಧ್ಯದಲ್ಲೇ ಟೂರ್ನಿಯಿಂದ ಹೊರಬಿದ್ದ ಪಾಕಿಸ್ತಾನ; ಕಿವೀಸ್ ಸೆಮಿಫೈನಲ್‌ಗೆ ಎಂಟ್ರಿ

ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಐಸಿಸಿ ಟಿ20 ವಿಶ್ವಕಪ್ 2026ರ ಸೂಪರ್ 8 ಸುತ್ತಿನ ತಮ್ಮ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಪಂದ್ಯ ಮುಕ್ತಾಯವಾಗುವ ಮುನ್ನವೇ ಪಾಕಿಸ್ತಾನ ಟೂರ್ನಿಯಿಂದ ಎಲಿಮಿನೇಟ್ ಆಗಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆರಿಸಿಕೊಂಡು ಪಾಕಿಸ್ತಾನ ತಂಡವನ್ನು ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿ ಶ್ರೀಲಂಕಾಗೆ 213 ರನ್‌ಗಳ ಗುರಿಯನ್ನು ನೀಡಿತ್ತು.

ಇನ್ನು ಪಾಕಿಸ್ತಾನ ಇಷ್ಟು ಬೃಹತ್‌ ಮೊತ್ತ ಕಲೆಹಾಕಿದರೂ ಶ್ರೀಲಂಕಾವನ್ನು 147 ರನ್‌ಗೆ ಅಥವಾ ಅದಕ್ಕಿಂತ ಕಡಿಮೆ ರನ್‌ಗೆ ಕಟ್ಟಿಹಾಕಿದರೆ ಮಾತ್ರ ನ್ಯೂಜಿಲೆಂಡ್‌ಗಿಂತ ಹೆಚ್ಚಿನ ನೆಟ್‌ ರನ್‌ರೇಟ್ ಪಡೆದು ಸೆಮಿಫೈನಲ್ ಪ್ರವೇಶಿಸಬಹುದಾದ ಅವಕಾಶವಿತ್ತು. ಆದರೆ ಶ್ರೀಲಂಕಾ 15.5 ಓವರ್‌ಗಳಲ್ಲಿ 148 ರನ್ ಮುಟ್ಟಿದ್ದು, ಪಾಕ್ ಸೆಮಿಫೈನಲ್ ತಲುಪಲು ಇದ್ದ ಕೊನೆಯ ಅವಕಾಶವನ್ನು ಕೈಚೆಲ್ಲಿದೆ. ಈ ಮೂಲಕ ಪಾಕಿಸ್ತಾನ ಟೂರ್ನಿಯಿಂದ ಎಲಿಮಿನೇಟ್ ಆಗಿದ್ದು, ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular