HomeJobsJOB ALERT : SSCಯಿಂದ 1,748 ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹1.12 ಲಕ್ಷದವರೆಗೆ...

JOB ALERT : SSCಯಿಂದ 1,748 ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹1.12 ಲಕ್ಷದವರೆಗೆ ವೇತನ!

ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ಎದುರು ನೋಡುತ್ತಿರುವ ಅಭ್ಯರ್ಥಿಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್‌ (SSC) ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ವಿವಿಧ ಸಚಿವಾಲಯಗಳು, ಇಲಾಖೆಗಳು ಹಾಗೂ ಇಂಡಿಯಾ ಮೆಟಿಯೋರಾಲಾಜಿಕಲ್ ಡಿಪಾರ್ಟ್‌ಮೆಂಟ್‌ (IMD)ನಲ್ಲಿ ಖಾಲಿ ಇರುವ ಜೂನಿಯರ್ ಎಂಜಿನಿಯರ್‌ (JE) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.

ಈ ಅಧಿಸೂಚನೆಯ ಮೂಲಕ ಒಟ್ಟು 1,748 ಜೂನಿಯರ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಟೆಲಿಕಾಂ ಸೇರಿದಂತೆ ವಿವಿಧ ಎಂಜಿನಿಯರಿಂಗ್ ವಿಭಾಗಗಳಲ್ಲಿ ಹುದ್ದೆಗಳು ಲಭ್ಯವಿವೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಶೈಕ್ಷಣಿಕ ಅರ್ಹತೆ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ, ಬಿಎಸ್ಸಿ, ಬಿಇ ಅಥವಾ ಬಿಟೆಕ್ ಪದವಿ ಪಡೆದಿರಬೇಕು. ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್, ಟೆಲಿಕಾಂ, ಕಂಪ್ಯೂಟರ್ ಸೈನ್ಸ್, ಐಟಿ, ಇನ್‌ಸ್ಟ್ರುಮೆಂಟೇಶನ್ ಸೇರಿದಂತೆ ವಿವಿಧ ಎಂಜಿನಿಯರಿಂಗ್ ವಿಭಾಗಗಳಲ್ಲಿ ಪದವಿ ಪಡೆದ ಅಭ್ಯರ್ಥಿಗಳು, ಹುದ್ದೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲವು ಹುದ್ದೆಗಳಿಗೆ ಅಧಿಸೂಚನೆಯಲ್ಲಿ ಸೂಚಿಸಿರುವಂತೆ ಸಂಬಂಧಿತ ಕೆಲಸದ ಅನುಭವವೂ ಕಡ್ಡಾಯವಾಗಿರುತ್ತದೆ.

ವಯೋಮಿತಿ

ಅಭ್ಯರ್ಥಿಗಳ ವಯಸ್ಸು 2026ರ ಆಗಸ್ಟ್ 1ರ ವೇಳೆಗೆ 30ರಿಂದ 32 ವರ್ಷಗಳೊಳಗೆ ಇರಬೇಕು. ಸರ್ಕಾರದ ನಿಯಮಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

  • ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು – 5 ವರ್ಷ

  • ಒಬಿಸಿ ಅಭ್ಯರ್ಥಿಗಳು – 3 ವರ್ಷ

  • ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು – 10ರಿಂದ 15 ವರ್ಷಗಳವರೆಗೆ

ಅರ್ಹ ಅಭ್ಯರ್ಥಿಗಳು 2026ರ ಸೆಪ್ಟೆಂಬರ್ 22ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ

ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.100 ಅರ್ಜಿ ಶುಲ್ಕ ಪಾವತಿಸಬೇಕು. ಮಹಿಳೆಯರು, ಎಸ್‌ಸಿ, ಎಸ್‌ಟಿ ಹಾಗೂ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳ ಆಯ್ಕೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಹಾಗೂ ದಾಖಲೆ ಪರಿಶೀಲನೆ ಮೂಲಕ ನಡೆಸಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.35,400ರಿಂದ ರೂ.1,12,400ರವರೆಗೆ ವೇತನ ದೊರೆಯಲಿದೆ.

ರಾತ ಪರೀಕ್ಷೆಯ ವಿಧಾನ

ಜೂನಿಯರ್ ಎಂಜಿನಿಯರ್‌ ನೇಮಕಾತಿ ಪರೀಕ್ಷೆಯು ಎರಡು ಪೇಪರ್‌ಗಳನ್ನು ಒಳಗೊಂಡಿರುತ್ತದೆ.

ಪೇಪರ್–1

  • ಒಟ್ಟು ಪ್ರಶ್ನೆಗಳು: 200

  • ಒಟ್ಟು ಅಂಕಗಳು: 200

  • ಪರೀಕ್ಷಾ ಅವಧಿ: 2 ಗಂಟೆ

  • ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್ – 50 ಅಂಕ

  • ಜನರಲ್ ಅವೇರ್‌ನೆಸ್ – 50 ಅಂಕ

  • ಅಭ್ಯರ್ಥಿ ಆಯ್ಕೆ ಮಾಡಿಕೊಂಡ ಎಂಜಿನಿಯರಿಂಗ್ ವಿಷಯ – 100 ಅಂಕ

ಈ ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ಇರಲಿದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತ ಮಾಡಲಾಗುತ್ತದೆ.

ಪೇಪರ್–2

ಅಭ್ಯರ್ಥಿ ಆಯ್ಕೆ ಮಾಡಿಕೊಂಡ ಸಿವಿಲ್, ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಷಯದಿಂದ 100 ಪ್ರಶ್ನೆಗಳನ್ನು ಕೇಳಲಾಗುತ್ತದೆ.

  • ಒಟ್ಟು ಅಂಕಗಳು: 300

  • ಪರೀಕ್ಷಾ ಅವಧಿ: 2 ಗಂಟೆ

  • ಪ್ರತಿ ತಪ್ಪು ಉತ್ತರಕ್ಕೆ: 1 ಅಂಕ ಕಡಿತ

ಪ್ರಮುಖ ದಿನಾಂಕಗಳು

  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆಪ್ಟೆಂಬರ್ 22, 2026 ರಾತ್ರಿ 11 ಗಂಟೆ

  • ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನ: ಸೆಪ್ಟೆಂಬರ್ 23, 2026 ರಾತ್ರಿ 11 ಗಂಟೆ

  • ಅರ್ಜಿ ತಿದ್ದುಪಡಿ ಅವಧಿ: ಸೆಪ್ಟೆಂಬರ್ 28ರಿಂದ 30, 2026

  • ಪೇಪರ್–1 ಪರೀಕ್ಷೆ: ಅಕ್ಟೋಬರ್/ನವೆಂಬರ್ 2026

  • ಪೇಪರ್–2 ಪರೀಕ್ಷೆ: ಡಿಸೆಂಬರ್ 2026

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular