ಬೆಂಗಳೂರು : ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ NEET-UG 2026 ಅಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಹಾಗೂ ಇದುವರೆಗೆ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಸೂಚನೆ ನೀಡಿದೆ.
ಆಗಸ್ಟ್ 4ರಿಂದ 8ರವರೆಗೆ ಬೆಂಗಳೂರಿನ KEA ಕಚೇರಿಯಲ್ಲಿ ದಾಖಲೆ ಪರಿಶೀಲನೆ ನಡೆಯಲಿದ್ದು, ಅಭ್ಯರ್ಥಿಗಳು ಆಗಸ್ಟ್ 2ರಂದು ಬಿಡುಗಡೆಗೊಳ್ಳುವ ಲಿಂಕ್ ಮೂಲಕ ಕಡ್ಡಾಯವಾಗಿ ಸ್ಲಾಟ್ ಬುಕ್ ಮಾಡಿಕೊಂಡ ನಂತರವೇ ಪರಿಶೀಲನೆಗೆ ಹಾಜರಾಗಬೇಕು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿದವರು ಹಾಗೂ ಇದುವರೆಗೂ ದಾಖಲೆ ಪರಿಶೀಲನೆ ಮಾಡಿಕೊಳ್ಳದವರ ದಾಖಲೆ ಪರಿಶೀಲನೆ ಆಗಸ್ಟ್ 4ರಿಂದ 8ರವರೆಗೆ #KEA ಕಚೇರಿಯಲ್ಲಿ ನಡೆಯಲಿದೆ.ಆಗಸ್ಟ್ 2ರಂದು ಬಿಡುಗಡೆ ಮಾಡುವ ಲಿಂಕ್ ಮೂಲಕ ಸ್ಲಾಟ್ ಬುಕ್ ಮಾಡಿಕೊಂಡೇ ದಾಖಲೆ ಪರಿಶೀಲನೆಗೆ ಬರಬೇಕು ಎಂದು ಸೂಚಿಸಲಾಗಿದೆ.
ಯಾರೆಲ್ಲ ದಾಖಲೆ ಪರಿಶೀಲನೆಗೆ ಬರಬೇಕು?
NRI Ward, NRI, Foreign Nationals- ಈ ವರ್ಗಗಳನ್ನು ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಬರಬೇಕು.
ಸಿಇಟಿ-2026ಕ್ಕೆ ನೋಂದಣಿ ಮಾಡಿ ಪರಿಶೀಲನಾ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳದಿರುವ ಅಭ್ಯರ್ಥಿಗಳು (ಕನ್ನಡ, ಗ್ರಾಮೀಣ, ಭಾಷಾ/ಧಾರ್ಮಿಕ ಅಲ್ಪಸಂಖ್ಯಾತ ಕ್ಲೇಮ್ ಮಾಡಿರುವ) ದಾಖಲೆ ಪರಿಶೀಲನೆಗೆ ಬರಬೇಕು.
ಹೊಸದಾಗಿ ನೋಂದಣಿ ಮಾಡಿ ಕನ್ನಡ, ಗ್ರಾಮೀಣ, ಭಾಷಾ/ಧಾರ್ಮಿಕ ಅಲ್ಪಸಂಖ್ಯಾತ ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ಕೂಡ ಪರಿಶೀಲನೆಗೆ ಬರಬೇಕು.
ಸ್ಲಾಟ್ ಬುಕ್ ಮಾಡಿಕೊಂಡು ಬರುವ ಅಭ್ಯರ್ಥಿಗಳಿಗೆ ಮಾತ್ರ ಕೆಇಎ ಕಚೇರಿಯಲ್ಲಿ ದಾಖಲೆ ಪರಿಶೀಲನೆ ಮಾಡಲಾಗುತ್ತದೆ.
ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು (ಕ್ಯಾಟಗರಿ – 2 ರಿಂದ ಕ್ಯಾಟಗರಿ-8ರವರೆಗೆ) ಕ್ಲೇಮ್ ಮಾಡಿರುವ ಎಲ್ಲ ಅಭ್ಯರ್ಥಿಗಳು, ಅದೇ ಕಾಲೇಜಿನಲ್ಲಿ ನಡೆಯುವ ದಾಖಲೆ ಪರಿಶೀಲನೆ ಗೆ ಹಾಜರಾಗಬೇಕು. ಕ್ಯಾಟಗರಿ – RC-1 ಮತ್ತು ಕ್ಯಾಟಗರಿ- RC- 9 ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಬರುವ ಅಗತ್ಯ ಇಲ್ಲ.

