HomeEntertainmentದಾದಾ ಸೌರವ್ ಗಂಗೂಲಿ ಈಗ ಬಿಗ್ ಬಾಸ್ ನಿರೂಪಕ!

ದಾದಾ ಸೌರವ್ ಗಂಗೂಲಿ ಈಗ ಬಿಗ್ ಬಾಸ್ ನಿರೂಪಕ!

ಅಭಿಮಾನಿಗಳ ಪಾಲಿನ ದಾದಾ ಸೌರವ್ ಗಂಗೂಲಿ ಈಗ ‘ಬಿಗ್ ಬಾಸ್’. ಹೌದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಗಂಗೂಲಿ ಟಿವಿ ರಿಯಾಲಿಟಿ ಶೋ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ದೇಶದಲ್ಲಿ ಹೆಚ್ಚು ಖ್ಯಾತಿ ಪಡೆದಿರುವ ರಿಯಾಲಿಟಿ ಶೋ ಬಿಗ್ ಬಾಸ್ ನಿರೂಪಣೆ ಮಾಡಲಿದ್ದಾರೆ.

ಹೌದು, ಸೌರವ್ ಗಂಗೂಲಿ ಬೆಂಗಾಲಿ ಭಾಷೆಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಕರಾಗಲಿದ್ದಾರೆ. ವಿವಿಧ ಭಾಷೆಗಳಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಸಾರವಾಗುತ್ತದೆ.

ಬೆಂಗಾಲಿ ಭಾಷೆಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಶೋ ಅನ್ನು ಸೌರವ್ ಗಂಗೂಲಿ ನಿರೂಪಣೆ ಮಾಡಲಿದ್ದಾರೆ. ಈಗಾಗಲೇ ಹಲವಾರು ನಟ, ನಟಿಯರು ಬಿಗ್ ಬಾಸ್ ಶೋ ನಿರೂಪಣೆ ಮಾಡಿದ್ದಾರೆ. ಆದರೆ ಕ್ರೀಡಾ ಜಗತ್ತಿನವರೊಬ್ಬರು ಈ ಕಾರ್ಯಕ್ರಮ ನಿರೂಪಣೆ ಮಾಡುತ್ತಿರುವುದು ಇದೇ ಮೊದಲು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಗ್ ಬಾಸ್ ಭಾರತದಲ್ಲಿ ಅತೀ ಹೆಚ್ಚು ಮಾರುಕಟ್ಟೆ ವ್ಯಾಪ್ತಿಯನ್ನು ಹೊಂದಿರುವ ರಿಯಾಲಿಟಿ ಶೋ. ಕಿಚ್ಚ ಸುದೀಪ್, ನಾಗಾರ್ಜುನ, ವಿಜಯ್ ಸೇತುಪತಿಯಂತಹ ಸಿನಿಮಾ ಕ್ಷೇತ್ರದ ದಿಗ್ಗಜರು ಈ ಶೋ ನಿರೂಪಣೆ ಮಾಡುತ್ತಿದ್ದಾರೆ.

ಈಗ ಬೆಂಗಾಲಿ ಭಾಷೆಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಶೋ ಅನ್ನು ಸೌರವ್ ಗಂಗೂಲಿ ನಿರೂಪಣೆ ಮಾಡುವ ಮೂಲಕ ಅವರು ಕಿರುತೆರೆ ರಿಯಾಲಿಟಿ ಶೋ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಕ್ರಿಕೆಟ್ ಮೈದಾನದಲ್ಲಿ ಎದುರಾಳಿ ತಂಡದ ಮನ:ಸ್ಥಿತಿ ಅರಿತು, ಆಟಗಾರರ ಸಮನ್ವಯ ಸಾಧಿಸುತ್ತಿದ್ದ ಸೌರವ್ ಗಂಗೂಲಿ ಅವರ ಗುಣ ಈಗ ಬಿಗ್ ಬಾಸ್ ಶೋ ನಿರೂಪಣೆ ಮಾಡಲು ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ.

ಮೇಲ್ನೋಟಕ್ಕೆ ತುಂಬಾ ಸೈಲೆಂಟ್ ಆಗಿ ಕಾಣುವ ಸೌರವ್ ಗಂಗೂಲಿ ಬಿಗ್ ಬಾಸ್ ನಂತಹ ಶೋ ಹೇಗೆ ನಡೆಸುತ್ತಾರೆ? ಎಂದು ಎಲ್ಲರೂ ಕಾದು ನೋಡುತ್ತಿದ್ದಾರೆ. 10 ವರ್ಷಗಳಿಂದ ಬೆಂಗಾಲಿ ಭಾಷೆಯ ಬಿಗ್ ಬಾಸ್ ಆವೃತ್ತಿ ನಿಂತು ಹೋಗಿತ್ತು. ಈಗ ಸೌರವ್ ಗಂಗೂಲಿ ನಿರೂಪಣೆ ಮೂಲಕ ಮತ್ತೆ ಆರಂಭವಾಗುತ್ತಿದೆ.

ಬೆಂಗಾಲಿ ಭಾಷೆಯ ಮೊದಲ ಬಿಗ್ ಬಾಸ್ ಸೀಸನ್ 2013ರಲ್ಲಿ ಆರಂಭವಾಗಿತ್ತು. ಆಗ ಮಿಥುನ್ ಚಕ್ರವರ್ತಿ ನಿರೂಪಕರಾಗಿದ್ದರು. 2ನೇ ಸೀಸನ್ 2016ರಲ್ಲಿ ಪ್ರಸಾರವಾಗಿದ್ದು, ಜೀತ್ ನಿರೂಪಕರಾಗಿದ್ದರು.

ಆದರೆ, ಬೇರೆ ಭಾಷೆಯ ಬಿಗ್ ಬಾಸ್ ಮಾದರಿಯಲ್ಲಿ ಬೆಂಗಾಲಿ ಬಿಗ್ ಬಾಸ್ ಯಶಸ್ಸುಗಳಿಸಲಿಲ್ಲ. ಆದ್ದರಿಂದ 2 ಸೀಸನ್ ಬಳಿಕ ಶೋ ನಿಂತು ಹೋಗಿತ್ತು. ಈಗ 10 ವರ್ಷಗಳ ಬಳಿಕ 2026ರಲ್ಲಿ ಬೆಂಗಾಲಿ ಭಾಷೆಯ ಬಿಗ್ ಬಾಸ್ ಶೋ ಆರಂಭವಾಗುತ್ತಿದ್ದು, ಸೌರವ್ ಗಂಗೂಲಿ ನಿರೂಪಕರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular