HomeLatest Newsಮೊಳಕೆ ಬಂದ ಈರುಳ್ಳಿಯನ್ನು ಎಸೆಯುತ್ತಿದ್ದೀರಾ? ಬಳಸುವ ಮೊದಲು ಈ ಸತ್ಯ ತಿಳಿದುಕೊಳ್ಳಿ!

ಮೊಳಕೆ ಬಂದ ಈರುಳ್ಳಿಯನ್ನು ಎಸೆಯುತ್ತಿದ್ದೀರಾ? ಬಳಸುವ ಮೊದಲು ಈ ಸತ್ಯ ತಿಳಿದುಕೊಳ್ಳಿ!

ಅಡುಗೆ ಮನೆಯಲ್ಲಿ ಈರುಳ್ಳಿಯನ್ನು ಹೆಚ್ಚು ದಿನ ಸಂಗ್ರಹಿಸಿಟ್ಟಾಗ ಅಥವಾ ಚಳಿಗಾಲದ ತೇವಾಂಶಕ್ಕೆ ಈರುಳ್ಳಿ ಮೊಳಕೆ ಬರುವುದು ಸಾಮಾನ್ಯ. ಇಂತಹ ಮೊಳಕೆ ಬಂದ ಈರುಳ್ಳಿಯನ್ನು (Sprouted Onions) ನೋಡಿ ಅನೇಕರು ಇವು ಹಾಳಾಗಿವೆ ಎಂದು ಎಸೆದು ಬಿಡುತ್ತಾರೆ. ಇನ್ನು ಕೆಲವರು ಅಡುಗೆಗೆ ಬಳಸುತ್ತಾರೆ. ಹಾಗಾದರೆ, ಮೊಳಕೆ ಬಂದ ಈರುಳ್ಳಿ ಸೇವಿಸುವುದು ಆರೋಗ್ಯಕ್ಕೆ ಸುರಕ್ಷಿತವೇ? ಇಲ್ಲಿದೆ ಸಂಪೂರ್ಣ ಮಾಹಿತಿ.

ಮೊಳಕೆ ಬಂದ ಈರುಳ್ಳಿ ತಿನ್ನಬಹುದೇ?

ಹೌದು, ಮೊಳಕೆ ಬಂದ ಈರುಳ್ಳಿಯನ್ನು ಅಡುಗೆಯಲ್ಲಿ ಬಳಸುವುದು ಸಂಪೂರ್ಣ ಸುರಕ್ಷಿತ. ಈರುಳ್ಳಿಯ ಮೇಲ್ಭಾಗದಿಂದ ಹಸಿರು ಚಿಗುರು ಬಂದಿದ್ದರೂ ಸಹ ಅದರ ಒಳಗಿನ ಭಾಗ ಹಾಳಾಗಿರುವುದಿಲ್ಲ. ಆದರೆ, ಇವುಗಳನ್ನು ಬಳಸುವ ಮೊದಲು ಕೆಲವು ವಿಷಯಗಳನ್ನು ಗಮನಿಸುವುದು ಅಗತ್ಯ.

ಪೌಷ್ಟಿಕಾಂಶದ ಬದಲಾವಣೆ

ಈರುಳ್ಳಿ ಮೊಳಕೆಯೊಡೆದಾಗ ಅದರ ಪೌಷ್ಟಿಕಾಂಶದಲ್ಲಿ ಅಲ್ಪ ಪ್ರಮಾಣದ ಬದಲಾವಣೆಯಾಗುತ್ತದೆ. ಇವುಗಳಲ್ಲಿ ಆಂಟಿ-ಆಕ್ಸಿಡೆಂಟ್ ಮತ್ತು ಫೈಟೊಕೆಮಿಕಲ್ಸ್ ಅಧಿಕವಾಗಿರುತ್ತದೆ. ಹಾಗೆಯೇ ಖನಿಜಾಂಶಗಳು ಹಾಗೆಯೇ ಉಳಿದಿರುತ್ತವೆ. ಆದರೆ, ಈರುಳ್ಳಿಯು ಮೊಳಕೆಗೆ ಶಕ್ತಿಯನ್ನು ನೀಡುವ ಪ್ರಕ್ರಿಯೆಯಲ್ಲಿ ತನ್ನಲ್ಲಿರುವ ನೈಸರ್ಗಿಕ ಸಕ್ಕರೆ ಅಂಶವನ್ನು ಬಳಸಿಕೊಳ್ಳುವುದರಿಂದ, ಅದರ ರುಚಿ ಸ್ವಲ್ಪ ವ್ಯತ್ಯಾಸವಾಗಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರುಚಿ ಮತ್ತು ವಾಸನೆ

ತಾಜಾ ಈರುಳ್ಳಿಗೆ ಹೋಲಿಸಿದರೆ ಮೊಳಕೆ ಬಂದ ಈರುಳ್ಳಿಯ ರುಚಿ ಮತ್ತು ವಾಸನೆ ಸ್ವಲ್ಪ ಭಿನ್ನವಾಗಿರುತ್ತದೆ. ಇವುಗಳಲ್ಲಿ ಸಿಹಿ ಅಂಶ ಕಡಿಮೆಯಾಗಿ ಕಟುವಾದ ರುಚಿ ಹೆಚ್ಚಿರಬಹುದು. ಈ ಕಾರಣದಿಂದಲೇ ಅನೇಕರು ಇವುಗಳನ್ನು ಬಳಸಲು ಇಷ್ಟಪಡುವುದಿಲ್ಲ.

ಬಳಸುವ ಮುನ್ನ ಈ ಸಲಹೆ ಪಾಲಿಸಿ:

  • ಮೊಳಕೆ ಭಾಗವನ್ನು ತೆಗೆಯಿರಿ: ಅಡುಗೆಗೆ ಬಳಸುವ ಮೊದಲು ಈರುಳ್ಳಿಯ ಮೇಲ್ಭಾಗದಲ್ಲಿ ಬಂದಿರುವ ಹಸಿರು ಮೊಳಕೆಯನ್ನು ಕತ್ತರಿಸಿ ತೆಗೆಯಿರಿ. ಒಂದು ವೇಳೆ ನೀವು ಈ ಹಸಿರು ಚಿಗುರನ್ನು ಅಡುಗೆಗೆ ಬಳಸಿದರೂ ಯಾವುದೇ ಹಾನಿಯಿಲ್ಲ.
  • ಕೊಳೆತ ಈರುಳ್ಳಿ ಬೇಡ: ಈರುಳ್ಳಿ ಕೇವಲ ಮೊಳಕೆಯೊಡೆದಿದ್ದರೆ ಮಾತ್ರ ಬಳಸಿ. ಒಂದು ವೇಳೆ ಈರುಳ್ಳಿ ಮೆತ್ತಗಾಗಿದ್ದರೆ, ಕಪ್ಪು ಬಣ್ಣಕ್ಕೆ ತಿರುಗಿದ್ದರೆ ಅಥವಾ ಕೆಟ್ಟ ವಾಸನೆ ಬರುತ್ತಿದ್ದರೆ ಅದನ್ನು ತಕ್ಷಣ ಎಸೆದು ಬಿಡಿ.

ಈರುಳ್ಳಿ ಮೊಳಕೆ ಬರದಂತೆ ತಡೆಯುವುದು ಹೇಗೆ?

  • ಈರುಳ್ಳಿಯನ್ನು ಯಾವಾಗಲೂ ಗಾಳಿಯಾಡುವ ಮತ್ತು ಒಣ ಪ್ರದೇಶದಲ್ಲಿ ಸಂಗ್ರಹಿಸಿಡಿ.
  • ತೇವಾಂಶವಿರುವ ಜಾಗದಲ್ಲಿ ಇಟ್ಟರೆ ಈರುಳ್ಳಿ ಬೇಗ ಮೊಳಕೆಯೊಡೆಯುತ್ತದೆ.
  • ಮುಖ್ಯವಾಗಿ, ಈರುಳ್ಳಿಯನ್ನು ಎಂದಿಗೂ ಫ್ರಿಜ್‌ನಲ್ಲಿ ಇಡಬೇಡಿ. ಫ್ರಿಜ್‌ನಲ್ಲಿರುವ ತೇವಾಂಶವು ಈರುಳ್ಳಿ ಬೇಗನೆ ಮೊಳಕೆಯೊಡೆಯಲು ಮತ್ತು ಹಾಳಾಗಲು ಕಾರಣವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular