HomeLatest NewsBIG NEWS: ಜಮ್ಮು-ಕಾಶ್ಮೀರ ಪೂಂಚ್ ನಲ್ಲಿ ಮತ್ತೆ ಪಾಕಿಸ್ತಾನಿ ಡ್ರೋನ್ ಗಳು ಪತ್ತೆ: ವಾರದಲ್ಲಿ ಮೂರನೇ...

BIG NEWS: ಜಮ್ಮು-ಕಾಶ್ಮೀರ ಪೂಂಚ್ ನಲ್ಲಿ ಮತ್ತೆ ಪಾಕಿಸ್ತಾನಿ ಡ್ರೋನ್ ಗಳು ಪತ್ತೆ: ವಾರದಲ್ಲಿ ಮೂರನೇ ಘಟನೆ

ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಚ್ ಸೆಕ್ಟರ್ ನಲ್ಲಿ ಮತ್ತೆ ಪಾಕಿಸ್ತಾನಿ ಡ್ರೋನ್ ಗಳು ಪತ್ತೆಯಾಗಿವೆ. ಇದು ವಾರದಲ್ಲಿ ಮೂರನೇ ಘಟನೆಯಾಗಿದೆ.

ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಪಾಕಿಸ್ತಾನಕ್ಕೆ ಕಠಿಣ ಎಚ್ಚರ್ಕೆ ನೀಡಿದ ನಂತರವೂ ಪಾಕಿಸ್ತಾನ, ಭಾರತದ ಗಡಿಯಲ್ಲಿ ಡ್ರೋನ್ ಹಾರಾಟ ನಡೆಸುತ್ತಿದೆ. ಈ ಹಿಂದೆ ಎರಡು ಬಾರಿ ಪಾಕ್ ಡ್ರೋನ್ ಪತ್ತೆಯಾದ ಸ್ಥಳಗಳಲ್ಲಿ ಸೇನಾ ಕಟ್ಟೆಚ್ಚರ ವಹಿಸಲಾಗಿದೆ. ಸೇನಾ ಮಹಾನಿರ್ದೇಶಕರು ಉನ್ನತ ಮಟ್ಟದ ಮಾತುಕತೆ ನಡೆಸಿದ್ದಾರೆ. ಈ ನಡುವೆ ಮತ್ತೆ ಪೂಂಚ್ ವಲಯದಲ್ಲಿ ಪಾಕಿಸ್ಯ್ತಾನದ ಡ್ರೋನ್ ಪತ್ತೆಯಾಗಿದೆ.

ಗಣರಾಜ್ಯೋತ್ಸವ ಸಮೀಪಿಸುತ್ತಿರುವ ನಡುವೆಯೇ ಇಂತಹ ಘಟನೆಗಳು ನಡೆಯುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಭಾರತೀಯ ಸಶಸ್ತ್ರಪಡೆಗಳು ಜಮ್ಮು-ಕಾಶ್ಮೀರದ ಎಲ್ ಒಸಿ ಮತ್ತು ಅಂತರಾಷ್ಟ್ರೀಯ ಗಡಿ ಉದ್ದಕ್ಕೂ ಹೆಚ್ಚಿನ ಕಟ್ಟೆಚ್ಚರ ವಹಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular