HomeEntertainment'ಗೌರಿ' ಚಿತ್ರದ ಸಾಂಗ್ ಟೀಸರ್ ರಿಲೀಸ್

‘ಗೌರಿ’ ಚಿತ್ರದ ಸಾಂಗ್ ಟೀಸರ್ ರಿಲೀಸ್

ಸಮರ್ಜಿತ್ ಲಂಕೇಶ್ ಅಭಿನಯದ ‘ಗೌರಿ’ ಚಿತ್ರದ ‘ಲವ್ ಯು ಸಮಂತಾ’ ಎಂಬ ಹಾಡಿನ ಟೀಸರ್ ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ಯೂಟ್ಯೂಬ್ ನಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಪೂರ್ಣ ಹಾಡನ್ನು ಕೇಳಬಹುದಾಗಿದೆ.

ಇಂದ್ರಜಿತ್ ಲಂಕೇಶ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಸಮರ್ಜಿತ್ ಲಂಕೇಶ್ ಅವರಿಗೆ ಜೋಡಿಯಾಗಿ ಸಾನ್ಯಾ ಅಯ್ಯರ್ ಅಭಿನಯಿಸಿದ್ದು, ಮಾನಸಿ ಸುಧೀರ್, ಸಂಪತ್ ಮೈತ್ರಿಯ, ರಾಜೀವ್ ಪಿಲ್ಲೆ ಉಳಿದ ಪಾತ್ರವರ್ಗದಲ್ಲಿದ್ದಾರೆ. ಲಾಫಿಂಗ್ ಬುದ್ಧ ಫಿಲಂಸ್ ಬ್ಯಾನರ್ ನಲ್ಲಿ ಇಂದ್ರಜಿತ್ ಲಂಕೇಶ್ ನಿರ್ಮಾಣ ಮಾಡಿದ್ದಾರೆ. ರವಿವರ್ಮ ಮತ್ತು ಡಿಫ್ರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ, ಮಾಸ್ತಿ, ಮಧು ಮತ್ತು ರಾಜ್ಶೇಖರ್ ಸಂಭಾಷಣೆ, ಕೆ ಎಮ್ ಪ್ರಕಾಶ್ ಸಂಕಲನ, ಎಜೆ ಶೆಟ್ಟಿ ಛಾಯಾಗ್ರಾಣವಿದೆ. ಚಂದನ್ ಶೆಟ್ಟಿ, ಶಿವು ಬರ್ಗಿ ಮತ್ತು ಅನಿರುದ್ ಶಾಸ್ತ್ರಿ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular