HomeLatest News'ರಾಜ್ಯ ಸರ್ಕಾರಿ' ನೌಕರರಿಗೆ ‘ಸಾಧನ ಸಪ್ತಾಹ’ ತರಬೇತಿ ಕಡ್ಡಾಯ ; ಸರ್ಕಾರದಿಂದ ಮಹತ್ವದ ಆದೇಶ

‘ರಾಜ್ಯ ಸರ್ಕಾರಿ’ ನೌಕರರಿಗೆ ‘ಸಾಧನ ಸಪ್ತಾಹ’ ತರಬೇತಿ ಕಡ್ಡಾಯ ; ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು :    ಕರ್ನಾಟಕ ಸರ್ಕಾರವು ತನ್ನ ಎಲ್ಲಾ ಅಧಿಕಾರಿ ಮತ್ತು ನೌಕರರ ಸಾಮರ್ಥ್ಯ ಅಭಿವೃದ್ಧಿಗಾಗಿ ‘ಐಜಿಒಟಿ ಕರ್ಮಯೋಗಿ’ (iGOT Karmayogi) ಆನ್‌ಲೈನ್ ತರಬೇತಿ ವೇದಿಕೆಯನ್ನು ಜಾರಿಗೆ ತಂದಿದೆ. ಈ ಕುರಿತು ಸರ್ಕಾರ ಹೊಸ ಸುತ್ತೋಲೆ ಹೊರಡಿಸಿದೆ.

ಏಪ್ರಿಲ್ 2 ರಿಂದ 8, 2026 ರವರೆಗೆ ‘ಸಾಧನ’ (SADHANA) ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಈ ಅವಧಿಯಲ್ಲಿ ಪ್ರತಿಯೊಬ್ಬ ಸರ್ಕಾರಿ ನೌಕರರು ಕನಿಷ್ಠ 4 ಗಂಟೆಗಳ ಆನ್‌ಲೈನ್ ತರಬೇತಿಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ ನೌಕರರ ಅನುಕೂಲಕ್ಕಾಗಿ ಈಗಾಗಲೇ ಈ ವೇದಿಕೆಯಲ್ಲಿ 88 ಕನ್ನಡ ತರಬೇತಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿದೆ   ತರಬೇತಿ ಪಡೆಯಲು https://igotkarmayogi.gov.in ಗೆ ಭೇಟಿ ನೀಡಬಹುದು.

ಕರ್ನಾಟಕ ರಾಜ್ಯ ಸರ್ಕಾರವು ಆನ್‌ಲೈನ್ ತರಬೇತಿ ಕಾರ್ಯಕ್ರಮವನ್ನು ಜಾರಿಗೆ ತರಲು ಸಾಮರ್ಥ್ಯ ಅಭಿವೃದ್ಧಿ ಆಯೋಗ ಮತ್ತು ಕರ್ಮಯೋಗಿ ಭಾರತ್ ಇವರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ/ನೌಕರರನ್ನು IGOT ಕರ್ಮಯೋಗಿ ಭಾರತ್ ವೇದಿಕೆಯಲ್ಲಿ onboard ಮಾಡಲಾಗಿದೆ. IGOT ಕರ್ಮಯೋಗಿ ವೆಬ್‌ಸೈಟ್‌ನಲ್ಲಿ ನೌಕರರಿಗೆ ಅನುಕೂಲವಾಗುವಂತೆ ಕನ್ನಡದಲ್ಲಿ ಈಗಾಗಲೇ 88 ತರಬೇತಿ ವಿಡಿಯೋಗಳನ್ನು upload ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ ಸುಧಾರಣೆ)ಯ ಜಾಲತಾಣ https://dparar karnataka.gov.in ರಲ್ಲಿನ “ಸೇವೆಗಳು ಮತ್ತು ಯೋಜನೆಗಳು” ವಿಭಾಗದಲ್ಲಿ IGOT ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಮಾಹಿತಿಗಾಗಿ upload ಮಾಡಲಾಗಿದೆ.

ಏನಿದೆ ಆದೇಶದಲ್ಲಿ..?

ಸಾಮರ್ಥ್ಯ ಅಭಿವೃದ್ಧಿ ಆಯೋಗವು ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹಾಗೂ ಕರ್ಮಯೋಗಿ ಭಾರತ್ ಸಹಯೋಗದೊಂದಿಗೆ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ/ಕೇಂದ್ರಾಡಳಿತ ಪ್ರದೇಶಗಳಲ್ಲಿ ದಿನಾಂಕ: 02-08, ಏಪ್ರಿಲ್ 2026ರ ಅವಧಿಯಲ್ಲಿ “SADHANA (Strengthening Adaptive Development and Human Aptitude for National Advancement) Saptah” ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೆಳಕಂಡ ಅಂಶವನ್ನು ಪಾಲಿಸುವಂತೆ ಸೂಚಿಸಲಾಗಿದೆ.1ಸಾಧನ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರು IGOT ಕರ್ಮಯೋಗಿ ವೇದಿಕೆಯಲ್ಲಿ ಕನಿಷ್ಠ ನಾಲ್ಕು ಗಂಟೆಗಳ ಕಲಿಕೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ಉದ್ದೇಶಕ್ಕಾಗಿ IGOT ಕರ್ಮಯೋಗಿ ವೇದಿಕೆಯಲ್ಲಿ ತರಬೇತಿಗಳನ್ನು ಪಡೆಯಲು ತಮ್ಮ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರು ಕಡ್ಡಾಯವಾಗಿ ತರಬೇತಿ ಪಡೆಯಲು ನಿರ್ದೇಶಿಸುವಂತೆ ತಿಳಿಸಲಾಗಿದೆ.

IGOT ವೇದಿಕೆಯಲ್ಲಿ ತರಬೇತಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಈ ಕೆಳಕಂಡ ಕ್ರಮಗಳನ್ನು ಅನುಸರಿಸಬಹುದು:

Web browser 3 https://igotkarmayogi.gov.in ಮಾಡಿಕೊಳ್ಳುವುದು. Login Option ಆಯ್ಕೆ ಮಾಡಿ, ಅದರಲ್ಲಿ Login with OTP ಮೂಲಕ ತಮ್ಮ ಮೊಬೈಲ್ ಸಂಖ್ಯೆಯನ್ನು (HRMSಗೆ ನೀಡಿರುವ ಮೊಬೈಲ್ ಸಂಖ್ಯೆ) ನಮೂದಿಸಿ OTP ಪಡೆದು ಲಾಗಿನ್ ಆಗುವುದು.

Search Option ನಲ್ಲಿ ನೀವು ಕಲಿಯಲು ಇಚ್ಛಿಸುವ ಯಾವುದೇ ವಿಷಯ/ಕೋರ್ಸ್ ಸೂಚಿಸಿ ಕಲಿಕೆಯನ್ನು ಮುಂದುವರಿಸಬಹುದು.

Explore content option , Languages option ಭಾಷೆಯನ್ನು ಆಯ್ಕೆ ಮಾಡಿ, ಲಭ್ಯವಿರುವ ತರಬೇತಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular