HomeLatest Newsಗಿಡಗಳ ಮೇಲಿರುವ ಗೊಂಡೆಹುಳು ಹೋಗಲಾಡಿಸಲು ಸಿಂಪಡಿಸಿ ಈ ನೈಸರ್ಗಿಕ ಕೀಟನಾಶಕ

ಗಿಡಗಳ ಮೇಲಿರುವ ಗೊಂಡೆಹುಳು ಹೋಗಲಾಡಿಸಲು ಸಿಂಪಡಿಸಿ ಈ ನೈಸರ್ಗಿಕ ಕೀಟನಾಶಕ

ಮಳೆಗಾಲದಲ್ಲಿ ಗಿಡಗಳ ಮೇಲೆ ಗೊಂಡೆಹುಳುಗಳು ಕಂಡುಬರುತ್ತದೆ. ಇವು ಗಿಡಗಳಿಗೆ ಹಾನಿಕಾರಕವಾಗಿದೆ. ಇವು ಸಸ್ಯದ ಜೊತೆಗೆ ಹೂಗಳು, ಎಲೆಗಳನ್ನು ಹಾನಿಗೊಳಿಸುತ್ತದೆ. ಹಾಗಾಗಿ ಇವುಗಳನ್ನು ನಾಶಪಡಿಸಲು ರಾಸಾಯನಿಕ ಯುಕ್ತ ಕೀಟನಾಶಕಗಳನ್ನು ಬಳಸುವ ಬದಲು ನೈಸರ್ಗಿಕವಾದ ಈ ವಿಧಾನ ಬಳಸಿ.

ಹೈಡ್ರೋಜನ್ ಪೆರಾಕ್ಸೈಡ್ 3 ಚಮಚ, ನೀರು, ಅಡುಗೆ ಸೋಡಾ 2 ಚಮಚ, ನಿಂಬೆ ರಸ 2 ಚಮಚ ಇವಿಷ್ಟನ್ನು ತೆಗೆದುಕೊಂಡು ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲಿನಲ್ಲಿ ತುಂಬಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ನೈಸರ್ಗಿಕವಾದ ಕೀಟನಾಶಕವನ್ನು ಸಸ್ಯದ ಎಲೆಗಳು, ಹೂಗಳು ಮತ್ತು ಹಣ್ಣುಗಳ ಮೇಲೂ ಕೂಡ ಸಿಂಪಡಿಸಬಹುದು.

ಇದರ ಬಲವಾದ ವಾಸನೆಗೆ ಗೊಂಡೆ ಹುಳಗಳು ಸಾಯುತ್ತವೆ ಮತ್ತು ಅವು ಎಂದಿಗೂ ಸಸ್ಯದ ಬಳಿ ಸುಳಿಯುವುದಿಲ್ಲ. ಇದನ್ನು ಸಸ್ಯದ ಸುತ್ತಮುತ್ತಲಿನ ಸ್ಥಳಗಳಲ್ಲಿಯೂ ಸಿಂಪಡಿಸಿ. ಇದರಿಂದ ಹುಳಗಳು ಮತ್ತೆ ಸಸ್ಯವನ್ನು ತಲುಪಲು ಸಾಧ್ಯವಿಲ್ಲ. ಅಲ್ಲದೇ ಇದರಿಂದ ಇನ್ನಿತರ ಹುಳ, ಕ್ರಿಮಿಕೀಟಗಳು ಸಾಯುತ್ತದೆ. ಸಸ್ಯಕ್ಕೆ ಯಾವುದೇ ಹಾನಿಯಾಗದೆ ಚೆನ್ನಾಗಿ ಬೆಳೆಯುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular