HomeKarnatakaಕೇರಳ ಚುನಾವಣೆ: ಮೈಸೂರಿನಲ್ಲಿ ಐಜಿಪಿಯ ಮಹತ್ವದ ಮೀಟಿಂಗ್

ಕೇರಳ ಚುನಾವಣೆ: ಮೈಸೂರಿನಲ್ಲಿ ಐಜಿಪಿಯ ಮಹತ್ವದ ಮೀಟಿಂಗ್

ಕೇರಳ ವಿಧಾನಸಭೆ ಚುನಾವಣೆ 2026ರ ತಯಾರಿ ನಡೆಯುತ್ತಿದೆ. 140 ಸದಸ್ಯ ಬಲದ ವಿಧಾನಸಭೆಗೆ ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಕೇಂದ್ರ ಚುನಾವಣಾ ಆಯೋಗ ಮಾರ್ಚ್ ತಿಂಗಳಿನಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.

ಕೇರಳ ಕರ್ನಾಟಕದ ಜೊತೆ ಗಡಿ ಹಂಚಿಕೊಂಡಿರುವ ರಾಜ್ಯವಾಗಿದೆ. ಅಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದರೆ ನಮ್ಮ ಪೊಲೀಸರು ಸಹ ಅಲರ್ಟ್ ಆಗಲಿದ್ದಾರೆ.

ಅಂತರರಾಜ್ಯದ ಪೊಲೀಸರು ಚುನಾವಣಾ ನೀತಿ ಸಂಹಿತೆ ಪಾಲನೆ ಮಾಡುವ ಕುರಿತು ಸಭೆಗಳನ್ನು ನಡೆಸಲಿದ್ದಾರೆ. ಆದರೆ ಅದಕ್ಕೂ ಮೊದಲು ಕರ್ನಾಟಕದ ಪೊಲೀಸರು ಸಭೆಗಳನ್ನು ಮಾಡಿ, ಚುನಾವಣಾ ತಯಾರಿ ಕುರಿತು ಚರ್ಚಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಕ್ಷಿಣ ವಲಯ ಐಜಿಪಿ ಕಛೇರಿಯಲ್ಲಿ ಐಜಿಪಿ ಡಾ.ಎಂ.ಬಿ. ಬೋರಲಿಂಗಯ್ಯ ಕೇರಳ ರಾಜ್ಯ ವಿಧಾನಸಭಾ ಚುನಾವಣಾ ಸಂಬಂಧ ಅಂತರ್‌ ರಾಜ್ಯ ಗಡಿ ಸಮನ್ವಯ ಸಭೆಯನ್ನು ನಡೆಸಿದರು.

ಕರ್ನಾಟಕ-ಕೇರಳ ರಾಜ್ಯದ ಗಡಿಜಿಲ್ಲೆಗಳಲ್ಲಿ ಚುನಾವಣಾ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು. ಈ ಸಭೆಯಲ್ಲಿ ಮೈಸೂರು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಕೊಡಗು ಎಸ್‌ಪಿ ಬಿಂದುಮಣಿ ಹಾಗೂ ಕೇರಳ ರಾಜ್ಯದ ಐಪಿಎಸ್ ಅಧಿಕಾರಿ ಯತೀಶ್‌ ಚಂದ್ರ, ಆನುಜ್‌ಪಲ್ಲಿವಳ್, ಅರುಣ್‌ ಕೆ.ಪವಿತ್ರನ್‌ ಪಾಲ್ಗೊಂಡಿದ್ದರು.

ಕೇರಳ ರಾಜ್ಯದ ಚುನಾವಣೆಗಾಗಿ ಈಗಾಗಲೇ ರಾಜಕೀಯ ಪಕ್ಷಗಳ ತಯಾರಿ ಆರಂಭವಾಗಿದೆ. ಕರ್ನಾಟಕದಿಂದ ಹಣ, ಮದ್ಯ ಸಾಗಾಟವನ್ನು ತಡೆಯಲು ಕೇರಳ ಪೊಲೀಸರು ಕರ್ನಾಟಕದ ಪೊಲೀಸರ ಸಹಕಾರ ಕೇಳಿದ್ದಾರೆ.

ಚುನಾವಣಾ ವೇಳಾಪಟ್ಟಿ ಘೋಷಣೆಯಾಗುತ್ತಿದ್ದಂತೆಯೇ ಅಂತರರಾಜ್ಯ ಚೆಕ್‌ಪೋಸ್ಟ್ ಸ್ಥಾಪನೆ ಮಾಡಲಾಗುತ್ತದೆ. ಚುನಾವಣಾ ನೀತಿ ಸಂಹಿತೆ ಪಾಲನೆ ಮಾಡಲು ಎರಡೂ ರಾಜ್ಯಗಳ ಪೊಲೀಸರ ಜಂಟಿ ತಂಡವನ್ನು ರಚನೆ ಮಾಡಲಾಗುತ್ತದೆ.

ಕೇರಳದಲ್ಲಿ ಸತತ 2 ಬಾರಿ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್) ಗೆಲುವು ಸಾಧಿಸಿ, ರಾಜ್ಯದಲ್ಲಿ ಆಡಳಿತ ನಡೆಸಿದೆ. ಈಗ ಮತ್ತೆ ಚುನಾವಣೆ ಎದುರಾಗಿದ್ದು, ಚುನಾವಣೆಗಾಗಿ ಎಲ್‌ಡಿಎಫ್ ಮತ್ತು ಕಾಂಗ್ರೆಸ್‌ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ತಯಾರಿ ಆರಂಭಿಸಿದೆ. ಬಿಜೆಪಿಯು ಚುನಾವಣೆಗಾಗಿ ಕಾರ್ಯತಂತ್ರ ರೂಪಿಸುತ್ತಿದೆ.

ಡಿಸೆಂಬರ್ 2025ರಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಗಳಿಸಿರುವ ಬಿಜೆಪಿ ಕೆಲವು ಕ್ಷೇತ್ರಗಳಲ್ಲಿ ಗೆಲ್ಲುವ ಉತ್ಸಾಹದಲ್ಲಿದೆ. ಸ್ಥಳೀಯ ಚುನಾವಣೆ ಬಳಿಕ ಯುಡಿಎಫ್‌ ಉತ್ಸಾಹ ಹೆಚ್ಚಾಗಿದ್ದು, ಈ ಬಾರಿ ಅಧಿಕಾರ ಪಡೆಯುವ ಭರವಸೆಯಲ್ಲಿದೆ. ಕೇರಳದ ಆಡಳಿತಾರೂಢ ಸಿಪಿಐಎಂ ನೇತೃತ್ವದ ಎಲ್‌ಡಿಎಫ್‌ ತಳಮಟ್ಟದಲ್ಲಿ ಪ್ರಚಾರವನ್ನು ಆರಂಭಿಸಿದೆ. ಪ್ರಿಯಾಂಕಾ ವಾದ್ರಾ ಕೇರಳದ ವಯನಾಡು ಕ್ಷೇತ್ರದ ಸಂಸದರಾಗಿರುವ ಕಾರಣ ಕಾಂಗ್ರೆಸ್‌ಗೆ ಚುನಾವಣೆ ಪ್ರತಿಷ್ಠೆಯಾಗಿದೆ.

2021ರ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸಿಪಿಐ(ಎಂ) 62, ಕಾಂಗ್ರೆಸ್ 21, ಸಿಪಿಐ 17, ಐಉಎಂಎಲ್ 15, 6 ಪಕ್ಷೇತರರು, 19 ಇತರರು ಗೆಲುವು ಸಾಧಿಸಿದ್ದರು. ಎಲ್‌ಡಿಎಫ್‌ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಪಿಣರಾಯಿ ವಿಜಯನ್ 2ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular