HomeLive Newsಹೊಸ ತೆರಿಗೆ ಸೆಸ್ ಜಾರಿ: ಫೆಬ್ರವರಿ 1ರಿಂದ ದುಬಾರಿಯಾಗಲಿದೆ ಸಿಗರೇಟ್, ಬೀಡಿ, ತಂಬಾಕು ಉತ್ಪನ್ನ

ಹೊಸ ತೆರಿಗೆ ಸೆಸ್ ಜಾರಿ: ಫೆಬ್ರವರಿ 1ರಿಂದ ದುಬಾರಿಯಾಗಲಿದೆ ಸಿಗರೇಟ್, ಬೀಡಿ, ತಂಬಾಕು ಉತ್ಪನ್ನ

ನವದೆಹಲಿ: ಹೊಸ ತೆರಿಗೆ, ಸೆಸ್ ಜಾರಿ ಹಿನ್ನೆಲೆಯಲ್ಲಿ ಫೆಬ್ರವರಿ 1ರಿಂದ ತಂಬಾಕು ಉತ್ಪನ್ನಗಳ ದರ ಹೆಚ್ಚಳವಾಗಲಿದೆ. ತಂಬಾಕು ಹಾಗೂ ಪಾನ್ ಮಸಾಲಾ ಮೇಲಿನ ಹೊಸ ಸುಂಕ ಜಿಎಸ್ ಟಿ ದರಕ್ಕಿಂತ ಹೆಚ್ಚಿರಲಿದೆ.

ಫೆಬ್ರವರಿ 1ರಿಂದ ಸಿಗರೇಟ್, ಬೀಡಿ, ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾ ಮೇಲೆ ಹೊಸ ಸೆಸ್ ವಿಧಿಸಲಾಗುವುದು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಸಿಗರೇಟ್, ತಂಬಾಕು ಉತ್ಪನ್ನಗಳಿಗೆ ಶೇ.40ರಷ್ಟು ಜಿಎಸ್ ಟಿ ದರ ಇರಲಿದೆ. ಬೀಡಿಗಳಿಫ಼ೆ ಶೇ.18ರಷ್ಟು ಸರಕು ಮತ್ತು ಸೇವಾ ತೆರಿಗೆ ಬೀಳಲಿದೆ. ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುವುದು. ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳು ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಣಕಾಸು ಸಚಿವಾಲಯ ಚೀಯಿಂಗ್ ತಂಬಾಕು, ಜರ್ದಾ, ಸುಗಂಧಿತ ತಂಬಾಕು ಮತ್ತು ಗುಟ್ಕಾ ಪ್ಯಾಕಿಂಗ್ ಯಂತ್ರಗಳ( ಸಾಮರ್ಥ್ಯ ನಿರ್ಣಯ ಮತ್ತು ಸುಂಕ ಸಂಗ್ರಹ) ನಿಯಮ-2026 ಅಧಿಸೂಚನೆ ಹೊರಡಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular