HomeAstroಇಂಥ ಪತ್ನಿಯರು ಬದಲಿಸ್ತಾರೆ ಪತಿಯ 'ಅದೃಷ್ಟ'

ಇಂಥ ಪತ್ನಿಯರು ಬದಲಿಸ್ತಾರೆ ಪತಿಯ ‘ಅದೃಷ್ಟ’

ಯಶಸ್ವಿ ಪುರುಷನ ಹಿಂದೆ ಮಹಿಳೆಯರಿರ್ತಾರೆ ಎನ್ನಲಾಗುತ್ತದೆ. ಪ್ರತಿಯೊಬ್ಬ ಪುರುಷ ಕೂಡ ಪತ್ನಿಯಾಗಿ ಬರುವವಳು ತನ್ನ ಅದೃಷ್ಟ ಬದಲಿಸಲಿ ಎಂದು ಬಯಸ್ತಾನೆ. ಕೆಲವೊಂದು ಮಹಿಳೆಯರು ಕಾಲಿಟ್ಟ ಗಳಿಗೆ ಚೆನ್ನಾಗಿರುತ್ತದೆ. ಪುರುಷನ ಬಾಳಿಗೆ ಆಕೆ ಕಾಲಿಡುತ್ತಿದ್ದಂತೆ ಆತನ ಭಾಗ್ಯದ ಬಾಗಿಲು ತೆರೆಯುತ್ತದೆ.

ಸಮುದ್ರ ಶಾಸ್ತ್ರದಲ್ಲಿ ಈ ಬಗ್ಗೆ ವಿವರವಾಗಿ ಹೇಳಲಾಗಿದೆ. ಯಾವ ರೀತಿಯ ಹುಡುಗಿ ಮನೆಗೆ ಬಂದ್ರೆ ಅದೃಷ್ಟ ಒಲಿದು ಬರುತ್ತದೆ ಎಂಬುದನ್ನು ಹೇಳಲಾಗಿದೆ. ಸಮುದ್ರ ಶಾಸ್ತ್ರದ ಪ್ರಕಾರ ಯಾವ ಹುಡುಗಿ ಕೂದಲು ಉದ್ದ ಹಾಗೂ ದಟ್ಟವಾಗಿರುತ್ತದೆಯೋ ಆಕೆ ಅದೃಷ್ಟವಂತಳಂತೆ. ಇಂಥ ಮಹಿಳೆ ತನ್ನ ಪತಿಗೆ ಅದೃಷ್ಟ ತರ್ತಾಳಂತೆ. ಆಕೆ ಮನೆಗೆ ಬರ್ತಿದ್ದಂತೆ ಮನೆಯಲ್ಲಿ ಸುಖ, ಸಂಪತ್ತು, ಸಂತೋಷ ನೆಲೆಸುತ್ತದೆ.

ಸಮುದ್ರ ಶಾಸ್ತ್ರದ ಪ್ರಕಾರ ಉದ್ದದ ಕಾಲುಳ್ಳ ಮಹಿಳೆಯರು ಕೂಡ ಅದೃಷ್ಟಶಾಲಿಗಳಂತೆ. ಇಂಥ ಮಹಿಳೆಯರಿಗೆ ಎಂದೂ ಹಣದ ಅಭಾವವಾಗುವುದಿಲ್ಲ. ಪತಿ ಶ್ರೀಮಂತನಾಗಲು ಇಂಥ ಮಹಿಳೆಯರು ಸಾಕಷ್ಟು ಸಹಾಯ ಮಾಡ್ತಾರೆ. ಇತರರಿಗೆ ಹೋಲಿಕೆ ಮಾಡಿದ್ರೆ ಯಾವ ಮಹಿಳೆ ಕೈ ಉದ್ದವಾಗಿರುತ್ತದೆಯೋ ಆ ಮಹಿಳೆ ಕೂಡ ಅದೃಷ್ಟ ತರ್ತಾಳಂತೆ. ಆಕೆ ನೆಲೆಸಿದ ಮನೆಯಲ್ಲೂ ಸುಖ-ಸಂಪತ್ತು ನೆಲೆಸುತ್ತದೆಯಂತೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular