HomeLatest Newsನಮ್ಮಿಬ್ಬರ ನಡುವೆ ಯಾವುದೇ ಜಗಳ ನಡೆದಿಲ್ಲ: ಪತ್ನಿ ಕೋಪಗೊಂಡಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಆಸೀಸ್ ನಾಯಕ...

ನಮ್ಮಿಬ್ಬರ ನಡುವೆ ಯಾವುದೇ ಜಗಳ ನಡೆದಿಲ್ಲ: ಪತ್ನಿ ಕೋಪಗೊಂಡಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್

ಸಿಡ್ನಿಯಲ್ಲಿರುವ ತಮ್ಮ ನಿವಾಸದ ಎದುರು ಪತ್ನಿ ಬೆಕಿ ಜೊತೆ ತೀವ್ರವಾಗಿ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಕೊನೆಗೂ ಮೌನ ಮುರಿದಿದ್ದಾರೆ. 2018ರ ಸ್ಯಾಂಡ್ ಪೇಪರ್ ವಿವಾದ ಮತ್ತೆ ಭುಗಿಲೆದ್ದಿರುವ ನಡುವೆಯೇ ಈ ವಿಡಿಯೋ ಕಾಣಿಸಿಕೊಂಡಿದ್ದರಿಂದ ದಂಪತಿಗಳ ನಡುವೆ ಮನಸ್ತಾಪ ಉಂಟಾಗಿದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಕಮಿನ್ಸ್, ತಮ್ಮಿಬ್ಬರ ನಡುವೆ ಯಾವುದೇ ಜಗಳ ನಡೆದಿಲ್ಲ ಬದಲಾಗಿ ಮಾಜಿ ಆಟಗಾರ ಉಸ್ಮಾನ್ ಖವಾಜಾ ಅವರ ವರ್ತನೆಯಿಂದ ಪತ್ನಿ ಬೆಕಿ ತೀವ್ರ ಅಸಮಾಧಾನಗೊಂಡಿದ್ದರು ಎಂದು ತಿಳಿಸಿದ್ದಾರೆ.

ಶುಕ್ರವಾರ ಸಿಡ್ನಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಮಿನ್ಸ್, ವೈರಲ್ ವಿಡಿಯೋ ಕುರಿತಾದ ಎಲ್ಲಾ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ. ತಮ್ಮ ಪತ್ನಿ ಬೆಕಿ ಅವರು ಖವಾಜಾ ಮಾಡಿರುವ ಆರೋಪಗಳಿಂದ ತುಂಬಾ ಬೇಸರಗೊಂಡಿದ್ದರು ಮತ್ತು ಆ ವಿಚಾರವಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು ಎಂದು ಹೇಳಿದ್ದಾರೆ. ಅಲ್ಲದೆ ಈ ವಿವಾದದಿಂದ ಸಾಕಷ್ಟು ಮಂದಿಗೆ ನೋವಾಗಿದೆ ಆದ್ದರಿಂದ ಸತ್ಯವನ್ನು ಪ್ರಾಮಾಣಿಕವಾಗಿ ಹೊರಹಾಕುವಂತೆ ಪತ್ನಿ ತಮಗೆ ಧೈರ್ಯ ತುಂಬಿದ್ದರು ಎಂದು ಕಮಿನ್ಸ್ ವಿವರಿಸಿದ್ದಾರೆ.

ಇದೇ ವೇಳೆ ತಮ್ಮ ಮನೆಯ ಹೊರಗೆ ಮಾಧ್ಯಮಗಳ ಕ್ಯಾಮೆರಾಗಳು ತಮ್ಮ ಕುಟುಂಬವನ್ನು ಹಿಂಬಾಲಿಸುತ್ತಿರುವುದಕ್ಕೆ ಕಮಿನ್ಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಂಟೂವರೆ ವರ್ಷಗಳ ಹಿಂದೆಯೇ ಮುಗಿದುಹೋದ ವಿಚಾರವನ್ನು ಈಗ ಮತ್ತೆ ಕೆದಕಲಾಗುತ್ತಿದೆ. ಮನೆಯ ಮುಂದೆ ಪುಟ್ಟ ಮಗಳೊಂದಿಗೆ ಸಮಯ ಕಳೆಯುವಾಗಲೂ ಕ್ಯಾಮೆರಾಗಳು ಬೆನ್ನಟ್ಟುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ ಎಂದು ಅವರು ಬೇಸರ ಹೊರಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಸ್ಮಾನ್ ಖವಾಜಾ ಅವರು ತಮ್ಮ ಸಬ್ರ್ ಎಂಬ ಆತ್ಮಚರಿತ್ರೆಯಲ್ಲಿ 2018ರ ದಕ್ಷಿಣ ಆಫ್ರಿಕಾ ಪ್ರವಾಸದ ಬಾಲ್ ಟ್ಯಾಂಪರಿಂಗ್ ಪ್ರಕರಣದ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಬರೆದುಕೊಂಡಿದ್ದರು. ಚೆಂಡು ವಿರೂಪಗೊಳಿಸುವ ಯೋಜನೆ ಇಡೀ ತಂಡಕ್ಕೆ ತಿಳಿದಿತ್ತು ಮತ್ತು ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರನ್ನು ಬಲಿಪಶು ಮಾಡಲಾಯಿತು ಎಂದು ಖವಾಜಾ ಆರೋಪಿಸಿದ್ದರು. ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಕಮಿನ್ಸ್, ಇದೊಂದು ಶುದ್ಧ ಸುಳ್ಳು ಎಂದಿದ್ದಾರೆ. ಆದರೂ ತಮ್ಮ ಮಾಜಿ ಸಹ ಆಟಗಾರನ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಈ ಕಹಿ ಘಟನೆಯನ್ನು ಮರೆತು ಮುಂದೆ ಸಾಗಬೇಕೆಂದು ಆಶಿಸಿದ್ದಾರೆ.


For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular