HomeLatest Newsವಿವಸ್ತ್ರಗೊಳಿಸಿ ಹಲ್ಲೆ ಆರೋಪ ಪ್ರಕರಣ: ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಮತ್ತೊಂದು ಕರಾಳ ಮುಖ ಬಯಲು:...

ವಿವಸ್ತ್ರಗೊಳಿಸಿ ಹಲ್ಲೆ ಆರೋಪ ಪ್ರಕರಣ: ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಮತ್ತೊಂದು ಕರಾಳ ಮುಖ ಬಯಲು: ಹನಿಟ್ರ್ಯಾಪ್ ಮಾಡಿ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ

ಹುಬ್ಬಳ್ಳಿ: ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಪ್ರಕರಣವೊಂದರಲ್ಲಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯನ್ನು ಪೊಲೀಸರು ಬಂಧಿಸಿದ್ದ ವೇಳೆ ತಾನೇ ವಿವಸ್ತ್ರವಾಗಿ ಹೈಡ್ರಾಮಾ ಮಾಡಿ ಪೊಲೀಸರ ವಿರುದ್ಧ ಆರೋಪ ಮಾಡಿದ್ದ ಸುಜಾತಾ ಹಂಡಿಯ ಮತ್ತೊಂದು ಕರಾಳ ಮುಖ ಬಹಿರಂಗವಾಗಿದೆ.

ಸುಜಾತಾ ಹಂಡಿ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಹನಿಟ್ರ್ಯಾಪ್ ಕೇಸ್ ಕೂಡ ಇದೆ. ಅಷ್ಟೇ ಅಲ್ಲ ಹಣಕ್ಕಾಗಿ ವ್ಯಕ್ತಿಯನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಆತನನ್ನು ಹಿಗ್ಗಾ ಮುಗ್ಗಾ ಥಳಿಸಿರುವ ಹಾಗೂ ಲಾಂಗ್ ಹಿಡಿದು ಬೆದರಿಕೆ ಹಾಕಿರುವ ಸುಜಾತಾ ಹಂಡಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

2023ರಲ್ಲಿ ಧಾರವಾಡದ ತುಕಾರಾಮ್ ಎಂಬುವವರನ್ನು ಹನಿಟ್ರ್ಯಾಪ್ ಮಾಡಿದ್ದ ಸುಜಾತಾ ಹಂಡಿ, ಮೂರು ದಿನಗಳ ಕಾಲ ಆತನನ್ನು ಕೂಡಿಹಾಕಿ ಅರೆನಗ್ನನನ್ನಾಗಿಸಿ ಕೈಯಲ್ಲಿ ಲಾಂಗ್ ಹಿಡಿದು ಬೆದರಿಕೆ ಹಾಕಿದ್ದಾಳೆ. ಅಲ್ಲದೇ ನೈಲಾನ್ ಹಗ್ಗದಿಂದ ಆತನನ್ನು ಮನಸೋಇಚ್ಛೆ ಥಳಿಸಿದ್ದಾಳೆ. ತನ್ನನ್ನು ಬಿಟ್ಟು ಬಿಡುವಂತೆ ಆತ ಗೋಗರೆದರೂ ಹೊಡೆಯುವುದನ್ನು ನಿಲ್ಲಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಒಟ್ಟಾರೆ ಸುಜಾತಾ ಹಂಡಿಯ ಸಾಲು ಸಾಲು ಖರಾಳ ಮುಖ, ಮೃಗೀಯ ವರ್ತನೆ ಬಯಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular