HomeKarnatakaBIG NEWS: ಬೆಂಗಳೂರಿನಲ್ಲಿ ಮತ್ತೊಂದು ದುರಂತ: ಅಪಾರ್ಟ್ ಮೆಂಟ್ ನಿಂದ ಬಿದ್ದು SSLC ವಿದ್ಯಾರ್ಥಿನಿ ಸಾವು

BIG NEWS: ಬೆಂಗಳೂರಿನಲ್ಲಿ ಮತ್ತೊಂದು ದುರಂತ: ಅಪಾರ್ಟ್ ಮೆಂಟ್ ನಿಂದ ಬಿದ್ದು SSLC ವಿದ್ಯಾರ್ಥಿನಿ ಸಾವು

ಬೆಂಗಳೂರು: ಅಪಾರ್ಟ್ ಮೆಂಟ್ ನಿಂದ ಬಿದ್ದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬೆಳ್ಳಂದೂರಿನಲ್ಲಿ ನಡೆದಿದೆ.

ಬೆಳ್ಳಂದೂರಿನ ಕ್ಲಾಸಿಕ್ ಅಪಾರ್ಟ್ ಮೆಂಟ್ ನ 12 ನೇ ಮಹಡಿಯಿಂದ ಬಿದ್ದು ನಿಗೂಢವಾಗಿ ವಿಧ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಜಸ್ಸಿಕಾ (14) ಮೃತ ವಿದ್ಯಾರ್ಥಿನಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಸ್ಸಿಕಾ ತಾನು ವಾಸವಾಗಿದ್ದ ಮಹಡಿಯ ಮೇಲಿನ ಮಹಡಿಗೆ ಹೋಗಿದ್ದಳು. ಈ ವೇಳೆ ಏಕಾಏಕಿ ಮಹಡಿಯ ಮೇಲಿನಿಂದ ಬಿದ್ದಿದ್ದಾಳೆ. ಘಟನೆಯ ವೇಳೆ ಜಸ್ಸಿಕಾ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ.

ತಮಿಳುನಾಡಿನ ಮೂಲದ ಜಸ್ಸಿಕಾ ಕುಟುಂಬ ಎರಡು ವರ್ಷಗಳಿಂದ ಬೆಳ್ಳಂದೂರಿನ ಕ್ಲಾಸಿಕ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿತ್ತು. ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ವಿದ್ಯಾರ್ಥಿನಿ ಜಸ್ಸಿಕಾ ಶಾಲೆಗೆ ಸರಿಯಾಗಿ ಹೋಗುತ್ತಿರಲಿಲ್ಲ ಎನ್ನಲಾಗಿದೆ. ಇದೀಗ ಏಕಾಏಕಿ ಅಪಾರ್ಟ್ ಮೆಂಟ್ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಬೆಳ್ಳಂದೂರು ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular