HomeKarnatakaಚಪ್ಪಲಿಯಿಂದ ಹೊಡೆದ ಸಹಪಾಠಿ: ಅವಮಾನಿತ ವಿದ್ಯಾರ್ಥಿ ಆತ್ಮಹತ್ಯೆ

ಚಪ್ಪಲಿಯಿಂದ ಹೊಡೆದ ಸಹಪಾಠಿ: ಅವಮಾನಿತ ವಿದ್ಯಾರ್ಥಿ ಆತ್ಮಹತ್ಯೆ

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಭರಮಸಾಗರದ ಖಾಸಗಿ ವಸತಿ ಶಾಲೆ ವಿದ್ಯಾರ್ಥಿ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹತ್ತನೇ ತರಗತಿ ಓದುತ್ತಿದ್ದ ಕರಿಯಣ್ಣನ ಹಳ್ಳಿ ಗ್ರಾಮದ ಜಿ. ಕೊಟ್ರೇಶ್(16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಹಣ್ಣು ಹಂಚಿಕೊಳ್ಳುವ ವಿಚಾರವಾಗಿ ನಡೆದ ಜಗಳದಲ್ಲಿ ಗೆಳೆಯನೊಬ್ಬ ಚಪ್ಪಲಿಯಿಂದ ಹೊಡೆದ ಎಂದು ಅವಮಾನಿತನಾಗಿ ಕೊಟ್ರೇಶ್ ಈ ರೀತಿ ಮಾಡಿಕೊಂಡಿದ್ದಾನೆ ಎಂದು ಪೋಷಕರು ದೂರು ನೀಡಿದ್ದಾರೆ.

ಕೊಟ್ರೇಶ್ ತಂದೆ ಗುರುಲಿಂಗಯ್ಯ ಭಾನುವಾರ ಶಾಲೆಗೆ ಬಂದಿದ್ದರು. ಶಿವರಾತ್ರಿ ಅಂಗವಾಗಿ ಪುತ್ರನಿಗೆ ಹೊಸ ಬಟ್ಟೆ ಹಣ್ಣು ಕೊಡಿಸಿ ಊರಿಗೆ ತೆರಳಿದ್ದರು. ಕೊಟ್ರೇಶ ಸಹಪಾಠಿಗಳಿಗೆ ಹಣ್ಣು ಹಂಚಿದ್ದು ಮತ್ತೊಬ್ಬ ಸಹಪಾಠಿಯೊಂದಿಗೆ ಹಣ್ಣು ಹಂಚಿಕೆ ವಿಚಾರವಾಗಿ ಜಗಳವಾಗಿತ್ತು. ಈ ವೇಳೆ ಸಹಪಾಠಿ ಕೊಟ್ರೇಶ್ ಗೆ ಚಪ್ಪಲಿಯಿಂದ ಹೊಡೆದಿದ್ದು ಇದರಿಂದ ಅವಮಾನಿತನಾದ ಕೊಟ್ರೇಶ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗುರುಲಿಂಗಯ್ಯ ದೂರು ನೀಡಿದ್ದಾರೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular