ಸಿಡ್ನಿ: ಸಿಡ್ನಿಯ ಬೋಂಡಿ ಬೀಚ್ ನಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಬಂದೂಕುಧಾರಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ 10 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೀಚ್ ನಲ್ಲಿ ನಿಂತಿದ್ದ ಜನರ ಮೇಲೆ ದುಷ್ಕರ್ಮಿಗಳು ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಿದ್ದು, ಸುಮಾರು 50 ಗುಂಡು ಗಳನ್ನು ಮನಬಂತೆ ಹಾರಿಇಸಿದ್ದು, ಸ್ಥಳದಲ್ಲೇ 10 ಜನರು ಮೃತಪಟ್ಟಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿಗೆ ಜನರು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ.
ಘಟನಾ ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಇಬ್ಬರು ದಾಳಿಕೊರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಹೂದಿ ಹಬ್ಬದ ಆರಂಭವನ್ನು ಸ್ವಾಗತಿಸಲು ಕಡಲತೀರದ ಕಾರ್ಯಕ್ರಮಕ್ಕಾಗಿ ಸಮುದ್ರತೀರದಲ್ಲಿ ಸಾವಿರಾರು ಜನರು ಸೇರಿದ್ದರು. ಈ ವೇಳೆ ಜನ ಸಮೂಹಗಳ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಬೋಂಡಿ ಬೀಚ್ ನಲ್ಲಿ ನಡೆದ ಶೂಟೌಟ್ ಪ್ರಕರಣ ಆಘಾತ ತಂದಿದೆ. ಇದು ಅತ್ಯಂತ ದು:ಖಕರ ಎಂದು ಘಟನೆ ಬಗ್ಗೆ ಆಶ್ತ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಟನಿಸ್ ಖೇದ ವ್ಯಕ್ತಪಡಿಸಿದ್ದಾರೆ.

