ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಗೆಯ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾದಿಂದ ಮತ್ತೊಂದು ಸಿಹಿ ಸುದ್ದಿ ಹೊರಬಿದ್ದಿದೆ. ಮಹಾನ್ ಸಿನ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಪ್ರಥೀತ್ ಅಕ್ಕಿ ನಿರ್ಮಿಸುತ್ತಿರುವ ಈ ಚಿತ್ರದ ‘ಕಲ್ಲೇ ಬೀಜ ಕಿತ್ತುಕೊಂಡ್ ಹೋದ್ಲು’ ಎಂಬ ಮಜವಾದ ಲಿರಿಕಲ್ ವೀಡಿಯೋ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.
ಈ ತುಂಟಾಟದ ಹಾಡಿಗೆ ಪ್ರಸಿದ್ಧ ಗಾಯಕ ದಿವ್ಯ ಕುಮಾರ್ ದನಿಯಾಗಿದ್ದು, ರಾಘವೇಂದ್ರ ವಿ. ಅವರ ಸಂಗೀತ ಸಂಯೋಜನೆ ಪ್ರೇಕ್ಷಕರನ್ನು ಗುನುಗುವಂತೆ ಮಾಡಿದೆ. ಚಿತ್ರದ ಬರಹಗಾರ ಹಾಗೂ ನಿರ್ದೇಶಕರಾದ ಅಭಿನಂದನ್ ದೇಶಪ್ರಿಯ ಅವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಭ್ರೂಷಣ್ ಅವರ ನೃತ್ಯ ನಿರ್ದೇಶನ ಮತ್ತು ಉಜ್ವಲ್ ಚಂದ್ರ ಅವರ ಸಂಕಲನ ಈ ಹಾಡಿನ ದೃಶ್ಯ ವೈಭವವನ್ನು ಹೆಚ್ಚಿಸಿದೆ.
ಚಿತ್ರದಲ್ಲಿ ಯುವನ್ ಹನಕೋಡ್ ಹಾಗೂ ಅರ್ಜುನ್ ವೇದಾಂತ ಜೊತೆಗೆ ರಕ್ಷಿತಾ, ವಿಜಯ್ ಚಂದೂರ್, ದತ್ತಣ್ಣ, ನವೀಂದ್ರ, ಅನಿಲ್ ಸಿದ್ದು, ನಾಗರಾಜ್ ಮೂರ್ತಿ, ಮಿಮಿಕ್ರಿ ಗೋಪಿ ಸೇರಿದಂತೆ ದೊಡ್ಡ ತಾರಾಗಣವೇ ಅಭಿನಯಿಸಿದೆ. ವಿಷ್ಣು ಪ್ರಸಾದ್, ವಿಶ್ವ ಪಾಟೀಲ್ ಹಾಗೂ ವಿದ್ಯಾ ಕಿರಣ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಸದ್ಯ ರಿಲೀಸ್ ಆಗಿರುವ ಈ ಲಿರಿಕಲ್ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

