HomeKarnatakaತಂದೆ ಸಾವಿನ ನೋವಿನಲ್ಲೂ 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿ: ಶಿಕ್ಷಣ ಇಲಾಖೆ ಜೀಪ್ ನಲ್ಲೇ...

ತಂದೆ ಸಾವಿನ ನೋವಿನಲ್ಲೂ 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿ: ಶಿಕ್ಷಣ ಇಲಾಖೆ ಜೀಪ್ ನಲ್ಲೇ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದ ಬಿಇಒ

ಶಿವಮೊಗ್ಗ: ತಂದೆ ಸಾವಿನ ನೋವಿನಲ್ಲೂ ಎಸ್ಎಸ್ಎಲ್ಸಿ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆದಿದ್ದಾನೆ. ವಿದ್ಯಾರ್ಥಿ ತಂದೆಯ ಸಾವಿನ ಸುದ್ದಿ ತಿಳಿದ ಬಿಇಒ ಸ್ಥಳಕ್ಕೆ ತೆರಳಿ ಕುಟುಂಬದವರಿಗೆ ಧೈರ್ಯ ಹೇಳಿ ವಿದ್ಯಾರ್ಥಿಯನ್ನು ಪರೀಕ್ಷೆಗೆ ಕರೆದೊಯ್ದಿದ್ದಾರೆ.

ದ್ಯಾವನಕೆರೆ ಗ್ರಾಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ಮಂಡಘಟ್ಟ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಪ್ರೀತಮ್ ಎಂಬ ವಿದ್ಯಾರ್ಥಿಯ ಮನೆಗೆ ಭೇಟಿಕೊಟ್ಟು ತಂದೆಯ ಅಕಾಲಿಕ ಮರಣದಿಂದ ದುಃಖದಲ್ಲಿರುವ  ಅವನಿಗೆ ಸಾಂತ್ವಾನವನ್ನು ಹೇಳಿ ಧೈರ್ಯವನ್ನು ತುಂಬಿರುತ್ತಾರೆ.

ಇಂದು ಎಸ್ಎಸ್ಎಲ್ಸಿ ಗಣಿತ ಪರೀಕ್ಷೆ ನಡೆಯುತ್ತಿದ್ದು, ವಿದ್ಯಾರ್ಥಿಗೆ ಮತ್ತು ಅವರ ತಾಯಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು  ಧೈರ್ಯವನ್ನು ಹೇಳಿ ಮಗುವನ್ನು ಇಲಾಖೆಯ ಜೀಪಿನಲ್ಲಿ ಆಯನೂರು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದು ತಂದೆಯ ದುಃಖದ ನಡುವೆಯೂ ಮಗುವು ಪರೀಕ್ಷೆಯನ್ನು ಬರೆಯಲು ಸಹಕರಿಸಿರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿದ್ಯಾರ್ಥಿ ತಾಯಿಗೆ ಈ ಸಂದರ್ಭದಲ್ಲಿ  ಸಾಂತ್ವಾನ ಮತ್ತು ಧೈರ್ಯವನ್ನು ಹೇಳಿ ಮಗುವಿನ ಮುಂದಿನ ವಿದ್ಯಾಭ್ಯಾಸಕ್ಕೆ ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ವತಿಯಿಂದ ಅಗತ್ಯ ಸಹಕಾರ ನೀಡುವುದಾಗಿ  ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಊರಿನ ಮುಖಂಡರು ಮತ್ತು ಶಿಕ್ಷಕರು ಹಾಜರಿರುತ್ತಾರೆ.

 ತಂದೆ ಸಾವಿನ ನಡುವೆಯೂ ಪರೀಕ್ಷೆ ಬರೆದ ಈ ವಿದ್ಯಾರ್ಥಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಸಾಂತ್ವಾನವನ್ನು ತಿಳಿಸಿ ಮಗುವಿನ ಮುಂದಿನ ಭವಿಷ್ಯಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿರುತ್ತಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular