HomeLatest NewsBIG NEWS: ಕಾಲ್ತುಳಿತ ದುರಂತದಲ್ಲಿ ಬಲಿಯಾದ ಮಗಳ ಕಿವಿಯೋಲೆ ಕಳುವು: ದೂರು ದಾಖಲಿಸಿದ ದಿವ್ಯಾಂಶಿ ತಾಯಿ

BIG NEWS: ಕಾಲ್ತುಳಿತ ದುರಂತದಲ್ಲಿ ಬಲಿಯಾದ ಮಗಳ ಕಿವಿಯೋಲೆ ಕಳುವು: ದೂರು ದಾಖಲಿಸಿದ ದಿವ್ಯಾಂಶಿ ತಾಯಿ

ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ಸಂಭವಿಸಿ 11 ಜನರು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ದಿವ್ಯಾಂಶಿ ಎಂಬ ಯುವತಿ ಕೂಡ ಮೃತಪಟ್ಟಿದ್ದರು. ದಿವ್ಯಾಂಶಿ ಅವರ ಕಿವಿಯೋಲೆ ಕಳುವಾಗಿತ್ತು. ಪ್ರಕರಣ ಸಂಬಂಧ ದಿವ್ಯಾಂಶಿ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮೃತ ದಿವ್ಯಾಂಶಿ ಅವರ ತಾಯಿ ಅಶ್ವಿನಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಗಳ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಆಕೆಯ ಕಿವಿಯಲ್ಲಿದ್ದ ಓಲೆ ಕಳುವಾಗಿದ್ದು, ಬೌರಿಂಗ್ ಆಸ್ಪತ್ರೆ ವಿರುದ್ಧ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೂರು ನೀಡಿದ ಬಳಿಕ ಮಾತನಾಡಿದ ದಿವ್ಯಾಂಶಿ ತಾಯಿ ಅಶ್ವಿನಿ, ದಿವ್ಯಾಂಶಿ ಹುಟ್ಟುಹಬ್ಬದ ವೇಳೆ ಆಕೆಯ ಮಾವ ಓಲೆಯನ್ನು ಉಡುಗೊರೆಯಾಗಿ ನಿದಿದ್ದರು. ಆ ಓಲೆ ಮೇಲೆ ಆಕೆಗೆ ತುಂಬಾ ಅಟ್ಯಾಚ್ ಮೆಂಟ್ ಇತ್ತು. ಹಾಗಾಗಿ ಆ ಓಲೆ ಬೇಕು ಎಂದು ಕೇಳಿದ್ದೇನೆ. ಮಗಳು ತುಂಬಾ ಆಸೆ ಪಟ್ಟು ಅದನ್ನು ಹಾಕಿಕೊಂಡಿದ್ದಳು. ಒಂದೂವರೆ ವರ್ಷದಿಂದ ಕಿವಿಯೋಲೆ ಬಿಚ್ಚಿರಲಿಲ್ಲ. ಮಗಳ ಮರಣೋತ್ತರ ಪರೀಕ್ಷೆ ಬಳಿಕ ಕಿವಿಯೋಲೆ ಕಾಣೆಯಾಗಿದೆ. ಹಾಗಾಗಿ ಬೌರಿಂಗ್ ಆಸ್ಪತ್ರೆ ವಿರುದ್ಧ ದೂರು ನೀಡಿದ್ದೇನೆ. ಆಸ್ಪತ್ರೆಗೆ ಹೋಗಿ ವಿಚಾರಿಸಿದರೆ ಯಾರೂ ಸರಿಯಾಗಿ ಸ್ಪಂದಿಸಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ದಿವ್ಯಾಂಶಿ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular