HomeLatest NewsT20 World Cup 2026: ಹ್ಯಾಂಡ್‌ಶೇಕ್ ಮಾಡಲು ಕಾದು ನಿಂತ ಪಾಕ್ ಆಟಗಾರರು, ಕ್ಯಾರೆ ಎನ್ನದ...

T20 World Cup 2026: ಹ್ಯಾಂಡ್‌ಶೇಕ್ ಮಾಡಲು ಕಾದು ನಿಂತ ಪಾಕ್ ಆಟಗಾರರು, ಕ್ಯಾರೆ ಎನ್ನದ ಟೀಮ್ ಇಂಡಿಯಾ; ವಿಡಿಯೊ

ನಿನ್ನೆ ( ಫೆಬ್ರವರಿ 15 ) ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 27ನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿ ಟೀಮ್ ಇಂಡಿಯಾ 61 ರನ್‌ಗಳ ಬೃಹತ್‌ ಗೆಲುವನ್ನು ಸಾಧಿಸಿತು.

ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆರಿಸಿಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತ್ತು. ಅದರಂತೆ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿ ಪಾಕಿಸ್ತಾನಕ್ಕೆ 176 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಪಾಕಿಸ್ತಾನ 18 ಓವರ್‌ಗಳಲ್ಲಿ 114 ರನ್‌ಗೆ ಆಲ್‌ಔಟ್ ಆಯಿತು.

ಹೀಗೆ ಭಾರತದ ವಿರುದ್ಧ ಹೀನಾಯ ಸೋಲನ್ನು ಕಂಡ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿತ ಕಂಡಿತು. ಇನ್ನು ಏಷ್ಯಾ ಕಪ್ ವೇಳೆ ಇತ್ತಂಡಗಳು ಮುಖಾಮುಖಿಯಾಗಿದ್ದಾಗ ಮೈದಾನದಲ್ಲಿ ಟೀಮ್ ಇಂಡಿಯಾ ಆಟಗಾರರು ಹಸ್ತಲಾಘವ ಮಾಡದೇ ನಿರಾಕರಿಸಿದ್ದರು. ಈ ವಿಚಾರವಾಗಿ ಕಳೆದ ವಾರವಷ್ಟೇ ಐಸಿಸಿ ಬಳಿ ಬೇಡಿಕೆಯಿಟ್ಟಿದ್ದ ಪಾಕ್ ಹಸ್ತಲಾಘವ ಮಾಡಬೇಕೆಂದು ತಿಳಿಸಿತ್ತು. ಹೀಗಾಗಿ ಈ ಬಾರಿಯ ಮುಖಾಮುಖಿಯಲ್ಲಿ ಭಾರತದ ಆಟಗಾರರು ಪಾಕ್ ಆಟಗಾರರ ಜತೆ ಹಸ್ತಲಾಘವ ಮಾಡಲಿದ್ದಾರಾ ಎಂಬ ಪ್ರಶ್ನೆ ಎದ್ದಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಈ ಬಾರಿಯೂ ಸಹ ಭಾರತದ ಆಟಗಾರರು ಪಾಕ್ ಆಟಗಾರರ ಜತೆ ಹಸ್ತಲಾಘವ ಮಾಡಲಿಲ್ಲ. ಟಾಸ್ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಪಾಕ್ ನಾಯಕ ಸಲ್ಮಾನ್ ಅಲಿ ಆಘಾ ಹಸ್ತಲಾಘವ ಮಾಡದೇ ತೆರಳಿದ್ದರು. ಇನ್ನು ಪಂದ್ಯ ಮುಗಿದ ಬಳಿಕವೇನಾದರೂ ಹಸ್ತಲಾಘವ ಮಾಡಲಿದ್ದಾರಾ ಎಂದು ಕಾದಿದ್ದವರಿಗೆ ಆಗಲೂ ಸಹ ನಿರಾಸೆ ಎದುರಾಗಿದೆ.

ಪಾಕಿಸ್ತಾನ ಆಲ್‌ಔಟ್ ಆದಾಗ ಅಂತಿಮವಾಗಿ ಕಣದಲ್ಲಿದ್ದ ಶಾಹೀನ್ ಶಾ ಅಫ್ರಿದಿ ಹಾಗೂ ಉಸ್ಮಾನ್ ತಾರಿಕ್ ಪೆವಿಲಿಯನ್‌ಗೆ ಹಿಂತಿರುಗುವಾಗ ಕೆಲ ಸೆಕೆಂಡುಗಳ ಕಾಲ ಭಾರತದ ಆಟಗಾರರತ್ತ ನೋಡುತ್ತಾ ಹಸ್ತಲಾಘವ ನಿರೀಕ್ಷಿಸಿದ ವಿಡಿಯೊ ಕ್ರೀಡಾಂಗಣದಲ್ಲಿದ್ದ ವ್ಯಕ್ತಿಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ವಿಡಿಯೊದಲ್ಲಿ ಆಟಗಾರರು ನಿಂತು ಕಾದಿದ್ದು ಮಾತ್ರವಲ್ಲದೇ ಎರಡು ಬಾರಿ ಹಿಂದಿರುಗಿ ನೋಡಿದ್ದೂ ಸಹ ಇದ್ದು, ವಿಡಿಯೊ ವೈರಲ್ ಆಗಿದೆ. ಹ್ಯಾಂಡ್‌ಶೇಕ್ ಮಾಡಲು ಪಾಕ್ ಆಟಗಾರರು ಕಾದು ನಿಂತಿದ್ದರೂ ಸಹ ಟೀಮ್ ಇಂಡಿಯಾ ಆಟಗಾರರು ಕ್ಯಾರೆ ಎನ್ನದೇ ನಿಂತಿದ್ದಾರೆ ಎಂದು ನೆಟ್ಟಿಗರು ವಿಡಿಯೊ ಹಂಚಿಕೊಳ್ಳುತ್ತಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular