HomeRecipiesಮನೆಯಲ್ಲೇ ಮಾಡಿ ರುಚಿಕರ ಸ್ಟ್ರಾಬೆರಿ ಪಾಪಡ್: ಕೇವಲ 5 ಸಾಮಗ್ರಿಗಳಲ್ಲಿ ರೆಡಿ ಆಗುತ್ತೆ ಈ ಫ್ರೂಟ್...

ಮನೆಯಲ್ಲೇ ಮಾಡಿ ರುಚಿಕರ ಸ್ಟ್ರಾಬೆರಿ ಪಾಪಡ್: ಕೇವಲ 5 ಸಾಮಗ್ರಿಗಳಲ್ಲಿ ರೆಡಿ ಆಗುತ್ತೆ ಈ ಫ್ರೂಟ್ ಲೆದರ್

ಸಾಮಾನ್ಯವಾಗಿ ನಾವು ಮಾವಿನ ಹಣ್ಣಿನ ಪಾಪಡ್‌ ಅಥವಾ ಹಪ್ಪಳವನ್ನು ಸವಿದಿರುತ್ತೇವೆ. ಆದರೆ ಈಗ ಸ್ಟ್ರಾಬೆರಿ ಹಣ್ಣಿನಿಂದಲೂ ಅಷ್ಟೇ ರುಚಿಕರವಾದ ಪಾಪಡ್ ಅಥವಾ ‘ಫ್ರೂಟ್ ಲೆದರ್’ ತಯಾರಿಸಬಹುದು. ಇದನ್ನು ಒಮ್ಮೆ ಮಾಡಿಟ್ಟುಕೊಂಡರೆ ಹಲವು ದಿನಗಳ ಕಾಲ ಸ್ನ್ಯಾಕ್ಸ್ ಆಗಿ ಬಳಸಬಹುದು.

ಅಗತ್ಯವಿರುವ ಸಾಮಗ್ರಿಗಳು: 1 ಕೆಜಿ ಫ್ರೆಶ್ ಸ್ಟ್ರಾಬೆರಿ, 2 ಚಮಚ ನೆನೆಸಿದ ಚಿಯಾ ಬೀಜಗಳು (Chia seeds), 2 ಚಮಚ ಸಕ್ಕರೆ, 1 ಚಮಚ ನಿಂಬೆ ರಸ, ಅರ್ಧ ಚಮಚ ವೆನಿಲ್ಲಾ ಎಸೆನ್ಸ್ ಮತ್ತು ಸ್ವಲ್ಪ ಚಾಟ್ ಮಸಾಲಾ.

ತಯಾರಿಸುವ ವಿಧಾನ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  1. ಪ್ಯೂರಿ ತಯಾರಿ: ಸ್ಟ್ರಾಬೆರಿಗಳನ್ನು ತೊಳೆದು ತುಂಡು ಮಾಡಿಕೊಳ್ಳಿ. ಮಿಕ್ಸಿ ಜಾರ್‌ಗೆ ಸ್ಟ್ರಾಬೆರಿ, ಸಕ್ಕರೆ, ನಿಂಬೆ ರಸ, ನೆನೆಸಿದ ಚಿಯಾ ಬೀಜ ಮತ್ತು ವೆನಿಲ್ಲಾ ಎಸೆನ್ಸ್ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. (ಫ್ರೆಶ್ ಸ್ಟ್ರಾಬೆರಿ ಬಳಸಿದರೆ ರುಚಿ ಹೆಚ್ಚು).
  2. ಬೇಯಿಸುವುದು: ಈ ಮಿಶ್ರಣವನ್ನು ಒಂದು ಬಾಣಲೆಗೆ ಸುರಿದು ಮಧ್ಯಮ ಉರಿಯಲ್ಲಿ 10-15 ನಿಮಿಷ ಬೇಯಿಸಿ. ಮಿಶ್ರಣವು ಸಾಸ್‌ನಂತೆ ದಪ್ಪಗಾಗುವವರೆಗೆ ಕೈಯಾಡಿಸಿ.
  3. ಒಣಗಿಸುವುದು (ಬೇಕಿಂಗ್): ಈಗ ಓವನ್ ಅನ್ನು 175° F ಗೆ ಪ್ರಿಹೀಟ್ ಮಾಡಿ. ಬೇಕಿಂಗ್ ಶೀಟ್‌ಗೆ ಪಾರ್ಚ್‌ಮೆಂಟ್ ಪೇಪರ್ ಹಾಕಿ, ಅದರ ಮೇಲೆ ಸ್ಟ್ರಾಬೆರಿ ಮಿಶ್ರಣವನ್ನು ತೆಳುವಾಗಿ ಹರಡಿ. ಇದನ್ನು 3 ರಿಂದ 4 ಗಂಟೆಗಳ ಕಾಲ ಬೇಯಿಸಿ (Dehydrate). ಮಿಶ್ರಣವು ಕೈಗೆ ಅಂಟದಂತಾದಾಗ ಓವನ್‌ನಿಂದ ಹೊರತೆಗೆಯಿರಿ. (ಓವನ್ ಇಲ್ಲದಿದ್ದರೆ ಬಿಸಿಲಿನಲ್ಲಿ 2 ದಿನ ಒಣಗಿಸಬಹುದು).
  4. ಕಟಿಂಗ್: ಮಿಶ್ರಣ ತಣ್ಣಗಾದ ಮೇಲೆ ಪೇಪರ್‌ನಿಂದ ಬೇರ್ಪಡಿಸಿ. ಮೇಲೆ ಸ್ವಲ್ಪ ಚಾಟ್ ಮಸಾಲಾ ಸಿಂಪಡಿಸಿ. ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಅಥವಾ ರೋಲ್ ಮಾಡಿ ಸವಿಯಿರಿ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular