HomeKarnatakaBIG NEWS : ಸಾಲು ಸಾಲು ಹಬ್ಬದ ನಡುವೆ ಗ್ರಾಹಕರಿಗೆ ಬಿಗ್ ಶಾಕ್ : ಸಕ್ಕರೆ,...

BIG NEWS : ಸಾಲು ಸಾಲು ಹಬ್ಬದ ನಡುವೆ ಗ್ರಾಹಕರಿಗೆ ಬಿಗ್ ಶಾಕ್ : ಸಕ್ಕರೆ, ಬೆಲ್ಲದ ಬೆಲೆ ಭಾರೀ ಏರಿಕೆ!

ಬೆಂಗಳೂರು: ಸಾಲು ಸಾಲು ಹಬ್ಬಗಳು ಎದುರಾಗಿರುವ ಬೆನ್ನಲ್ಲೇ ಗ್ರಾಹಕರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಶಾಕ್‌ ಎದುರಾಗಿದೆ. ಸಕ್ಕರೆ ಹಾಗೂ ಬೆಲ್ಲದ ದರದಲ್ಲಿ ಭಾರೀ ಏರಿಕೆಯಾಗಿದ್ದು, ಹಬ್ಬದ ಸಿಹಿ ತಿನಿಸುಗಳ ಖರ್ಚು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಹಬ್ಬಗಳ ಸಾಲು ಆರಂಭವಾಗಿರುವ ಬೆನ್ನಲ್ಲೇ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್‌ ಎದುರಾಗಿದೆ. ಸಕ್ಕರೆ ಹಾಗೂ ಬೆಲ್ಲದ ದರದಲ್ಲಿ ಭಾರೀ ಏರಿಕೆಯಾಗಿದ್ದು, ಸಕ್ಕರೆ ಬೆಲೆ ಕೆಜಿಗೆ ₹70ರಿಂದ ₹75ಕ್ಕೆ ತಲುಪಿದೆ. ಇತ್ತ ಬೆಲ್ಲದ ಬೆಲೆಯೂ ಕ್ವಿಂಟಲ್‌ಗೆ ₹6,500ರಿಂದ ₹7,000ಕ್ಕೆ ಏರಿಕೆಯಾಗಿದೆ. ಹಬ್ಬದ ಸಿಹಿ ತಿನಿಸುಗಳ ಖರ್ಚು ಹೆಚ್ಚುವ ಆತಂಕ ಗ್ರಾಹಕರಿಗೆ ಎದುರಾಗಿದೆ.

ಈ ಹಿಂದೆ ಕೆಜಿಗೆ ₹50ರಿಂದ ₹55ರಷ್ಟಿದ್ದ ಸಕ್ಕರೆ ಬೆಲೆ ಇದೀಗ ₹70ರಿಂದ ₹75ಕ್ಕೆ ಏರಿಕೆಯಾಗಿದೆ. ಕೇವಲ ಕೆಲವೇ ದಿನಗಳಲ್ಲಿ ಸಕ್ಕರೆ ದರದಲ್ಲಿ ಗಮನಾರ್ಹ ಏರಿಕೆಯಾಗಿದ್ದು, ಹಬ್ಬದ ಖರೀದಿಗೆ ತೆರಳುವ ಗ್ರಾಹಕರಿಗೆ ಇದು ಹೊರೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಸಕ್ಕರೆ ಮಾತ್ರವಲ್ಲದೆ ಬೆಲ್ಲದ ಬೆಲೆಯೂ ಏರಿಕೆಯಾಗಿದೆ. ಬೆಲ್ಲದ ದರ ಕ್ವಿಂಟಲ್‌ಗೆ ₹6,500ರಿಂದ ₹7,000ಕ್ಕೆ ತಲುಪಿದೆ ಎಂದು ವರದಿಯಾಗಿದೆ. ಕಳೆದ 2–3 ದಿನಗಳಲ್ಲೇ ಬೆಲ್ಲದ ಬೆಲೆಯಲ್ಲಿ ಸುಮಾರು ₹2,000ರಷ್ಟು ಏರಿಕೆಯಾಗಿದೆ ಎನ್ನಲಾಗಿದೆ.

ಹಬ್ಬದ ಸಂದರ್ಭದಲ್ಲಿ ಸಿಹಿ ತಿನಿಸುಗಳು, ಹೋಳಿಗೆ ಸೇರಿದಂತೆ ವಿವಿಧ ತಿಂಡಿಗಳ ತಯಾರಿಕೆಯಲ್ಲಿ ಸಕ್ಕರೆ ಹಾಗೂ ಬೆಲ್ಲದ ಬಳಕೆ ಹೆಚ್ಚಾಗುತ್ತದೆ. ಇದೇ ಸಂದರ್ಭದಲ್ಲಿ ದರ ಏರಿಕೆಯಾಗಿರುವುದು ಗ್ರಾಹಕರಿಗೆ ಮತ್ತಷ್ಟು ಹೊರೆ ತಂದಿದೆ. ಸಕ್ಕರೆ ಮತ್ತು ಬೆಲ್ಲದ ಬೆಲೆ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿರುವುದು ವ್ಯಾಪಾರಿಗಳು ಹಾಗೂ ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

ಕಬ್ಬಿನ ಪೂರೈಕೆಯಲ್ಲಿ ಕೊರತೆ ಉಂಟಾಗಿರುವುದರಿಂದ ಬೆಲ್ಲದ ಉತ್ಪಾದನೆ ಕುಸಿದಿದೆ. ಕಬ್ಬಿನ ಗಾಣಗಳಲ್ಲಿ ಬೆಲ್ಲ ತಯಾರಿಕೆಗೆ ಅಗತ್ಯ ಪ್ರಮಾಣದ ಕಬ್ಬು ಸಿಗದಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ಉತ್ಪಾದನೆ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಬೆಲ್ಲದ ಬೆಲೆ ಮತ್ತಷ್ಟು ಏರಿಕೆಯಾಗಿದೆ.

ಇದರಿಂದ ಹಬ್ಬದ ಸಂದರ್ಭದಲ್ಲಿ ಬೆಲ್ಲ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಹೊರೆ ಬೀಳುವಂತಾಗಿದೆ. ಹಬ್ಬಗಳ ಸಾಲು ಆರಂಭವಾಗಿರುವುದರಿಂದ ಬೆಲ್ಲದ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕೊರತೆ ಮುಂದುವರಿದರೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular