HomeLive Newsಟಿ ಟ್ವೆಂಟಿ ಏಷ್ಯಾ ಕಪ್; ಇಂದು 12ನೇ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಥಾಯ್ಲ್ಯಾಂಡ್ ಮುಖಾಮುಖಿ

ಟಿ ಟ್ವೆಂಟಿ ಏಷ್ಯಾ ಕಪ್; ಇಂದು 12ನೇ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಥಾಯ್ಲ್ಯಾಂಡ್ ಮುಖಾಮುಖಿ

ನಿನ್ನೆಯ ಪಂದ್ಯದಲ್ಲಿ ಮಹಿಳಾ ಭಾರತ ತಂಡ ನೇಪಾಳದ ಎದುರು 82 ರನ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಈಗಾಗಲೇ A ಗ್ರೂಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ಸೆಮಿ ಫೈನಲ್ ಗೆ ಎಂಟ್ರಿ ಕೊಟ್ಟಿದ್ದು ಗ್ರೂಪ್ ಬಿ ನಿಂದ ಸೆಮಿ ಫೈನಲ್ ಗೆ ಬರುವ  ತಂಡಗಳು ಯಾವುವೆಂದು ಇಂದು ನಿರ್ಧಾರವಾಗಲಿದೆ.

ಇಂದು  ನಡೆಯಲಿರುವ ಟಿ ಟ್ವೆಂಟಿ ಏಷ್ಯಾ ಕಪ್ ನ ಹನ್ನೆರಡನೇ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಥಾಯ್ಲ್ಯಾಂಡ್ ಮುಖಮುಖಿಯಾಗುತ್ತಿದ್ದು,  ತನ್ನ ಓಂ ಗ್ರೌಂಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಜಯಭೇರಿಯಾಗುತ್ತಿರುವ ಶ್ರೀಲಂಕಾ ತಂಡ  ತನ್ನ ಸೆಮಿ ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರೆ,  ಥಾಯ್ಲ್ಯಾಂಡ್ ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಇದಕ್ಕೂ ಮುನ್ನ ನಡೆಯಲಿರುವ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಮಲೇಶಿಯಾ ಸೆಣಸಾಡಲಿದ್ದು, ಮಹಿಳಾ ಬಾಂಗ್ಲಾದೇಶ ತಂಡಕ್ಕೆ ಗೆಲ್ಲಲೇ ಬೇಕಾದ ಅನಿವಾರ್ಯವಿದೆ.

For Latest News Updates, Join Our Whatsapp Community🚩
RELATED ARTICLES

Most Popular