HomeKarnatakaಕನ್ನಡಿಗರನ್ನು ಹೀಯಾಳಿಸಿದ ತಮಿಳುನಾಡು IPS ಅಧಿಕಾರಿ! ಕಿಡಿಕಾರಿದ ವಿಜಯೇಂದ್ರ, ಕ್ಷಮೆಯಾಚನೆಗೆ ಆಗ್ರಹ

ಕನ್ನಡಿಗರನ್ನು ಹೀಯಾಳಿಸಿದ ತಮಿಳುನಾಡು IPS ಅಧಿಕಾರಿ! ಕಿಡಿಕಾರಿದ ವಿಜಯೇಂದ್ರ, ಕ್ಷಮೆಯಾಚನೆಗೆ ಆಗ್ರಹ

ಕನ್ನಡ, ಕನ್ನಡಿಗರು ಹಾಗೂ ಕರ್ನಾಟಕದ ಅಸ್ಮಿತೆಯನ್ನು ಹೀಯಾಳಿಸುವ ರೀತಿಯಲ್ಲಿ ವ್ಯಂಗ್ಯವಾಡಿರುವ ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಪರ ಸಂಘಟನೆಗಳ ಹೋರಾಟವನ್ನು ಅಪಹಾಸ್ಯ ಮಾಡಿರುವ ಅಧಿಕಾರಿಯ ನಡೆ ಉದ್ಧಟತನದ ಪರಮಾವಧಿ ಎಂದು ಕಿಡಿಕಾರಿರುವ ಅವರು, ಕೂಡಲೇ ಕನ್ನಡಿಗರ ಕ್ಷಮೆ ಯಾಚಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕನ್ನಡ, ಕನ್ನಡಿಗ ಹಾಗೂ ಕರ್ನಾಟಕವನ್ನು ಹೀಯಾಳಿಸುವ ಪರಿಯಲ್ಲಿ ವ್ಯಂಗ ಮಾಡಿರುವ ತಮಿಳು ನಾಡು ಮೂಲದ ಐಪಿಎಸ್ ಅಧಿಕಾರಿ ಬಿ.ಎಸ್ ಧನುಷ್ ಕುಮಾರ್ ಅವರ ನಡೆ ಉದ್ಧಟತನದ ಪರಮಾವಧಿ! ಕನ್ನಡಿಗರು ಸೌಹಾರ್ದತೆ, ಬಾಂಧವ್ಯ ಬೆಸೆಯುವ ಸಂಸ್ಕೃತಿಗೆ ಹೆಸರಾದ ಶ್ರೀಮಂತ ಪರಂಪರೆ ಹೊಂದಿರುವ ಹೆಮ್ಮೆಯ ಭಾರತೀಯರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಡು, ನುಡಿ, ಜನ ಹಾಗೂ ಜಲ ಸಂರಕ್ಷಣೆಯ ಪ್ರಶ್ನೆ ಬಂದಾಗ ಸ್ವಾಭಿಮಾನದಿಂದ ದನಿ ಎತ್ತುತ್ತಾರೆ. ಕರ್ನಾಟಕದ ನೆಲ, ಜಲ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಬಳಸಿಕೊಂಡು, ಉದ್ಯಮ‌ ಸ್ಥಾಪನೆ ಮಾಡಿ, ಆದಾಯ ಗಳಿಸುವ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಹೋರಾಟ ನಡೆಸುವ ಕನ್ನಡ ಪರ ಸಂಘಟನೆಗಳ ಕಾಳಜಿಯನ್ನು ವ್ಯಂಗ್ಯ ಮಾಡಿದರೆ, ಅದು ಅವರ ಅಸಹಿಷ್ಣುತೆಯನ್ನು ಸಂಕೇತಿಸುತ್ತದೆ. ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾಗಿ, ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಅಧಿಕಾರಿಯೊಬ್ಬರು ಕನ್ನಡಿಗರನ್ನು ಕೆಣಕುವ ಕುಚೋದ್ಯದ ಪೋಸ್ಟ್ ಮಾಡಿರುವುದು ಇವರ ಸಂಕುಚಿತ ಮನೋಭಾವವನ್ನು ಸಾಕ್ಷೀಕರಿಸುತ್ತದೆ. ತಮಿಳುನಾಡಿನಲ್ಲಿ ತಮಿಳು- ತಮಿಳಿಗ ಹೇಗೆ ಆದ್ಯತೆಯೋ ಕರ್ನಾಟಕದಲ್ಲಿ ಕನ್ನಡ- ಕನ್ನಡಿಗನೂ ಆದ್ಯತೆಯಾಗುವುದು ಸಹಜ ನ್ಯಾಯದ ಪ್ರತೀಕ. ಬಿ.ಎಸ್. ಧನುಷ್ ಕುಮಾರ್ ಅವರ ನಡೆ ಭಾಷಾ ಸಹೋದರತ್ವ ಹಾಗೂ ಬಾಂಧವ್ಯದಲ್ಲಿ ಬಿರುಕು ಮೂಡಿಸುವ ವಿಕೃತ ಮನೋಭಾವವನ್ನು ತೋರಿಸುತ್ತಿದೆ. ಕನ್ನಡಿಗರ ಶಕ್ತಿ ಹಾಗೂ ಪ್ರತಿಭಾ ಸಾಮರ್ಥ್ಯವನ್ನು ಅಪಮಾನಿಸಿರುವ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ಕೂಡಲೇ ಕರ್ನಾಟಕದ ಜನತೆಯ ಕ್ಷಮೆ ಯಾಚಿಸಲಿ. ತಮಿಳುನಾಡು ಸರ್ಕಾರ ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

‘ಪ್ರಜಾತಂತ್ರ ಉಳಿಸಿ – ಅರಾಜಕತೆ ಅಳಿಸಿ’

ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವ ವಿರೋಧಿ ನಿಲುವು ಮತ್ತು ನಡೆಗಳನ್ನು ಖಂಡಿಸಿ ಬಿಜೆಪಿ ವತಿಯಿಂದ ಕೋಲಾರದಲ್ಲಿ ಬೃಹತ್ ಪಾದಯಾತ್ರೆ ನಡೆಸಲಾಯಿತು. ಪಕ್ಷದ ‘ಪ್ರಜಾತಂತ್ರ ಉಳಿಸಿ – ಅರಾಜಕತೆ ಅಳಿಸಿ’ ಅಭಿಯಾನದ ಅಂಗವಾಗಿ ಆಯೋಜಿಸಲಾಗಿದ್ದ ಈ ಪಾದಯಾತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಕೋಲಾರದಲ್ಲಿ ಹರಿದುಬಂದ ಜನಸಾಗರ ಮತ್ತು ಬಿಜೆಪಿ ಕಾರ್ಯಕರ್ತರ ಉತ್ಸಾಹ ರಾಜ್ಯದಲ್ಲಿ ಬದಲಾವಣೆಯ ನಿರೀಕ್ಷೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಬಿ,ವೈ ವಿಜಯೇಂದ್ರ ಹೇಳಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular