HomeLatest Newsರಾಜ್ಯದ SSLC ಮೌಲ್ಯಮಾಪಕರಿಗೆ ಗುಡ್ ನ್ಯೂಸ್:ಮೌಲ್ಯಮಾಪನ ಸಂಭಾವನೆ ಶೇ. 5ರಷ್ಟು ಹೆಚ್ಚಳ ಯಾವ ಹುದ್ದೆಗೆ ಎಷ್ಟು...

ರಾಜ್ಯದ SSLC ಮೌಲ್ಯಮಾಪಕರಿಗೆ ಗುಡ್ ನ್ಯೂಸ್:ಮೌಲ್ಯಮಾಪನ ಸಂಭಾವನೆ ಶೇ. 5ರಷ್ಟು ಹೆಚ್ಚಳ ಯಾವ ಹುದ್ದೆಗೆ ಎಷ್ಟು ಹಣ ಸಿಗಲಿದೆ?

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಗೆ ಚಾಲನೆ ನೀಡಿದೆ. ಏಪ್ರಿಲ್ 8ರಿಂದ ರಾಜ್ಯಾದ್ಯಂತ ಮೌಲ್ಯಮಾಪನ ಕಾರ್ಯ ಆರಂಭವಾಗಲಿದ್ದು, ಈ ಬಾರಿ ಮೌಲ್ಯಮಾಪನದಲ್ಲಿ ತೊಡಗುವ ಶಿಕ್ಷಕರು ಮತ್ತು ಅಧಿಕಾರಿಗಳ ಗೌರವ ಸಂಭಾವನೆಯನ್ನು ಶೇ. 5ರಷ್ಟು ಹೆಚ್ಚಳ ಮಾಡಿ ಮಂಡಳಿ ಆದೇಶಿಸಿದೆ.

ಮೌಲ್ಯಮಾಪನದ ಪ್ರಮುಖ ದಿನಾಂಕಗಳು:

ಏಪ್ರಿಲ್ 7: ಉಪ ಮುಖ್ಯ ಮೌಲ್ಯಮಾಪಕರು ಕೇಂದ್ರಗಳಿಗೆ ಹಾಜರಾಗಬೇಕು.

ಏಪ್ರಿಲ್ 8: ಸಹಾಯಕ ಮೌಲ್ಯಮಾಪಕರು ವರದಿ ಮಾಡಿಕೊಳ್ಳಬೇಕು. ಅಂದಿನಿಂದಲೇ ಮೌಲ್ಯಮಾಪನ ಪ್ರಕ್ರಿಯೆ ಶುರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏಪ್ರಿಲ್ 9: ಹಿಂದಿ ಮತ್ತು ಸಂಸ್ಕೃತ (ತೃತೀಯ ಭಾಷೆ) ವಿಷಯಗಳ ಮೌಲ್ಯಮಾಪನ ಆರಂಭ.

ಏಪ್ರಿಲ್ 18: ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಲು ನೀಡಲಾದ ಅಂತಿಮ ಗಡುವು.

ಹೆಚ್ಚಾದ ಗೌರವ ಸಂಭಾವನೆ

ಈ ಬಾರಿ ಮೌಲ್ಯಮಾಪನ ಕಾರ್ಯದಲ್ಲಿ ತೊಡಗುವ ವಿವಿಧ ಹಂತದ ಅಧಿಕಾರಿಗಳ ಸಂಭಾವನೆಯನ್ನು ಪರಿಷ್ಕರಿಸಲಾಗಿದೆ. ವಿವರ ಇಲ್ಲಿದೆ:

ಹುದ್ದೆಕಳೆದ ವರ್ಷ (₹)ಈ ಬಾರಿ – 2026 (₹)
ಮುಖ್ಯ ಅಧೀಕ್ಷಕರು240250
ಉಪ ಅಧೀಕ್ಷಕರು229239
ಕಸ್ಟೋಡಿಯನ್216225
ಕೊಠಡಿ ಮೇಲ್ವಿಚಾರಕ281289
ಸ್ಥಾನಿಕ ಜಾಗೃತ ದಳ10321114

ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಒಟ್ಟು 262 ಕೇಂದ್ರಗಳಲ್ಲಿ ಮೌಲ್ಯಮಾಪನ ಕಾರ್ಯ ನಡೆಯಲಿದ್ದು, ಏಪ್ರಿಲ್ 18ರೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮೌಲ್ಯಮಾಪನ ಮುಗಿದ ನಂತರವಷ್ಟೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಮಂಡಳಿಯ ನಿರ್ದೇಶಕ ಗೋಪಾಲಕೃಷ್ಣ ಹೆಚ್.ಎನ್. ತಿಳಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular