ಶಿವಮೊಗ್ಗ : ಚಲಿಸುತ್ತಿದ್ದ KSRTC ಬಸ್ ನ ಸ್ಟೇರಿಂಗ್ ಕಟ್ ಆಗಿದ್ದು, ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪ ಈ ಘಟನೆ ನಡೆದಿದೆ. ಶಿವಮೊಗ್ಗದಿಂದ ಕಟ್ಟೆಹಕ್ಲಿಗೆ ತೆರಳುತ್ತಿದ್ದ KSRTC ಬಸ್ ನ ಸ್ಟೇರಿಂಗ್ ಕಟ್ ಆಗಿದೆ. ಕೂಡಲೇ ಸಮಯಪ್ರಜ್ಞೆಯಿಂದ ಚಾಲಕ ಬಸ್ ನಿಲ್ಲಿಸಿ ಅಪಘಾತ ತಪ್ಪಿಸಿದ್ದಾರೆ.
ಬಸ್ಸಿನಲ್ಲಿ ಸುಮಾರು 50 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರ ಪ್ರಾಣ ಉಳಿದಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

