ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ತಾವೇ ಸ್ವತಃ ನಿಖರವಾಗಿ ದಾಖಲಿಸಲು ಇ-ಆಡಳಿತ ಇಲಾಖೆಯಿಂದ ಅಭಿವೃದ್ಧಿಪಡಿಸಲಾದ ‘ಬೆಳೆ ಸಮೀಕ್ಷೆ ಮುಂಗಾರು ಹಂಗಾಮು 2026’ ಮೊಬೈಲ್ ಆಪ್ ಅನ್ನು ಬಿಡುಗಡೆ ಮಾಡಲಾಗಿದೆ.
ರೈತರು ತಮ್ಮ ಮೊಬೈಲ್‌ನಲ್ಲಿ ಗೂಗಲ್ ಪ್ಲೇಸ್ಟೋರ್ ಮೂಲಕ ಅಥವಾ ಇಲಾಖೆ ನೀಡಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
*ಬೆಳೆ ಸಮೀಕ್ಷೆಯ ಪ್ರಮುಖ ಪ್ರಯೋಜನಗಳು
ಈ ಆಪ್ ಮೂಲಕ ದಾಖಲಾಗುವ ದತ್ತಾಂಶಗಳನ್ನು ಸರ್ಕಾರದ ವಿವಿಧ ಯೋಜನೆಗಳಿಗೆ ಮೂಲ ಮಾಹಿತಿಯಾಗಿ ಬಳಸಲಾಗುತ್ತದೆ. ಆರ್‌ಟಿಸಿ ಪಹಣಿಯಲ್ಲಿ ಬೆಳೆ ವಿವರಗಳನ್ನು ಉಚಿತವಾಗಿ ದಾಖಲಿಸಲು, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆಹಾನಿ ವರದಿ ಸಿದ್ಧಪಡಿಸಲು ಹಾಗೂ ಬೆಳೆ ವಿಮೆ ಯೋಜನೆಗೆ, ಸರ್ಕಾರದಿಂದ ಬೆಂಬಲ ಬೆಲೆ ಯೋಜನೆಯಡಿ ಬೆಳೆ ಖರೀದಿ ಮಾಡಲು, ರಾಷ್ಟ್ರೀಯ ಮತ್ತು ಗ್ರಾಮೀಣ ಬ್ಯಾಂಕ್‌ಗಳಲ್ಲಿ ಕೃಷಿ/ಬೆಳೆ ಸಾಲ ಮಂಜೂರು ಮಾಡಲು ಹಾಗೂ ಬೆಳೆ ಅಂದಾಜು ವಿಸ್ತೀರ್ಣ ಎಣಿಕೆ ಹಾಗೂ ಬೆಳೆ ಕಟಾವು ಪ್ರಯೋಗಗಳಿಗೆ ಬಳಸಲಾಗುತ್ತದೆ.
*ಜಿಪಿಎಸ್ ಫೋಟೋ ಕಡ್ಡಾಯ:*
ಜಿಲ್ಲೆಯಲ್ಲಿ ಒಟ್ಟು 3,65,493 ಬೆಳೆ ತಾಕುಗಳಿದ್ದು (ಸರ್ವೇ ನಂಬರ್‌ಗಳು), ಆಪ್ ನಲ್ಲಿ ಜಿಯೋ-ರೆಫರೆನ್ಸ್÷್ಡಮತ್ತು ಡಿಜಿಟೈಸ್ಡ್ ಬೆಳೆ ಗ್ರಾಮ ನಕ್ಷೆಯನ್ನು ಅಳವಡಿಸಲಾಗಿದೆ. ರೈತರು ತಮ್ಮ ಜಮೀನಿನ ಗಡಿ ರೇಖೆಯೊಳಗೆ ಸ್ವತಃ ನಿಂತು, ನಿಖರ ಜಿಪಿಎಸ್ ಲೊಕೇಶನ್ ಪಡೆದುಕೊಂಡು, ಬೆಳೆಯ ಛಾಯಾಚಿತ್ರದೊಂದಿಗೆ ವಿವರಗಳನ್ನು ಆಪ್ ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿವಿಧ ಸೌಲಭ್ಯ, ಬರ ಪರಿಹಾರ ಮತ್ತು ಸಬ್ಸಿಡಿಗಳಿಗೆ ರೈತರ ಗುರುತಿನ ಸಂಖ್ಯೆ (ಎಫ್‍ಐಡಿ) ಪಡೆಯುವುದು ಕಡ್ಡಾಯ
ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರತಿ ವಾರ ಸಭೆಗಳನ್ನು ಜರುಗಿಸಿ, ಮುಂಗಾರು ಹಂಗಾಮಿನ ಮಳೆಯಿಂದ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಕೃಷಿ ಚಟುವಟಿಕೆಗಳು ಹಾಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ 2026 ನೇ ಮುಂಗಾರು ಹಂಗಾಮಿನ 1ನೇ ಜೂನನಿಂದ 31 ನೇ ಜುಲೈವರೆಗೆ ವಾಡಿಕೆ ಮಳೆ 275.1 ಮೀ.ಮೀ ಆಗಬೇಕಾಗಿದ್ದು ವಾಸ್ತವ 178.7 ಮೀ.ಮೀ ಮಳೆಯಾಗಿದ್ದು ಶೇ-35 ರಷ್ಟು ಮಳೆ ಪ್ರಮಾಣ ಕೊರತೆಯಾಗಿರುತ್ತದೆ. ಧಾರವಾಡ ಜಿಲ್ಲೆಯ ರೈತರು ಸರ್ಕಾರದ ವಿವಿಧ ಸವಲತ್ತುಗಳನ್ನು, ಬರ ಪರಿಹಾರ ಮತ್ತು ಸಬ್ಸಿಡಿಗಳನ್ನು ಪಡೆಯಲು ರೈತರು ತಮ್ಮ ಪ್ರತಿವೊಂದು ಸರ್ವೆ ನಂಬರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿ, ರೈತರ ಗುರುತಿನ ಸಂಖ್ಯೆ (ಎಫ್‍ಐಡಿ) ಪಡೆಯುವುದು ಕಡ್ಡಾಯವಾಗಿದೆ.
ರೈತರು ಈಆ ನೋಂದಣಿ ಮಾಡಿಸಲು ಪ್ರಮುಖ ದಾಖಲೆಗಳ ವಿವರ: ಆಧಾರ್ ಕಾರ್ಡ್ ನಕಲು ಪ್ರತಿ, ಆಧಾರ್ ಕಾರ್ಡ್‍ಗೆ ಲಿಂಕ್ ಆಗಿರುವ ಸಕ್ರಿಯ ಮೊಬೈಲ್ ಸಂಖ್ಯೆ (ಓಟಿಪಿ ಪರಿಶೀಲನೆಗಾಗಿ). ಇತ್ತೀಚಿನ ಪಹಣಿ (ಆರ್‍ಟಿಸಿ): ಜಮೀನಿನ ಸರ್ವೇ ನಂಬರ್, ಹಿಸ್ಸಾ ನಂಬರ್ ಒಳಗೊಂಡ ಭೂ ದಾಖಲೆಗಾಗಿ. ಬ್ಯಾಂಕ್ ಪಾಸ್ ಬುಕ್ ನಕಲು ಪ್ರತಿ: ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್‍ಎಸ್‍ಸಿ ಕೋಡ್ ಸ್ಪಷ್ಟವಾಗಿರಬೇಕು (ನೇರ ನಗದು ವರ್ಗಾವಣೆಗಾಗಿ). ಪಾಸ್ ಪೋರ್ಟ್ ಅಳತೆಯ ರೈತರ ಇತ್ತೀಚಿನ ಫೆÇೀಟೋ.
ಜಾತಿ ಪ್ರಮಾಣ ಪತ್ರ: ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರಾಗಿದ್ದರೆ ಸಬ್ಸಿಡಿ ಸವಲತ್ತುಗಳಿಗಾಗಿ ಸಲ್ಲಿಸಬೇಕು. ಕುಟುಂಬದ ರೇಷನ್ ಕಾರ್ಡ್ (ಪಡಿತರ ಚೀಟಿ): ಕುಟುಂಬದ ವಿವರಗಳ ಹೊಂದಾಣಿಕೆಗಾಗಿ. ರೈತರು ತಮ್ಮ ಹತ್ತಿರದ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳು, ಸಾಮಾನ್ಯ ಸೇವಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ, ರೇಷ್ಮೆ ಅಥವಾ ಪಶುಸಂಗೋಪನಾ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಿ, ಎಫ್‍ಐಡಿ ಯನ್ನು ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

