ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಚುನಾವಣೆಗೆ ಮುನ್ನ ರಾಜ್ಯದ ಜನತೆಗೆ ಭರ್ಜರಿ ಉಡುಗೊರೆ ಪ್ರಕಟಿಸಿದ್ದಾರೆ. ಪಡಿತರ ಚೀಟಿ ಹೊಂದಿದವರು ಮತ್ತು ಪುನರ್ವಸತಿ ಶಿಬಿರಗಳಲ್ಲಿ ವಾಸಿಸುವ 2.22 ಕೋಟಿ ಅರ್ಹರಿಗೆ ಪೊಂಗಲ್ ಹಬ್ಬಕ್ಕೆ 3000 ರೂ. ನಗದು ಸೇರಿ ವಿವಿಧ ಉಡುಗೊರೆ ನೀಡುವುದಾಗಿ ತಿಳಿಸಿದ್ದಾರೆ.
ತಮಿಳುನಾಡಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಪೊಂಗಲ್ ಹಬ್ಬವನ್ನು ಜನವರಿ 15ರಂದು ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಸರ್ಕಾರ ಹಣ ಸೇರಿ ವಿವಿಧ ಉಡುಗೊರೆಗಳನ್ನು ನೀಡುತ್ತದೆ. ಈ ಬಾರಿ ಪಡಿತರದಾರರಿಗೆ ಗಿಫ್ಟ್ ಜೊತೆ ಹಣ ಕೂಡ ಘೋಷಿಸಲಾಗಿದೆ.
ಈ ವರ್ಷ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಪ್ರತಿ ವರ್ಷಕ್ಕಿಂತ ಹೆಚ್ಚಿನ ಕೊಡುಗೆ ನೀಡಲಾಗುತ್ತಿದೆ. ಒಂದು ಕೆಜಿ ಅಕ್ಕಿ, ಸಕ್ಕರೆ, ಕಬ್ಬು, ಒಂದು ಗಿಫ್ಟ್ ಹ್ಯಾಂಪರ್, 3000 ರೂ. ನಗದು, ಒಂದು ಸೀರೆ, ಧೋತಿ ವಿತರಣೆ ಮಾಡಲಿದ್ದು, 6936.17 ಕೋಟಿ ರೂ. ವಿನಿಯೋಗಿಸಲಾಗುವುದು.

