HomeLatest NewsBig Alert: ಬೆಂಗಳೂರಲ್ಲಿ ರೈಲ್ವೆ ಟರ್ಮಿನಲ್ ಬದಲು, ಪ್ರಯಾಣಕ್ಕೂ ಮುನ್ನ ಓದಿ

Big Alert: ಬೆಂಗಳೂರಲ್ಲಿ ರೈಲ್ವೆ ಟರ್ಮಿನಲ್ ಬದಲು, ಪ್ರಯಾಣಕ್ಕೂ ಮುನ್ನ ಓದಿ

ಬೆಂಗಳೂರು ನಗರದಲ್ಲಿ ಕೆಲವು ಟರ್ಮಿನಲ್ ಬದಲಾವಣೆ ಮಾಡಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಆದೇಶಿಸಿದೆ. ರೈಲುಗಳ ಟರ್ಮಿನಲ್‌ಗಳ ಬದಲಾವಣೆ, ಭಾಗಶಃ ರದ್ದತಿ ಕುರಿತು ಪ್ರಕಟಣೆಯನ್ನು ಹೊರಡಿಸಲಾಗಿದೆ.

ಕೆಎಸ್‌ಆರ್ ಬೆಂಗಳೂರು ನಿಲ್ದಾಣ (ಮೆಜೆಸ್ಟಿಕ್‌)ನಲ್ಲಿ ಪಿಟ್ ಲೈನ್ ಪುನರ್ ನಿರ್ಮಾಣ ಕಾಮಗಾರಿಯ ಹಿನ್ನೆಲೆಯಲ್ಲಿ ರೈಲುಗಳ ಟರ್ಮಿನಲ್ ನಿಲ್ದಾಣಗಳಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಈ ಕುರಿತು ಮಾಹಿತಿ ತಿಳಿದು ಸಂಚಾರವನ್ನು ನಡೆಸುವಂತೆ ಮನವಿ ಮಾಡಲಾಗಿದೆ.

ಬದಲಾವಣೆ ವಿವರಗಳು ಹೀಗಿವೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ದಿನಾಂಕ ಜನವರಿ 16 ರಿಂದ 10/03/2026 ರವರೆಗೆ ಹೊರಡುವ ರೈಲು ಸಂಖ್ಯೆ 16378 ಎರ್ನಾಕುಲಂ ಜಂಕ್ಷನ್ -ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್ ಅನ್ನು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕೆಎಸ್‌ಆರ್ ಬೆಂಗಳೂರು ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಕೆಎಸ್‌ಆ‌ರ್ ಬೆಂಗಳೂರು ಬದಲಾಗಿ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ.

* ದಿನಾಂಕ ಜನವರಿ 17 ರಿಂದ 11/03/2026 ರವರೆಗೆ ಹೊರಡುವ ರೈಲು ಸಂಖ್ಯೆ 16377 ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ಕೆಎಸ್‌ಆರ್‌ ಬೆಂಗಳೂರು ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಈ ರೈಲು ಕೆಎಸ್‌ಆರ್ ಬೆಂಗಳೂರು ನಿಲ್ದಾಣಕ್ಕೆ ಬದಲಾಗಿ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಬೆಳಗ್ಗೆ 06:20 ಕ್ಕೆ ಹೊರಡುತ್ತದೆ.

* ಜನನರಿ 16ರಿಂದ 10/03/2026ರ ವರೆಗೆ ಹೊರಡುವ ರೈಲು ಸಂಖ್ಯೆ 16594 ಹಜೂರ್‌ ಸಾಹಿಬ್‌ ನಾಂದೇಡ್ – ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರವು ಕೆಎಸ್‌ಆ‌ರ್ ಬೆಂಗಳೂರಿಗೆ ಬದಲಾಗಿ ಯಶವಂತಪುರ ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ. ಈ ರೈಲು ಯಲಹಂಕ, ಲೊಟ್ಟೆಗೊಲ್ಲಹಳ್ಳಿ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದ್ದು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕೆಎಸ್‌ಆರ್ ಬೆಂಗಳೂರಿನ ನಿಲುಗಡೆಗಳು ಇರುವುದಿಲ್ಲ.

* ಜನವರಿ 17 ರಿಂದ 11/03/2026ರ ವರೆಗೆ ಹೊರಡುವ ರೈಲು ಸಂಖ್ಯೆ 16593 ಕೆಎಸ್‌ಆರ್‌ ಬೆಂಗಳೂರು ಹಜೂರ್‌ ಸಾಹಿಬ್ ನಾಂದೇಡ್ ಎಕ್ಸ್‌ಪ್ರೆಸ್ ಕೆಎಸ್‌ಆರ್‌ ಬೆಂಗಳೂರಿಗೆ ಬದಲಾಗಿ ಯಶವಂತಪುರದಿಂದ ರಾತ್ರಿ 11:55ಕ್ಕೆ ಹೊರಡಲಿದೆ. ಈ ರೈಲು ಯಶವಂತಪುರ, ಲೊಟ್ಟೆ ಗೊಲ್ಲಹಳ್ಳಿ ಮತ್ತು ಯಲಹಂಕ ಮಾರ್ಗವಾಗಿ ಸಂಚರಿಸಲಿದ್ದು ಕೆಎಸ್‌ಆರ್ ಬೆಂಗಳೂರು ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಿಲುಗಡೆಗಳು ಇರುವುದಿಲ್ಲ.

* ಜನವರಿ 16 ರಿಂದ 10/03/2026ರ ವರೆಗೆ ಹೊರಡುವ ರೈಲು ಸಂಖ್ಯೆ 16512 ಕಣ್ಣೂರು ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರವು ಕೆಎಸ್‌ಆರ್‌ ಬೆಂಗಳೂರಿಗೆ ಬದಲಾಗಿ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ. ಈ ರೈಲು ಯಶವಂತಪುರ, ಹೆಬ್ಬಾಳ, ಬಾಣಸವಾಡಿ ಮತ್ತು ಎಸ್‌ಎಂಐಟಿ ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿದೆ.

* ಜನವರಿ 17 ರಿಂದ 11/03/2026 ರವರೆಗೆ ಹೊರಡುವ ರೈಲು ಸಂಖ್ಯೆ 16511 ಕೆಎಸ್‌ಆರ್ ಬೆಂಗಳೂರು ಕಣ್ಣೂರು ಎಕ್ಸ್‌ಪ್ರೆಸ್ ರೈಲು ಕೆಎಸ್‌ಆರ್‌ ಬೆಂಗಳೂರಿಗೆ ಬದಲಾಗಿ ಎಸ್‌ಎಂವಿಟಿ ಬೆಂಗಳೂರಿನಿಂದ ರಾತ್ರಿ 8:00 ಗಂಟೆಗೆ ಹೊರಡಲಿದೆ. ಈ ರೈಲು ಎಸ್‌ಎಂವಿಟಿ ಬೆಂಗಳೂರು, ಬಾಣಸವಾಡಿ, ಹೆಬ್ಬಾಳ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular