HomeLatest Newsಐತಿಹಾಸಿಕ ಸಾಗರ ಮಾರಿಕಾಂಬ ಜಾತ್ರೆಗೆ ವಿಶೇಷ ರೈಲು ಸೇವೆ

ಐತಿಹಾಸಿಕ ಸಾಗರ ಮಾರಿಕಾಂಬ ಜಾತ್ರೆಗೆ ವಿಶೇಷ ರೈಲು ಸೇವೆ

ಶಿವಮೊಗ್ಗ ಜಿಲ್ಲೆ ಸಾಗರದ ಐತಿಹಾಸಿಕ ಮಾರಿಕಾಂಬ ದೇವಿ ಜಾತ್ರೆಗೆ ಫೆಬ್ರವರಿ 3ರಿಂದ 10 ರವರೆಗೆ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ. ಯಶವಂತಪುರದಿಂದ ತಾಳಗುಪ್ಪಕ್ಕೆ ಮತ್ತು ತಾಳಗುಪ್ಪದಿಂದ ಯಶವಂತಪುರಕ್ಕೆ ರೈಲು ಸಂಚರಿಸಲಿದ್ದು ಸೌಲಭ್ಯ ಸದುಪಯೋಗ ಪಡೆದುಕೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.

ರೈಲು ಸಂಖ್ಯೆ 06586(ತಾಳಗುಪ್ಪ – ಯಶವಂತಪುರ): ಫೆ.4, ಫೆ.6, ಫೆ.9, ಫೆ.11ರಂದು ತಾಳಗುಪ್ಪದಿಂದ ಬೆಳಗ್ಗೆ 9.30ಕ್ಕೆ ಹೊರಟು ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ.

ರೈಲು ಸಂಖ್ಯೆ 06588 (ತಾಳಗುಪ್ಪ – ಯಶವಂತಪುರ): ಫೆ.7ರಂದು ಬೆಳಗ್ಗೆ 9.30ಕ್ಕೆ ತಾಳಗುಪ್ಪದಿಂದ ಹೊರಟು ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈಲು ಸಂಖ್ಯೆ 16582 (ತಾಳಗುಪ್ಪ – ಯಶವಂತಪುರ): ಫೆ.3, ಫೆ.5, ಫೆ.8, ಫೆ.10ರಂದು ರಾತ್ರಿ 10ಗಂಟೆಗೆ ತಾಳಗುಪ್ಪದಿಂದ ಹೊರಟು ಬೆಳಗ್ಗೆ 4.45ಕ್ಕೆ ಯಶವಂತಪುರ ತಲುಪಲಿದೆ.

ರೈಲು ಸಂಖ್ಯೆ 06585(ಯಶವಂತಪುರ- ತಾಳಗುಪ್ಪ) ಫೆಬ್ರವರಿ 3, 5, 8 ಮತ್ತು 10 ರಂದು ಯಶವಂತಪುರದಿಂದ ರಾತ್ರಿ 10.45ಕ್ಕೆ ಹೊರಟು ಬೆಳಗ್ಗೆ 5.05ಕ್ಕೆ ತಾಳಗುಪ್ಪ ತಲುಪಲಿದೆ

ರೈಲು ಸಂಖ್ಯೆ 06587 ಯಶವಂತಪುರ -ತಾಳಗುಪ್ಪ ಫೆಬ್ರವರಿ 6ರಂದು ಯಶವಂತಪುರದಿಂದ ರಾತ್ರಿ 10.45ಕ್ಕೆ ಹೊರಟು ಬೆಳಗ್ಗೆ 5.05ಕ್ಕೆ ಳಗುಪ್ಪ ತಲುಪಲಿದೆ.

ರೈಲು ಸಂಖ್ಯೆ 16581 ಯಶವಂತಪುರ –ತಾಳಗುಪ್ಪ ರೈಲು ಫೆಬ್ರವರಿ 3, 5, 8 ಮತ್ತು 10 ರಂದು ರಾತ್ರಿ 12:15ಕ್ಕೆ ಯಶವಂತಪುರದಿಂದ ಹೊರಟು ಬೆಳಗ್ಗೆ 9 ಗಂಟೆಗೆ ತಾಳಗುಪ್ಪ ತಲುಪಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular