HomeIPL 2026IPL 2026: ಒಂದೇ ಒಂದು ಬೌಂಡರಿಗೆ ತಲೆಕೆಟ್ಟು ಚಿಕ್ಕ ಹುಡುಗನ ಜತೆ ಜಗಳಕ್ಕೆ ನಿಂತ ಕೃನಾಲ್...

IPL 2026: ಒಂದೇ ಒಂದು ಬೌಂಡರಿಗೆ ತಲೆಕೆಟ್ಟು ಚಿಕ್ಕ ಹುಡುಗನ ಜತೆ ಜಗಳಕ್ಕೆ ನಿಂತ ಕೃನಾಲ್ ಪಾಂಡ್ಯ; ಅತಿಯಾಯಿತು ಎಂದ ನೆಟ್ಟಿಗರು

ನಿನ್ನೆ ( ಏಪ್ರಿಲ್ 15 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಐಪಿಎಲ್ 2026ರ ಲೀಗ್ ಹಂತದ 23ನೇ ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್‌ಗಳ ಗೆಲುವನ್ನು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಆರ್‌ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲ್‌ಔಟ್ ಆಗಿ 147 ರನ್‌ಗಳ ಸುಲಭ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 15.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು.

ಪಂದ್ಯದುದ್ದಕ್ಕೂ ಆರ್‌ಸಿಬಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಲಕ್ನೋ ತಂಡವನ್ನು ಕಾಡಿತು. ಅದರಲ್ಲೂ ಆರ್‌ಸಿಬಿ ಬೌಲಿಂಗ್ ದಾಳಿಗೆ ಮಂಕಾದ ಲಕ್ನೋ ಆಟಗಾರರು ದೊಡ್ಡ ಮೊತ್ತ ಕಲೆಹಾಕಲಾಗದೇ ಪರದಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಕ್ನೋ ಪರ ಆರ್‌ಸಿಬಿ ಬೌಲಿಂಗ್ ದಾಳಿಯನ್ನು ಎದುರಿಸಿ ಸಮಾಧಾನಕರ ರನ್ ಗಳಿಸಿದ ಕೆಲವೇ ಆಟಗಾರರಲ್ಲಿ ಯುವ ಆಟಗಾರ ಮುಕುಲ್ ಚೌಧರಿ ಸಹ ಒಬ್ಬರು. 12ನೇ ಓವರ್‌ನ ಎರಡನೇ ಎಸೆತದಲ್ಲಿ ಕೃನಾಲ್ ಅಬ್ದುಲ್ ಸಮದ್ ವಿಕೆಟ್ ಪಡೆದ ಬೆನ್ನಲ್ಲೇ ಕಣಕ್ಕಿಳಿದ ಮುಕುಲ್ ಚೌಧರಿ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟಿದರು.

ಇದನ್ನು ಕಂಡ ಕೃನಾಲ್ ಹಿಂದಿನ ಎಸೆತದಲ್ಲಿ ವಿಕೆಟ್ ಪಡೆದ ಸಂಭ್ರಮವನ್ನು ಮರೆತು ಕೋಪಕ್ಕೊಳಗಾದರು. ಆಟವೆಂದ ಮೇಲೆ ಎದುರಾಳಿ ಮೇಲುಗೈ ಸಾಧಿಸುವುದು ಸಾಮಾನ್ಯ. ಆದರೆ ಕೃನಾಲ್ ಕೇವಲ ಒಂದು ಬೌಂಡರಿ ಬಾರಿಸಿದ್ದಕ್ಕೆ ಯುವ ಆಟಗಾರನ ಬಳಿ ಹೋಗಿ ಸ್ಲೆಡ್ಜ್ ಮಾಡಲು ಯತ್ನಿಸಿದ್ದಾರೆ.

ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನೆಟ್ಟಿಗರು ಯುವ ಕ್ರಿಕೆಟಿಗರು ಚೆನ್ನಾಗಿ ಆಡಿದಾಗ ಪ್ರೋತ್ಸಾಹ ನೀಡಲಾಗದಿದ್ದರೂ ಪರವಾಗಿಲ್ಲ, ಆದರೆ ಈ ರೀತಿ ಸ್ಲೆಡ್ಜ್ ಮಾಡಿ ಹೆದರಿಸುವ ಅಗತ್ಯ ಏನಿದೆ ಎಂದು ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular