HomeKarnatakaಅವಧಿಗೂ ಮೊದಲೇ ಸುಡು ಬಿಸಿಲು ಆರಂಭ: ನಾಳೆಯಿಂದಲೇ ತಾಪಮಾನ ಏರಿಕೆ ಸಾಧ್ಯತೆ

ಅವಧಿಗೂ ಮೊದಲೇ ಸುಡು ಬಿಸಿಲು ಆರಂಭ: ನಾಳೆಯಿಂದಲೇ ತಾಪಮಾನ ಏರಿಕೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಅವಧಿಗೂ ಮೊದಲೇ ಬೇಸಿಗೆ ಶುರುವಾಗುತ್ತಿದ್ದು, ನಾಳೆಯಿಂದ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ. ಮಾರ್ಚ್ 1 ರ ಬದಲಿಗೆ ಫೆಬ್ರವರಿ 24 ರಿಂದಲೇ ಬೇಸಿಗೆ ಶುರುವಾಗಲಿದೆ.

ತಾಪಮಾನದಲ್ಲಿ ದಿಡೀರ್ ಹೆಚ್ಚಳ ಆಗಲಿದೆ. ಇದು ಶುಷ್ಕ ಹವಾಮಾನದ ಮುನ್ಸೂಚನೆಯಾಗಿದ್ದು, ವಾಯುವ್ಯ ಮತ್ತು ಉತ್ತರ ಮಾರುತಗಳು ಬೆಚ್ಚಗಿರುವುದು ಇದಕ್ಕೆ ಕಾರಣವೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗಾಗಲೇ, ರಾಜ್ಯದ ಕೆಲವು ಭಾಗಗಳಲ್ಲಿ ಸಾಮಾನ್ಯ ಗರಿಷ್ಠ ತಾಪಮಾನದ ದಾಖಲಾಗುತ್ತಿದೆ. ಆರ್ದ್ರತೆ ಮಟ್ಟ ಹೆಚ್ಚಾಗಿರುವುದರಿಂದ ಸೆಖೆ ಕೂಡ ಹೆಚ್ಚಾಗಿದೆ. ನಾಳೆಯಿಂದ ತಾಪಮಾನ ಹೆಚ್ಚಾಗಿ ಸುಡು ಬಿಸಿಲು ಜನರನ್ನು ಹೈರಾಣಾಗಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular