HomeLatest NewsT20 World Cup 2026: ಫರ್ಹಾನ್, ಶದಬ್ ಖಾನ್ ಅಬ್ಬರ; ಯುಎಸ್‌ಗೆ ಸವಾಲಿನ ಗುರಿನ ನೀಡಿದ...

T20 World Cup 2026: ಫರ್ಹಾನ್, ಶದಬ್ ಖಾನ್ ಅಬ್ಬರ; ಯುಎಸ್‌ಗೆ ಸವಾಲಿನ ಗುರಿನ ನೀಡಿದ ಪಾಕ್

ಕೊಲಂಬೊದ ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 12ನೇ ಗ್ರೂಪ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್‌ಎ ಫೀಲ್ಡಿಂಗ್ ಆರಿಸಿಕೊಂಡು ಪಾಕಿಸ್ತಾನವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಸಹಿಬ್ಝಾದಾ ಫರ್ಹಾನ್ ಹಾಗೂ ಶದಬ್ ಖಾನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಕಲೆಹಾಕಿ ಯುಎಸ್‌ಗೆ 191 ರನ್‌ಗಳ ಸವಾಲಿನ ಗುರಿ ನೀಡಿದೆ.

ಪಾಕಿಸ್ತಾನದ ಪರ ಆರಂಭಿಕರಾಗಿ ಕಣಕ್ಕಿಳಿದ ಸೈಮ್ ಆಯುಬ್ ಹಾಗೂ ಸಹಿಬ್ಝಾದಾ ಫರ್ಹಾನ್ 54 ರನ್‌ಗಳ ಜತೆಯಾಟವನ್ನಾಡಿ ಉತ್ತಮ ಆರಂಭವನ್ನು ಕಟ್ಟುಕೊಟ್ಟರು. ಆದರೆ ಸೈಮ್ ಆಯುಬ್ 19 ರನ್‌ಗೆ ವಿಕೆಟ್ ಒಪ್ಪಿಸಿದರು. ಬೆನ್ನಲ್ಲೇ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಸಲ್ಮಾನ್ ಆಘಾ ಕೇವಲ 1 ರನ್‌ಗೆ ಔಟ್ ಆದರು. ಹೀಗೆ 56 ರನ್‌ಗೆ 2 ವಿಕೆಟ್ ಕಳೆದುಕೊಂಡ ಪಾಕಿಸ್ತಾನಕ್ಕೆ ಮೂರನೇ ವಿಕೆಟ್‌ಗೆ ಜತೆಯಾದ ಬಾಬರ್ ಅಜಮ್ ಹಾಗೂ ಸಹಿಬ್ಝಾದಾ ಫರ್ಹಾನ್ 81 ರನ್‌ಗಳ ಜತೆಯಾಟವಾಡಿ ಸುಧಾರಣೆ ತಂದರು. ಬಾಬರ್ ಅಜಮ್ 46 ರನ್ ಗಳಿಸಿದರೆ, ಸಹಿಬ್ಝಾದಾ ಫರ್ಹಾನ್ 41 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 73 ರನ್ ಬಾರಿಸಿದರು. ಮೊಹಮ್ಮದ್ ನವಾಜ್ 5 ರನ್ ಬಾರಿಸಿದರೆ, ಶದಬ್ ಖಾನ್ 12 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 30 ರನ್ ಬಾರಿಸಿದರು. ಇನ್ನುಳಿದಂತೆ ಫಹೀಮ್ ಅಶ್ರಫ್ 1 ರನ್, ಉಸ್ಮಾನ್ ಖಾನ್ ಡಕ್‌ಔಟ್, ಅಬ್ರಾರ್ ಅಹ್ಮದ್ ಡಕ್‌ಔಟ್ ಹಾಗೂ ಶಾಹೀನ್ ಅಫ್ರಿದಿ ಅಜೇಯ 9 ರನ್ ಬಾರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಪರ ಶಾಡ್ಲಿ ವಾನ್‌ ಶಾಲ್ಕ್‌ವಿಕ್ ನಾಲ್ಕು ವಿಕೆಟ್, ಸೌರಭ್ ನೇತ್ರಾವಲ್ಕರ್, ಮೊಹಮ್ಮದ್ ಮೊಹ್ಸಿನ್ ಹಾಗೂ ಹರ್ಮೀತ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular