HomeLatest NewsT20 World Cup 2026: ಒಬ್ಬ ಮಗ ಟೀಂ ಇಂಡಿಯಾದಲ್ಲಿ, ಮತ್ತೊಬ್ಬ ಆಫ್ರಿಕಾದಲ್ಲಿ, ಯಾರಿಗೆ ಬೆಂಬಲಿಸಲಿ?...

T20 World Cup 2026: ಒಬ್ಬ ಮಗ ಟೀಂ ಇಂಡಿಯಾದಲ್ಲಿ, ಮತ್ತೊಬ್ಬ ಆಫ್ರಿಕಾದಲ್ಲಿ, ಯಾರಿಗೆ ಬೆಂಬಲಿಸಲಿ? ತಾಯಿಯ ಗೊಂದಲ!

ಇಂದು ( ಫೆಬ್ರವರಿ 22 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಹಂತದ ಮೂರನೇ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.

ಸೂಪರ್ 8 ಸುತ್ತಿನಲ್ಲಿ ಎರಡೂ ತಂಡಗಳಿಗೂ ಇದು ಮೊದಲ ಪಂದ್ಯವಾಗಿದ್ದು, ಗೆಲುವಿನ ಶುಭಾರಂಭ ಮಾಡುವತ್ತ ಕಣ್ಣಿಟ್ಟಿವೆ. ಗ್ರೂಪ್ ಹಂತದ ತಮ್ಮ ಎಲ್ಲ ನಾಲ್ಕು ಪಂದ್ಯಗಳಲ್ಲಿಯೂ ಗೆದ್ದು ಸೋಲನ್ನೇ ಕಾಣದ ಈ ಎರಡು ತಂಡಗಳಲ್ಲಿ ಯಾವ ತಂಡ ಗೆಲುವು ಕಾಣಲಿದೆ ಎಂಬ ಪ್ರಶ್ನೆ ಎದ್ದಿದೆ.

ಹೀಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಪ್ರಶ್ನೆ ಎದ್ದಿದ್ದರೆ, ಮತ್ತೊಂದೆಡೆ ಮರಿಯಾನಾ ಮಾರ್ಕೆಲ್‌ಗೆ ಎರಡೂ ತಂಡಗಳಲ್ಲಿ ಸದಸ್ಯರಾಗಿರುವ ತಮ್ಮ ಇಬ್ಬರು ಮಕ್ಕಳಲ್ಲಿ ಯಾರಿಗೆ ಬೆಂಬಲಿಸಬೇಕು ಎಂಬ ಗೊಂದಲದಲ್ಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೌದು, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗರಾದ ಆಲ್ಬಿ ಮೊರ್ಕೆಲ್ ಈ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ಸ್ಪೆಷಲಿಸ್ಟ್ ಕೋಚಿಂಗ್ ಕನ್ಸಲ್ಟಂಟ್ ಹಾಗೂ ಅವರ ತಮ್ಮ ಮೋರ್ನೆ ಮೊರ್ಕೆಲ್ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿದ್ದಾರೆ.

ಹೀಗಾಗಿ ಅವರ ತಾಯಿ ಗೊಂದಲದಲ್ಲಿದ್ದು, ಈ ಕುರಿತು ಮೊರ್ನೆ ಮೊರ್ಕೆಲ್ ಪ್ರತಿಕ್ರಿಯಿಸಿದ್ದಾರೆ. ನಮ್ಮ ತಾಯಿ ಅಣ್ಣನಿಗೆ ಬೆಂಬಲ ನೀಡಬೇಕಾ ಅಥವಾ ನನಗೆ ಬೆಂಬಲ ನೀಡಬೇಕಾ ಎಂಬ ಗೊಂದಲದಲ್ಲಿದ್ದಾರೆ ಎಂದು ಮೊರ್ನೆ ಮೊರ್ಕೆಲ್ ಹೇಳಿಕೆ ನೀಡಿದ್ದಾರೆ. ಇಲ್ಲಿ ನಾವು ಪಂದ್ಯ ಗೆಲ್ಲುವ ಬಗ್ಗೆ ಚಿಂತೆಗೀಡಾಗಿದ್ದರೆ, ಅಲ್ಲಿ ತಾಯಿ ಯಾರಿಗೆ ಬೆಂಬಲಿಸಲಿ ಎಂದು ಇನ್ನೂ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular