HomeAstroಹಲ್ಲಿ ಮೈಮೇಲೆ ಬಿದ್ರೆ ಜ್ಯೋತಿಷ್ಯ ಏನು ಹೇಳುತ್ತದೆ.....?

ಹಲ್ಲಿ ಮೈಮೇಲೆ ಬಿದ್ರೆ ಜ್ಯೋತಿಷ್ಯ ಏನು ಹೇಳುತ್ತದೆ…..?

ಜ್ಯೋತಿಷ್ಯದ ಪ್ರಕಾರ ಹಲ್ಲಿ ಕೂಡ ಭವಿಷ್ಯ ಹೇಳುತ್ತೆ. ಮುಂದೇನಾಗಬಹುದು ಎಂಬುದನ್ನು ಹಲ್ಲಿ ನಮಗೆ ಸೂಕ್ಷ್ಮವಾಗಿ ತಿಳಿಸುತ್ತದೆ. ಹಲ್ಲಿ ಮೈಮೇಲೆ ಬೀಳುವುದರಿಂದ ಶುಭ- ಅಶುಭ ಫಲಗಳಿವೆ. ಪುರುಷನಿಗೆ ಎಡಗಡೆ ಹಾಗೂ ಮಹಿಳೆಗೆ ಬಲ ಭಾಗದಲ್ಲಿ ಹಲ್ಲಿ ಬಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

ಅದೇ ರೀತಿ ಪುರುಷರಿಗೆ ಬಲ ಭಾಗದಲ್ಲಿ ಹಾಗೂ ಮಹಿಳೆಯರ ಎಡ ಭಾಗದಲ್ಲಿ ಹಲ್ಲಿ ಬಿದ್ದರೆ ಅದನ್ನು ಶುಭ ಫಲವೆಂದು ಪರಿಗಣಿಸಲಾಗುತ್ತದೆ. ಹಲ್ಲಿ ಚರ್ಮಕ್ಕೆ ತಾಗಿದಲ್ಲಿ ಆ ಭಾಗವನ್ನು ನೀರಿನಿಂದ ತೊಳೆದುಕೊಳ್ಳಿ, ಇಲ್ಲ ಸ್ನಾನ ಮಾಡಿ. ಹಲ್ಲಿಯಲ್ಲಿ ವಿಷಯುಕ್ತ ಅಂಶ ಇರುವುದರಿಂದ ಅದು ನಮ್ಮ ಚರ್ಮಕ್ಕೆ ತಾಗುವ ಸಾಧ್ಯತೆ ಇರುತ್ತದೆ.

ಹಣೆಯ ಮೇಲೆ ಹಲ್ಲಿ ಬೀಳುವುದರಿಂದ ಹಣ ಸಿಗುವ ಸಾಧ್ಯತೆಗಳಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೂದಲಿನ ಮೇಲೆ ಹಲ್ಲಿ ಬೀಳುವುದರಿಂದ ಸಾವು ಸಂಭವಿಸುವ ಸಂಕೇತವಾಗಿದೆ.

ಬಲ ಕಿವಿಯ ಮೇಲೆ ಬಿದ್ದರೆ ಆಭರಣ ಸಿಗುವ ಸಾಧ್ಯತೆ ಇರುತ್ತದೆ. ಎಡ ಕಿವಿಯ ಮೇಲೆ ಬಿದ್ದರೆ ಆಯುಷ್ಯ ವೃದ್ಧಿಯಾಗುತ್ತದೆ.

ಮೂಗಿನ ಮೇಲೆ ಹಲ್ಲಿ ಬೀಳುವುದು ಭಾಗ್ಯದ ಸಂಕೇತ. ಮುಖದ ಮೇಲೆ ಹಲ್ಲಿ ಬೀಳುವುದರಿಂದ ಒಳ್ಳೆಯ ಊಟ ಸಿಗುತ್ತದೆ.

ಕುತ್ತಿಗೆ ಮೇಲೆ ಹಲ್ಲಿ ಬಿದ್ದರೆ ಗೌರವ ಪ್ರಾಪ್ತಿಯಾಗುತ್ತದೆ.

ಬಲ ಭುಜದ ಮೇಲೆ ಹಲ್ಲಿ ಬೀಳುವುದರಿಂದ ಜಯ ಸಿಗುತ್ತದೆ. ಎಡ ಭುಜದ ಮೇಲೆ ಬಿದ್ದರೆ ಹೊಸ ಶತ್ರುಗಳು ಹುಟ್ಟಿಕೊಳ್ಳುತ್ತಾರೆ.

For Latest News Updates, Join Our Whatsapp Community🚩
RELATED ARTICLES

Most Popular