HomeIndiaಸ್ಪೈಸ್ ಜೆಟ್ ವಿರುದ್ಧ ಪ್ರಯಾಣಿಕರ ಆಕ್ರೋಶ: ಸ್ಪೈಸ್ ಜೆಟ್ ಚೋರ್ ಹೈ ಎಂದು ಘೋಷಣೆ

ಸ್ಪೈಸ್ ಜೆಟ್ ವಿರುದ್ಧ ಪ್ರಯಾಣಿಕರ ಆಕ್ರೋಶ: ಸ್ಪೈಸ್ ಜೆಟ್ ಚೋರ್ ಹೈ ಎಂದು ಘೋಷಣೆ

ನವದೆಹಲಿ: ಸ್ಪೈಸ್ ಜೆಟ್ ವಿಮಾನ ಯಾನ ಸಾಂಸ್ಥೆ ವಿರುದ್ಧ ಪ್ರಯಾಣಿಕರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನ ವಿಳಂಬದಿಂದ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯಿಂದಾಗಿ ಸಿಡಿದೆದ್ದಿದ್ದಾರೆ.

ದೆಹಲಿ ವಿಮಾನ ನಿಲ್ದಾಣದ ಒಳಗೆಯೇ ಪ್ರಯಾಣಿಕರು ಧರಣಿ ಕುಳಿತು ಸ್ಪೈಸ್ ಜೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಪೈಸ್ ಜೆಟ್ ಚೋರ್ ಹೈ ಎಂದು ಘೋಷಣೆ ಕೂಗಿದ್ದಾರೆ. ಸ್ಪೈಸ್ ಜೆಟ್ ನ ಎರಡು ವಿಮಾನಗಳು 24 ಗಂಟೆಗಳ ಕಾಲ ವಿಳಂಬವಾಗಿವೆ. ಇದರಿಂದಾಗಿ ಪ್ರಯಣಿಕರು ಪರದಡುವ ಸ್ಥಿತಿ ನಿರ್ಮಾಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೆಹಲಿಯಿಂದ ದಿಬೈಗೆ ತೆರಳಬೇಕಿದ್ದ ಎರಡು ವಿಮಾನಗಳು 24 ಗಂಟೆಗಳ ಕಾಲ ವಿಳಂಬವಾಗಿವೆ. ವಿಮಾನ ವಿಳಂಬದ ಬಗ್ಗೆ ಸ್ಪೈಸ್ ಜೆಟ್ ಯಾವುದೇ ಮಾಹಿತಿ ನೀಡಿರಲಿಲ್ಲ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರಿಗೆ ವಿಮಾನ ವಿಳಂಬವಾಗಿರುವುದು ತಿಳಿಯುತ್ತಿದ್ದಂತೆ ತಾಳ್ಮೆ ಕಳೆದುಕೊಂಡಿದ್ದಾರೆ. ಬೇರೆ ವಿಮಾನ ವ್ಯವಸ್ಥೆ ಮಾಡುವಂತೆ ಕೇಳಿಕೊಂದರೂ ಸರಿಯಾಗಿ ಸ್ಪಂದಿಸಿಲ್ಲ. ಅಲ್ಲದೇ ಯಾವುದೇ ಉಟ-ಉಪಹಾರ, ವಸತಿ ವ್ಯವಸ್ಥೆ ಕೂಡ ವಿಮಾನ ಯಾನ ಸಂಸ್ಥೆ ಮಾಡಿರಲಿಲ್ಲ ಇದರಿಂದ ಸಿಡಿದೆದ್ದ ಪ್ರಯಾಣಿಕರು ಸ್ಪೈಸ್ ಜೆಟ್ ವಿರುದ್ಧ ಪ್ರತಿಭಟನೆ ನಡೆಸಿದರು.

ವಿಮಾನ ನಿಲ್ದಾಣದಲ್ಲಿಯೇ ಧರಣಿ ಕುಳಿತ ಪ್ರಯಾಣಿಕರು ಸ್ಪೈಸ್ ಜೆಟ್ ಚೋರ್ ಹೈ ಎಂದು ಘೋಷಣೆ ಕೂಗಿ, ಸ್ಪೈಸ್ ಜೆಟ್ ಬ್ಯಾನ್ ಮಾಡುವಂತೆ ಆಗ್ರಹಿಸಿದರು. ವಿಮಾನ ವಿಳಂಬಕ್ಕೆ ಸ್ಪಷ್ಟ ಕಾರಣ ತಿಳಿಸುವಂತೆ ಒತ್ತಾಯಿಸಿದ್ದಾರೆ.

ಸ್ಪೈಸ್ ಜೆಟ್ SG 5111 ಹಾಗೂ SG 5105 ಎರಡು ವಿಮಾನಗಳು 24 ಗಂಟೆ ವಿಳಂಬವಾಗಿವೆ. ಪ್ರತಿಭಟನೆ ಹೆಚ್ಚುತ್ತಿದ್ದಂತೆ ಬೇರೆ ವಿಮಾನ ವ್ಯವಸ್ಥೆ ಮಾಡುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ. ಅಲ್ಲದೇ ಪ್ರಯಣಿಕರಿಗೆ ಊಟ, ಉಪಹಾರದ ವ್ಯವಸ್ಥೆ ಕಲ್ಪಿಸಿದೆ ಎಂದು ತಿಳಿದುಬಂದಿದೆ.

ಸೆ.17ರಿಂದ ಬಿಜೆಪಿ ಸೇವಾ ಸಂಕಲ್ಪ ಅಭಿಯಾನ: ಕೇಂದ್ರ ಸಚಿವ ಜೆ.ಪಿ.ನಡ್ಡಾ

ಬೆಂಗಳೂರು: ಸಾರ್ವಜನಿಕ ಜೀವನದಲ್ಲಿ ಪ್ರಧಾನಿ ನರೇಂದ್ರ ಮೋದಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17ರಿಂದ ಬಿಜೆಪಿ ಸೇವಾ ಸಂಕಲ್ಪ ಅಭಿಯಾನ ಆರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ತಿಳಿಸಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಜೆ.ಪಿ.ನಡ್ಡಾ, ಪ್ರಧಾನಿ ಮೋದಿಯವರು ಹಗಲು ರಾತ್ರಿ ನಮಗಾಗಿ ಸೇವೆ ಮಾಡುತ್ತಿದ್ದಾರೆ. ಕಳೆದ 25 ವರ್ಷಗಳಿಂದ ಅವರು ಒಂಂದೇ ಒಂದು ದಿನ ರಜೆ ಪಡೆಯಲಿಲ್ಲ. ಪ್ರಧಾನಿ ಮೋದಿಯವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 17ರಿಂದ ಒಂದು ತಿಂಗಳ ಕಾಲ ಬಿಜೆಪಿಯಿಂದ ಸೇವಾ ಸಂಕಲ್ಪ ಅಭಿಯಾನ ನಡೆಸಲಾಗುವುದು ಎಂದರು.

ರಾಜ್ಯದಿಂದ ಹಿಡಿದು ಕೇಂದ್ರದವರೆಗೂ ಅವರ ಬದ್ಧತೆ ಬದಲಾಗಿಲ್ಲ. ಸೇವೆ, ಬದ್ಧತೆ, ಸಮರ್ಪಣಾ ಮನೋಭಾವದಿಂದ ಪ್ರಧಾನ ಸೇವಕನ ರೂಪದಲ್ಲಿ ಮೋದಿ ಕೆಲಸ ಮಾಡುತ್ತಿದ್ದಾರೆ. ಜನ ಕಲ್ಯಾಣವೇ ಮೋದಿಯವರ ಆದ್ಯತೆಯಾಗಿದೆ. 2047ಕ್ಕೆ ವಿಕಸಿತ ಭಾರತ ಪ್ರಧಾಅನಿ ಮೋದಿಯವರ ಗುರಿಯಾಗಿದೆ ಎಂದು ಹೇಳಿದರು.

ನಾವು ಯಾರನ್ನೂ ಕೆಣಕುವುದಿಲ್ಲ. ಕೆಣಕಿದರೆ ಬಿಡುವುದಿಲ್ಲ ಎಂಬುದನ್ನು ಪ್ರಧಾನಿ ಮೋದಿ ತೋರಿಸಿಕೊಟ್ಟಿದ್ದಾರೆ. ಆರ್ಟಿಕಲ್ 370 ರದ್ದು ಮಾಡಿದ್ದು ಮೋದಿಯವರ ಬದ್ಧತೆ. 25 ಕೋಟಿ ಜನರು ಬಿಪಿಎಲ್ ನಿಂದ ಹೊರಬಂದಿದ್ದಾರೆ. ನಮ್ಮದು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ದೇಶ. ಪ್ರಧಾಅನಿ ಮೋದಿಯವರು ಆರ್ಥಿಕ ನೀತಿಯಲ್ಲಿ ಸಾಕಷ್ಟು ಸುಧಾರಣೆ ತಂದಿದ್ದಾರೆ ಎಂದರು.

ರಾಷ್ಟ್ರೀಯ ಹೆದ್ದಾರಿಗಳು, ಏರ್ ಪೋರ್ಟ್ ಗಳು, ರೈಲ್ವೆ, ಭದ್ರತೆ ವಿಚಾರದಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದಾರೆ. ರಕ್ಷಣಾ ವಲಯದ ರಫ್ತು 5,500% ಹೆಚ್ಚಳವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾತುಗಳನ್ನು ಜಗತ್ತು ಕೇಳುತ್ತಿದೆ. ಬ್ರಿಕ್ಸ್ ಸಮ್ಮೇಳನದಲ್ಲಿಯೂ ಒಮ್ಮದತ ನಿರ್ಣಯಗಳು ಅಂಗೀಕಾರವಾಗಿದೆ. 26 ದೇಶಗಳು ಪ್ರಧಾನಿ ಮೋದಿಯವರಿಗೆ ಅತ್ಯುನ್ನತ ಗೌರವ ಪ್ರಶಸ್ತಿಗಳನ್ನು ನೀಡಿವೆ. ಪ್ರಧಾನಿ ಮೋದಿಯವರ ಕಾರ್ಯಕ್ರಮಗಳನ್ನು ಜನರು ಒಪ್ಪಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಬಿಜೆಪಿಯಿಂದ ಸೇವಾ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular