HomeLatest Newsಸ್ಪೈಡರ್‌ಮ್ಯಾನ್ ಸುನಾಮಿ: 4 ದಿನಗಳಲ್ಲಿ ₹306 ಕೋಟಿ ಗಳಿಕೆ

ಸ್ಪೈಡರ್‌ಮ್ಯಾನ್ ಸುನಾಮಿ: 4 ದಿನಗಳಲ್ಲಿ ₹306 ಕೋಟಿ ಗಳಿಕೆ

ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಹಾಲಿವುಡ್ ಸೂಪರ್ ಹೀರೋ ಸ್ಪೈಡರ್-ಮ್ಯಾನ್ ಅಬ್ಬರ ಮುಂದುವರಿದಿದೆ. ಹೊಸದಾಗಿ ತೆರೆಕಂಡಿರುವ ಸ್ಪೈಡರ್-ಮ್ಯಾನ್ ಬ್ರ್ಯಾಂಡ್ ನ್ಯೂ ಡೇ ಸಿನಿಮಾ ದೇಶಾದ್ಯಂತ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದ್ದು, ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ವಾರಾಂತ್ಯದಲ್ಲಿ ಚಿತ್ರಮಂದಿರಗಳತ್ತ ಹರಿದುಬಂದ ಪ್ರೇಕ್ಷಕರ ಮಹಾಪೂರವೇ ಚಿತ್ರದ ಈ ಭರ್ಜರಿ ಗಳಿಕೆಗೆ ಸಾಕ್ಷಿಯಾಗಿದೆ.

ಬಿಡುಗಡೆಯಾದ ಕೇವಲ ನಾಲ್ಕೇ ದಿನಗಳಲ್ಲಿ ಈ ಸಿನಿಮಾ ಭಾರತದಲ್ಲಿ ಬರೋಬ್ಬರಿ ₹306.37 ಕೋಟಿ ಗ್ರೋಸ್ ಕಲೆಕ್ಷನ್ ಮಾಡಿದೆ. ಇದರಲ್ಲಿ ಭಾರತೀಯ ನೆಟ್ (Net) ಕಲೆಕ್ಷನ್ ಒಂದೇ ₹256.20 ಕೋಟಿ ದಾಟಿರುವುದು ವಿಶೇಷ.

ಮೊದಲ ದಿನ (ಗುರುವಾರ): ಮೊದಲ ದಿನವೇ ದೇಶಾದ್ಯಂತ 17,250 ಶೋಗಳನ್ನು ಕಂಡಿದ್ದ ಈ ಸಿನಿಮಾ, ಶೇ. 72.3 ರಷ್ಟು ಆಕ್ಯುಪೆನ್ಸಿಯೊಂದಿಗೆ ಬರೋಬ್ಬರಿ ₹60.60 ಕೋಟಿ ಗಳಿಸಿ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎರಡನೇ ದಿನ (ಶುಕ್ರವಾರ): ಕಾರ್ಯನಿರತ ದಿನವಾಗಿದ್ದರೂ 16,902 ಶೋಗಳಿಂದ ₹49.35 ಕೋಟಿ ಕಲೆಕ್ಷನ್ ಮಾಡಿತು.

ಮೂರನೇ ದಿನ (ಶನಿವಾರ): ವಾರಾಂತ್ಯದ ರಜೆ ಆರಂಭವಾಗುತ್ತಿದ್ದಂತೆ ಥಿಯೇಟರ್‌ಗಳು ಹೌಸ್‌ಫುಲ್ ಆದವು. 17,703 ಶೋಗಳಿಂದ ಶೇ. 77 ರಷ್ಟು ಆಕ್ಯುಪೆನ್ಸಿ ಸಾಧಿಸಿ ₹70.25 ಕೋಟಿ ಬಾಚಿಕೊಂಡಿತು.

ಭಾನುವಾರ ನೆಕ್ಸ್ಟ್ ಲೆವೆಲ್ ಅಬ್ಬರ

ನಾಲ್ಕನೇ ದಿನವಾದ ಭಾನುವಾರ ಸ್ಪೈಡರ್-ಮ್ಯಾನ್ ಕ್ರೇಜ್ ಶಿಖರಕ್ಕೇರಿತ್ತು. ಒಂದೇ ದಿನ ದೇಶಾದ್ಯಂತ 18,051 ಶೋಗಳು ಪ್ರದರ್ಶನಗೊಂಡಿದ್ದು, ದಾಖಲೆಯ ₹76.00 ಕೋಟಿ ಹರಿದುಬಂದಿದೆ. ಅಂದು ದೇಶದ ಪ್ರಮುಖ ಚಿತ್ರಮಂದಿರಗಳಲ್ಲಿ ಶೇ. 78.7 ರಷ್ಟು ಸೀಟುಗಳು ಭರ್ತಿಯಾಗಿದ್ದವು.

ಭಾಷಾವಾರು ಕಲೆಕ್ಷನ್ ವಿವರ:

ಭಾನುವಾರ ಇಂಗ್ಲಿಷ್ ಆವೃತ್ತಿಯೊಂದೇ 8,269 ಶೋಗಳಿಂದ ₹40.00 ಕೋಟಿ ಗಳಿಸಿ ಅಗ್ರಸ್ಥಾನದಲ್ಲಿದೆ.

ದಕ್ಷಿಣ ಭಾರತದಲ್ಲೂ ಸ್ಪೈಡರ್-ಮ್ಯಾನ್ ಮ್ಯಾಜಿಕ್:

ತಮಿಳು: 1,117 ಶೋಗಳಿಂದ ₹3.55 ಕೋಟಿ

ತೆಲುಗು: 1,122 ಶೋಗಳಿಂದ ₹3.25 ಕೋಟಿ

ಕನ್ನಡ: 55 ಶೋಗಳಿಂದ ₹10 ಲಕ್ಷ

ಮಲಯಾಳಂ: 47 ಶೋಗಳಿಂದ ₹10 ಲಕ್ಷ

ಒಟ್ಟಿನಲ್ಲಿ ಭಾನುವಾರದ ರಜಾದಿನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿರುವ ಸ್ಪೈಡರ್-ಮ್ಯಾನ್, ಭಾರತೀಯ ಬಾಕ್ಸ್ ಆಫೀಸ್ ಇತಿಹಾಸದಲ್ಲೇ ಹೊಸ ದಾಖಲೆ ಬರೆಯುವತ್ತ ಹೆಜ್ಜೆ ಹಾಕುತ್ತಿದ್ದಾನೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular