HomeLatest Newsಸ್ಪೈಡರ್‌ಮ್ಯಾನ್ ಅಬ್ಬರಕ್ಕೆ ನಡುಗಿದ ಭಾರತದ ಬಾಕ್ಸ್ ಆಫೀಸ್: ಮೊದಲ ದಿನದ ಗಳಿಕೆ ಕಂಡು ನಮ್ಮ ಹೀರೋಗಳ...

ಸ್ಪೈಡರ್‌ಮ್ಯಾನ್ ಅಬ್ಬರಕ್ಕೆ ನಡುಗಿದ ಭಾರತದ ಬಾಕ್ಸ್ ಆಫೀಸ್: ಮೊದಲ ದಿನದ ಗಳಿಕೆ ಕಂಡು ನಮ್ಮ ಹೀರೋಗಳ ಒಟ್ಟು ಕಲೆಕ್ಷನ್ ಕೂಡ ಇಷ್ಟು ಆಗಲ್ವಲ್ಲ ಎಂದ ಸಿನಿಪ್ರಿಯರು!

ನಿನ್ನೆ ( ಜುಲೈ 30 ) ಹಾಲಿವುಡ್‌ನ ಸೂಪರ್ ಹೀರೊ ಚಿತ್ರಗಳ ಪಾಲಿನ ಅತಿ ಜನಪ್ರಿಯ ಚಿತ್ರ ಸರಣಿ ಸ್ಪೈಡರ್‌ಮ್ಯಾನ್‌ನ ಹೊಸ ಚಿತ್ರ ‘ಸ್ಪೈಡರ್‌ಮ್ಯಾನ್ ದ ಬ್ರಾಂಡ್ ನ್ಯೂ ಡೇ’ ಬಿಡುಗಡೆಯಾಗಿದ್ದು, ವಿಶ್ವದಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.

ಬಿಡುಗಡೆಗೂ ಮುನ್ನ ನಡೆದ ಪ್ರೀಮಿಯರ್ ಶೋಗಳಲ್ಲಿ ಮಿಶ್ರ ಪ್ರತಿಕ್ರಿಯೆಯ ವಿಮರ್ಶೆ ಪಡೆದುಕೊಂಡ ಸ್ಪೈಡರ್‌ಮ್ಯಾನ್ ಬ್ರಾಂಡ್ ನ್ಯೂ ಡೇ ಬಿಡುಗಡೆಯ ಬಳಿಕ ಅಭಿಮಾನಿಗಳಿಂದ ಸಹ ಅದೇ ರೀತಿಯ ವಿಮರ್ಶೆಗಳನ್ನು ಗಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರದಲ್ಲಿ ಆಕ್ಷನ್ ಕಡಿಮೆ ಹಾಗೂ ಎಮೋಷನ್ ಜಾಸ್ತಿ ಎಂದು ಹಲವು ಆಕ್ಷನ್ ಪ್ರಿಯ ಸಿನಿ ರಸಿಕರು ದೂರಿದ್ದರೆ, ಇನ್ನೂ ಹಲವರು ಕಳೆದ ಮೂರು ಸ್ಪೈಡರ್‌ಮ್ಯಾನ್ ಚಿತ್ರಗಳಿಗಿಂತ ಈ ಚಿತ್ರ ಉತ್ತಮವಾಗಿದೆ ಎಂದು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

ಹೀಗೆ ಸಂಪೂರ್ಣ ಸೂಪರ್ ಅಥವಾ ಸಂಪೂರ್ಣ ಕಳಪೆ ಈ ಎರಡೂ ಕೆಟಗರಿಗೂ ಸೇರದೇ ಪರವಾಗಿಲ್ಲ, ಒಂದೊಮ್ಮೆ ನೋಡಬಹುದು ಎಂಬ ವಿಮರ್ಶೆ ಪಡೆದುಕೊಳ್ಳುತ್ತಿರುವ ಸ್ಪೈಡರ್‌ಮ್ಯಾನ್ ದ ಬ್ರಾಂಡ್ ನ್ಯೂ ಡೇ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಅಬ್ಬರಿಸಿ ಬೊಬ್ಬಿರಿದಿದೆ.

ಅದರಲ್ಲೂ ಭಾರತದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಈ ಚಿತ್ರ ಮೊದಲ ದಿನ 72.44 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಈ ಹಿಂದೆ 2019ರಲ್ಲಿ ಬಿಡುಗಡೆಯಾಗಿದ್ದ ಅವೇಂಜರ್ಸ್ ದ ಎಂಡ್ ಗೇಮ್ 65 ಕೋಟಿ ರೂಪಾಯಿ ಗಳಿಕೆ ಮಾಡಿ ಭಾರತದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಹಾಲಿವುಡ್ ಸಿನಿಮಾ ಎನಿಸಿಕೊಂಡಿತ್ತು. ಇದೀಗ ಈ ದಾಖಲೆಯನ್ನು ಸ್ಪೈಡರ್‌ಮ್ಯಾನ್ ದ ಬ್ರಾಂಡ್ ನ್ಯೂ ಡೇ ಮುರಿದಿದ್ದು, ಅಗ್ರಸ್ಥಾನಕ್ಕೇರಿದೆ.

ಹೀಗೆ ಮೊದಲ ದಿನವೇ ಭಾರತದಲ್ಲಿ ಈ ಚಿತ್ರ 75 ಕೋಟಿ ಗಳಿಕೆ ಮಾಡಿರುವುದನ್ನು ಕಂಡ ಭಾರತದ ಸಿನಿ ರಸಿಕರು ತಮ್ಮ ಅದೆಷ್ಟೋ ನಟರ ಚಿತ್ರಗಳು ಮೊದಲ ದಿನ ಈ ಮಟ್ಟಿಗಿನ ಕಲೆಕ್ಷನ್ ಮಾಡಲಾಗಿಲ್ಲ ಎಂದು ಆಶ್ಚರ್ಯಕ್ಕೊಳಗಾಗಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular