ನವದೆಹಲಿ: 2026ರ ಫಿಫಾ ವಿಶ್ವಕಪ್‌ನ ರೌಂಡ್ ಆಫ್ 16 ಪಂದ್ಯದಲ್ಲಿ ಬ್ರೆಜಿಲ್ ತಂಡ ನಾರ್ವೆ ವಿರುದ್ಧ 2-1 ಅಂತರದಿಂದ ಸೋತ ಬಳಿಕ, ಬ್ರೆಜಿಲ್‌ನ ಸ್ಟಾರ್ ಫುಟ್ಬಾಲ್ ಆಟಗಾರ ನೇಮರ್ ಜೂನಿಯರ್ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. 34 ವರ್ಷದ ನೇಮರ್, 16 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಭಾವನಾತ್ಮಕ ವಿದಾಯ ಹೇಳಿದ್ದಾರೆ.
ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಪಂದ್ಯದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನೇಮರ್, ಕಣ್ಣೀರಿನ ಧ್ವನಿಯಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ನಾನು ಪ್ರಯತ್ನಿಸಿದೆ… ನಿಜವಾಗಿಯೂ ಪ್ರಯತ್ನಿಸಿದೆ. ನನ್ನ ಅಂತಾರಾಷ್ಟ್ರೀಯ ಪಯಣ ಇಲ್ಲಿಯೇ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಆರಂಭವಾಗಿತ್ತು, ಈಗ ಇದೇ ಮೈದಾನದಲ್ಲಿ ಮುಕ್ತಾಯವಾಗುತ್ತಿದೆ. ನನ್ನ ಬ್ರೆಜಿಲ್ ಅಧ್ಯಾಯ ಇಲ್ಲಿಗೆ ಮುಗಿದಿದೆ,” ಎಂದು ಹೇಳಿದರು. ಈ ಪಂದ್ಯದಲ್ಲಿ ಬ್ರೆಜಿಲ್ ಪರ ಏಕೈಕ ಗೋಲನ್ನು ನೇಮರ್ ಪೆನಾಲ್ಟಿ ಮೂಲಕ ದಾಖಲಿಸಿದರು.
16 ವರ್ಷಗಳ ಸ್ಮರಣೀಯ ಪಯಣ
2010ರ ಆಗಸ್ಟ್ 10ರಂದು ಕೇವಲ 18ನೇ ವಯಸ್ಸಿನಲ್ಲಿ ಇದೇ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಬ್ರೆಜಿಲ್ ಪರ ಮೊದಲ ಗೋಲು ಬಾರಿಸಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಪದಾರ್ಪಣೆ ಮಾಡಿದ ನೇಮರ್, 16 ವರ್ಷಗಳ ಬಳಿಕ ಅದೇ ಮೈದಾನದಲ್ಲಿ ತಮ್ಮ ವಿದಾಯವನ್ನು ಘೋಷಿಸಿರುವುದು ವಿಶೇಷವಾಗಿದೆ.
ಅಭಿಮಾನಿಗಳ ಭಾವುಕ ಪ್ರತಿಕ್ರಿಯೆ
ನೇಮರ್ ನಿವೃತ್ತಿ ಘೋಷಣೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಭಾವುಕ ಸಂದೇಶಗಳನ್ನು ಹಂಚಿಕೊಂಡಿದ್ದಾರೆ. ರಾಜನಾಗಬೇಕಿದ್ದ ರಾಜಕುಮಾರ… ಆದರೆ ಅವರು ನಿಜವಾಗಿಯೂ ತಮ್ಮ ಶ್ರೇಷ್ಠ ಪ್ರಯತ್ನ ಮಾಡಿದರು,” ಎಂದು ಬರೆದಿದ್ದಾರೆ.
ಮತ್ತೊಬ್ಬರು,ಒಂದು ಯುಗಕ್ಕೆ ಅಂತ್ಯ. ನಮಗೆ ನೀಡಿದ ಮನರಂಜನೆ, ಅದ್ಭುತ ಕ್ಷಣಗಳು ಮತ್ತು ನೆನಪುಗಳಿಗೆ ಧನ್ಯವಾದಗಳು. ನೀವು ಸದಾ ದಂತಕಥೆ,” ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬ ಅಭಿಮಾನಿ,ಜನರು ಅವರು ಗೆಲ್ಲದ ಕಿರೀಟಗಳನ್ನು ನೆನಪಿಸಿಕೊಳ್ಳಬಹುದು. ಆದರೆ ನಾನು ಅವರು ಕೊಟ್ಟ ಸಂತೋಷವನ್ನು ನೆನಪಿಸಿಕೊಳ್ಳುತ್ತೇನೆ. ರಾಜನಾಗದ ರಾಜಕುಮಾರನೇ ನೀನು,” ಎಂದು ಬರೆದುಕೊಂಡಿದ್ದಾರೆ ಮತ್ತೊಬ್ಬರು,
“ಧನ್ಯವಾದಗಳು ನೇಮರ್. ನಿಮ್ಮ ಅದ್ಭುತ ಆಟ, ಗೋಲುಗಳು ಮತ್ತು ಮಾಯಾಜಾಲದ ಪ್ರದರ್ಶನಗಳಿಂದ ಫುಟ್ಬಾಲ್ ಲೋಕವನ್ನು ಬೆಳಗಿಸಿದ್ದೀರಿ. ನೀವು ಎಂದೆಂದಿಗೂ ದಂತಕಥೆ,” ಎಂದು ಶ್ಲಾಘಿಸಿದ್ದಾರೆ.ಇನ್ನೋರ್ವ ಅಭಿಮಾನಿ “ಅತ್ಯಂತ ಕಠಿಣ ಸೋಲಿನ ನಂತರವೇ ಕೆಲವು ವಿದಾಯಗಳು ಬರುತ್ತವೆ. ಬ್ರೆಜಿಲ್‌ಗಾಗಿ ನೀವು ನೀಡಿದ ಎಲ್ಲ ಸೇವೆಗೂ ಧನ್ಯವಾದಗಳು. ನಿಮಗೆ ನಮ್ಮ ಗೌರವ ಸದಾ ಇರುತ್ತದೆ,” ಎಂದು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.

