HomeKarnatakaನೈಸ್ ಗೋಲ್ಮಾಲ್ ಬಗ್ಗೆ ಮತ್ತೊಂದು ಅಕ್ರಮ ಬಯಲಿಗೆಳೆದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

ನೈಸ್ ಗೋಲ್ಮಾಲ್ ಬಗ್ಗೆ ಮತ್ತೊಂದು ಅಕ್ರಮ ಬಯಲಿಗೆಳೆದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು-ನೈಸ್‌ ರಸ್ತೆಯ ಕಲೆಕ್ಷನ್‌ʼನಲ್ಲಿ ನೈಸ್‌ ಕಂಪನಿ ವ್ಯಾಪಕ ಅಕ್ರಮಗಳನ್ನು ಎಸಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದರು.

ಜೆಡಿಎಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; ನೈಸ್ ಕುರಿತು ಬಂದಿರುವ ವರದಿಯನ್ನು ಆಧರಿಸಿ ಕೆಲ ಗಂಭೀರ ವಿಷಯಗಳನ್ನು ಉಲ್ಲೇಖಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೈಸ್ ಸಂಸ್ಥೆಯ ಪೂರ್ಣ ಹೂಡಿಕೆಗೆ ಹೋಲಿಸಿದರೆ ಸುಮಾರು 40% ಮೊತ್ತವನ್ನಷ್ಟೇ ಹೂಡಿಕೆ ಮಾಡಲಾಗಿದೆ. ವಾರ್ಷಿಕ ಸುಮಾರು ₹73 ಕೋಟಿ ಮೊತ್ತವನ್ನು ಟೋಲ್ ರೂಪದಲ್ಲಿ ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಸುಮಾರು ₹4,500 ಕೋಟಿ ಸಂಗ್ರಹಿಸಲಾಗಿದೆ. ಈ ಮೊತ್ತದಲ್ಲಿ ನಿರ್ವಹಣಾ ವೆಚ್ಚವೂ ಸೇರಿದೆ ಎಂದು ಕೆಲವರು ಹೇಳುತ್ತಾರೆ; ಆದರೆ ಒಪ್ಪಂದದ ಅವಧಿ 30 ವರ್ಷವಾಗಿದ್ದು, ನಿರ್ವಹಣೆಯೂ ಆ ಅವಧಿಯಲ್ಲಿ ನೈಸ್ ಕಂಪನಿಯ ಜವಾಬ್ದಾರಿ ಆಗಿರುತ್ತದೆ. ವರದಿ ಪ್ರಕಾರ ಆದಾಯವು ಹೂಡಿಕೆಯನ್ನು ಮೀರಿದೆ ಮತ್ತು ಹೂಡಿಕೆಗಿಂತ ಹೆಚ್ಚಿನ ಲಾಭ ಪಡೆದಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಆರೋಪಿಸಿದರು.

ಫಾಸ್ಟ್‌ಟ್ಯಾಗ್ ಅಳವಡಿಸುವ ಮೊದಲು ವಾರ್ಷಿಕ ಟೋಲ್ ಆದಾಯವನ್ನು ₹60–70 ಕೋಟಿಯಷ್ಟೆಂದು ಘೋಷಿಸಲಾಗುತ್ತಿತ್ತು. 2022ರಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸಿದ ಬಳಿಕ ಆ ಮೊತ್ತವು ಸುಮಾರು ₹700 ಕೋಟಿಯೆಂದು ತೋರಿಸಲಾಗುತ್ತಿದೆ ಎಂದು ಈ ವರದಿ ಹೇಳುತ್ತದೆ. ಅಲ್ಲಿಗೆ ಫಾಸ್ಟ್‌ಟ್ಯಾಗ್ ಅಳವಡಿಕೆಗೆ ಮೊದಲು ಭಾರೀ ಪ್ರಮಾಣದ ಹಣ ಲೂಟಿಯಾಗಿದೆ ಎಂದೇ ಅರ್ಥ. ಈ ದೊಡ್ಡ ವ್ಯತ್ಯಾಸವು ಹಿಂದಿನ ಟೋಲ್ ಆದಾಯದ ಘೋಷಣೆ ಸುಳ್ಳು ಅಂಕಿ ಅಂಶಗಳಿಂದ ಕೂಡಿದೆ ಎಂಬುದು ತಿಳಿಯುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ತಪ್ಪು ಮಾಹಿತಿ ನೀಡಲಾಗಿದೆ ಎಂಬುದು ಇದರಿಂದ ಸಾಬೀತಾಗುತ್ತದೆ ಎಂದು ಅವರು ದೂರಿದರು.

ಯೋಜನೆ ಒಳ್ಳೆಯದು, ದೇವೇಗೌಡರ ಕಾಲದಲ್ಲಿ ದೂರದೃಷ್ಟಿಯಿಂದ ಆರಂಭಿಸಿದ್ದು ಎಂದು ಹೇಳಿದ ಸಚಿವರು; ಮೈಸೂರುವರೆಗೆ ಕೆಲಸ ಮಾಡಲು ಯಾರು ತಡೆದರು ಎಂದು ಪ್ರಶ್ನಿಸಿದರು. ಒಪ್ಪಂದ ಮತ್ತು ಆದೇಶಗಳನ್ನು ಉಲ್ಲಂಘಿಸಿದ್ದು ಸರ್ಕಾರವೇ ಎಂದು ಆರೋಪಿಸಿದರು. ವರದಿಯ ಪ್ರಕಾರ, ನೇಮಕಾತಿ ದಿನಾಂಕದಿಂದ ಎಂಟು ವರ್ಷಗಳ ಅವಧಿಯಲ್ಲಿ ಕ್ಲೋವರ್‌ ಲೀಫ್‌ನಿಂದ ಬಿಡದಿವರೆಗಿನ ಎಕ್ಸ್‌ಪ್ರೆಸ್‌ವೇ ಕಾಮಗಾರಿಯಲ್ಲಿ ಕೇವಲ 20% ಕೆಲಸ ಪೂರ್ಣಗೊಂಡಿದೆ ಎಂದು ಅವರು ಹೇಳಿದರು. ಸರ್ಕಾರವೇ ನೇಮಿಸಿದ ಖಾಸಗಿ ಸಂಸ್ಥೆ ನೀಡಿರುವ ಈ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ವರದಿ ಇರುವಾಗ ಸುಳ್ಳು ಹೇಳಿ ಜನರನ್ನು ಎಷ್ಟು ದಿನ ತಪ್ಪುದಾರಿಗೆಳೆಯುತ್ತೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಈ ವಿಚಾರವನ್ನು ಮುಖ್ಯಮಂತ್ರಿ ಲಿಂಗಾಯತ ಸಮುದಾಯದ ವ್ಯಕ್ತಿಯೆಂಬ ಗುರುತಿನೊಂದಿಗೆ ಜೋಡಿಸಿ, ದೇವೇಗೌಡರು ಮತ್ತು ಕುಮಾರಸ್ವಾಮಿ ವಿರೋಧಿಸುತ್ತಿದ್ದಾರೆ ಎಂಬ ರೀತಿಯಲ್ಲಿ ಪ್ರಸ್ತಾಪಿಸಿರುವುದನ್ನು ಕೇಂದ್ರ ಸಚಿವರು ಟೀಕಿಸಿದರು. ಯೋಜನೆ ಜಾರಿಗೆ ಸಂಬಂಧಿಸಿ ಜಾತಿ ಪ್ರಶ್ನೆಗೆ ಸಂಬಂಧಿಸಿದ್ದಲ್ಲ, ಒಪ್ಪಂದ ಮತ್ತು ಯೋಜನೆಯ ವಿಷಯಕ್ಕೆ ಸಂಬಂಧಿಸಿ ನಾನು ಪ್ರಸ್ತಾಪ ಮಾಡಿದ್ದೇನೆ. ಆದರೆ ನೈಸ್ ಗುತ್ತಿಗೆದಾರ ಜಾತಿಯ ಹೆಸರನ್ನು ಕವಚವಾಗಿ ಬಳಸುತ್ತಿದ್ದಾನೆ ಎಂದು ಅವರು ಹೇಳಿದರು.

ನೈಸ್ ಗುತ್ತಿಗೆದಾರ ಲಿಂಗಾಯತ ಸಮುದಾಯಕ್ಕೆ ಸೇರಿದವನು. ಅದಕ್ಕೆ ದೇವೇಗೌಡರು, ಕುಮಾರಸ್ವಾಮಿ ಸಹಿಸಲಿಲ್ಲ ಎಂದು ಮುಖ್ಯಮಂತ್ರಿ ಸೇರಿ ಕೆಲವರು ಹೇಳುತ್ತಿರುವುದು ಸರಿಯಲ್ಲ. ಅಕ್ರಮಗಳಿಗೂ ಜಾತಿಗೂ ಏನು ಸಂಬಂಧ ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ನೈಸ್ ಯೋಜನೆ ಮತ್ತು ಜಾತಿ ವಿಚಾರಗಳು

*ಕೇಂದ್ರದ ನೆರವು, ರೈತ ಪರಿಹಾರ ಮತ್ತು ಹಣದ ಲೆಕ್ಕ:*

ಕೇಂದ್ರದ ನೆರವು, ರೈತ ಪರಿಹಾರ

ಬರ ನಿರ್ವಹಣೆಗೆ ಕೇಂದ್ರದ ನೆರವು ಬೇಕೆಂದು ರಾಜ್ಯ ಸರ್ಕಾರ ಹೇಳುತ್ತಿರುವ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು; ಉಪ ಮುಖ್ಯಮಂತ್ರಿ ಪರಮೇಶ್ವರ ಅವರು ಕೇಂದ್ರದಿಂದ ₹20,164 ಕೋಟಿ ನೀಡಿ ಎಂದು ಅವರು ಕೇಳಿದ್ದಾರೆ. ಇನ್ನೊಂದು ಕಡೆ ಬರದ ನಷ್ಟ ₹20,585 ಕೋಟಿ ಎಂದು ಉಲ್ಲೇಖಿಸಲಾಗಿದೆ. ಬೆಳೆ ನಷ್ಟಕ್ಕೆ ₹6,000 ಕೋಟಿ, ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನೋಪಾಯಕ್ಕೆ ₹12,000 ಕೋಟಿ, ಜಾನುವಾರುಗಳ ಮೇವಿಗೆ ₹700 ಕೋಟಿಗೂ ಹೆಚ್ಚು ಎಂದು ಮೊತ್ತ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ರೈತರು ಸಂಕಷ್ಟದಲ್ಲಿರುವಾಗ ‘ಭಾರತ್ ಜೋಡೋ’ ಹೆಸರಿನಲ್ಲಿ ₹1,000 ಕೋಟಿ ಬಿಡುಗಡೆ ಕೊಡಲಾಗುತ್ತಿದೆ. ಅದಕ್ಕೆ ಬದಲು ಆ ಹಣವನ್ನು ರೈತರಿಗೆ ನೀಡಬೇಕಿತ್ತು. ಪ್ರತಿ ಗ್ರಾಮ ಪಂಚಾಯಿತಿಯ ಯುವಕರಿಗೆ ತಲಾ ₹10 ಲಕ್ಷ ನೀಡುವ ಅಗತ್ಯವೇನು ಎಂದು ಅವರು ಪ್ರಶ್ನಿಸಿದರು.

100–150 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ ಅವರಿಗೆ ಕ್ಯಾಬಿನೆಟ್ ದರ್ಜೆ, ಸಂಬಳ, ಕಾರು ನೀಡುವುದರಿಂದ ಅನಗತ್ಯ ವೆಚ್ಚ ಮಾಡುವುದು ಏತಕ್ಕೆ? ಗ್ಯಾರಂಟಿ ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಅಂತ ಬೇರೆ. ಅಧಿಕಾರಿಗಳಿರುವಾಗ ಇವರ ಕೆಲಸವೇನು?ವೆಚ್ಚ ಕಡಿತಗೊಳಿಸಲು ಏಕೆ ಪ್ರಯತ್ನಿಸಬಾರದು ಎಂದು ಅವರು ಪ್ರಶ್ನಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular