HomeLatest NewsSHOCKING: ಹಾಸಿಗೆಯಲ್ಲಿ ಮಗು ಮೂತ್ರ ಮಾಡಿದ್ದಕ್ಕೆ ಕಂದಮ್ಮನ ಗುಪ್ತಾಂಗವನ್ನೇ ಸುಟ್ಟ ಮಲತಾಯಿ

SHOCKING: ಹಾಸಿಗೆಯಲ್ಲಿ ಮಗು ಮೂತ್ರ ಮಾಡಿದ್ದಕ್ಕೆ ಕಂದಮ್ಮನ ಗುಪ್ತಾಂಗವನ್ನೇ ಸುಟ್ಟ ಮಲತಾಯಿ

ತಿರುವನಂತಪುರಂ: ಮಗು ಮಲಗಿದ್ದಾಗ ಹಾಸಿಗೆಯಲ್ಲಿ ಮೂತ್ರ ಮಾಡಿತು ಎಂಬ ಕಾರಣಕ್ಕೆ ಮಲತಾಯಿಯೊಬ್ಬಳು ಮಗುವಿನ ಗುಪ್ತಾಂಗವನ್ನು ಸುಟ್ಟು ವಿಕೃತಿ ಮೆರೆದಿರುವ ಅಮಾನುಷ ಘಟನೆ ಕೇರಳದಲ್ಲಿ ನಡೆದಿದೆ.

ಉತ್ತರ ಕೇರಳದ ಕಾಂಜಿಕೋಡ್ ಬಳಿ ಈ ದುರಂತ ಸಂಭವಿಸಿದೆ. 5 ವರ್ಷದ ಕಂದಮ್ಮ ಮಲಗಿದ್ದಾಗ ಗೊತ್ತಾಗದೇ ಹಾಸಿಗೆಯಲ್ಲಿ ಮೂತ್ರ ಮಾಡಿದೆ. ಇದೇ ಕಾರಣಕ್ಕೆ ಮಲತಾಯಿ ಮಗುವನ್ನು ಮನಬಂದಂತೆ ಹೊಡೆದು, ಥಳಿಸಿದ್ದಲ್ಲದೇ ಬಿಸಿ ಸೌಟಿನಿಂದ ಬರೆ ಕೊಟ್ಟಿದ್ದಾಳೆ. ಅಷ್ಟೇ ಅಲ್ಲ, ಸೌಟು ಕಾಯಿಸಿ ಮಗುವಿನ ಖಾಸಗಿ ಭಾಗಗಳನ್ನು ಸುಟ್ಟು ಕ್ರೌರ್ಯ ಮೆರೆದಿದ್ದಾಳೆ.

ಇಷ್ಟೆಲ್ಲ ನೋವು ಹಿಂಸೆ ಬಳಿಕವೂ ಮಗುವನ್ನು ಅಂಗನವಾಡಿಗೆ ಕಳುಹಿಸಿದ್ದಾಳೆ. ಅಂಗನವಾಅಡಿಗೆ ಹೋದ ಮಗು ಕುಳಿತುಕೊಳ್ಳಲಾಗದೇ ಕಷ್ಟಪಡುತ್ತಿತ್ತು. ಇದನ್ನು ಗಮನಿಸಿದ ಶಿಕ್ಷಕಿ ಮಗುವನ್ನು ಏನಾಯಿತು? ಎಂದು ವಿಚಾರಿಸಿದ್ದಾಳೆ. ಆಗ ಮಗು ವಿಷಯ ತಿಳಿಸಿದ್ದಾಳೆ. ಶಾಕ್ ಆದ ಶಿಕ್ಷಕಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗುವಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯ ಪೊಲೀಸರು ಮಗುವಿನ ಮಲತಾಯಿಯನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ ಹಾಗೂ ಬಾಲ ನ್ಯಾಯ ಕಾಯ್ದೆಯಡಿ ಮಹಿಳೆ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಆರೈಕೆಗೆ ಒಪ್ಪಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular