ಬೆಂಗಳೂರು: ಬೇಸಿಗೆ ರಜೆ ಅಂಗವಾಗಿ ಪ್ರಯಾಣಿಕರ ದಟ್ಟಣೆ ನಿರ್ವಹಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಆಯ್ದ ಕೆಲವು ಮಾರ್ಗಗಳಲ್ಲಿ ವಿಶೇಷ ರೈಲು ಸಂಚಾರ ಕಲ್ಪಿಸಿದೆ.
ಏಪ್ರಿಲ್ 19ರಂದು ಸಂಜೆ 4:25ಕ್ಕೆ ಅಲಿಪುರದ್ವಾರ್ ನಿಂದ ಹೊರಡುವ ಅಲಿಪುರದ್ವಾರ್ -ಹುಬ್ಬಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 20ರಂದು ಬೆಳಗ್ಗೆ 9.45 ಕ್ಕೆ ಹುಬ್ಬಳ್ಳಿ ತಲುಪಲಿದೆ. ದಾವಣಗೆರೆ, ಅರಸೀಕೆರೆ, ತುಮಕೂರು, ಎಸ್ಎಂವಿಟಿ ಬೆಂಗಳೂರು, ಯಲಹಂಕ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.
ಎಸ್ಎಂವಿಟಿ ಬೆಂಗಳೂರಿನಿಂದ ರೂಪ್ಸಾ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 22, 29ರಂದು ಸಂಜೆ 4:35 ಕ್ಕೆ ಹೊರಟು ಮರುದಿನ ರಾತ್ರಿ 8.30 ಕ್ಕೆ ರೂಪ್ಸಾ ತಲುಪಲಿದೆ.
ರೂಪ್ಸಾ -ಬೆಂಗಳೂರು ದಂಡು ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 16, 23, 30ರಂದು ರಾತ್ರಿ 11:30 ಕ್ಕೆ ರೂಪ್ಸಾ ನಿಲ್ದಾಣದಿಂದ ಹೊರಟು ಮರುದಿನ ಬೆಳಗ್ಗೆ 5.30 ಕ್ಕೆ ಬೆಂಗಳೂರು ದಂಡು ನಿಲ್ದಾಣ ತಲುಪಲಿದೆ. ಕೃಷ್ಣರಾಜಪುರ, ಬಂಗಾರಪೇಟೆ, ಜೋಲಾರ್ ಪೇಟೆಯಲ್ಲಿ ನಿಲುಗಡೆ ಇರುತ್ತದೆ.
ಯಶವಂತಪುರ -ನ್ಯೂಜಲ್ಪೈಗುರಿ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 17, 24ರಂದು ಬೆಳಗ್ಗೆ 7 ಗಂಟೆಗೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 7 ಗಂಟೆಗೆ ಪಶ್ಚಿಮ ಬಂಗಾಳದ ನ್ಯೂಜಲ್ಪೈಗುರಿ ತಲುಪಲಿದೆ.
ಏ. 20 ಮತ್ತು 22 ರಂದು ಬೆಳಿಗ್ಗೆ 8.30 ಕ್ಕೆ ನ್ಯೂಜಲ್ಪೈಗುರಿ ಯಿಂದ ಹೊರಟು ಮರುದಿನ ಬೆಳಗ್ಗೆ 9:55 ಕ್ಕೆ ಬೆಂಗಳೂರು ದಂಡು ನಿಲ್ದಾಣಕ್ಕೆ ತಲುಪಲಿದೆ ಎಂದು ಹೇಳಲಾಗಿದೆ.

